ತಮಿಳುನಾಡಿನಲ್ಲಿ ಗಿಳಿ ಶಾಸ್ತ್ರವು ಕೂಡ ರಾಜಕೀಯವಾಗಿ ಭವಿಷ್ಯ ನುಡಿದಿದೆ. ಆದರೆ ಈ ಭವಿಷ್ಯ ನುಡಿದ ಬೆನ್ನಲ್ಲೇ ಆ ಗಿಳಿ ಮಾಲೀಕನನ್ನು ಸರ್ಕಾರವು ಬಂಧಿಸಿದೆ.
ಲೋಕಸಭಾ ಚುನಾವಣಾ ಅಕಾಡದಲ್ಲಿ ಸೋಲು- ಗೆಲುವಿನ ಲೆಕ್ಕಾಚಾರಗಳು ಜೋರಾಗಿದೆ. ಸಮೀಕ್ಷೆಗಳು ಯಾರಿಗೆ ಸೋಲು ಯಾರಿಗೆ ಜಯ ಎಂಬುದನ್ನು ಈಗಾಗಲೇ ತಿಳಿಸಿಕೊಟ್ಟಿವೆ. ಜ್ಯೋತಿಷಿಗಳು ಕೂಡ ಭವಿಷ್ಯವನ್ನು ನುಡಿಯುತ್ತಿದ್ದಾರೆ. ಇಷ್ಟೇ ಅಲ್ಲದೆ ತಮಿಳುನಾಡಿನಲ್ಲಿ ಗಿಳಿ ಶಾಸ್ತ್ರವು ಕೂಡ ರಾಜಕೀಯವಾಗಿ ಭವಿಷ್ಯ ನುಡಿದಿದೆ. ಆದರೆ ಈ ಭವಿಷ್ಯ ನುಡಿದ ಬೆನ್ನಲ್ಲೇ ಆ ಗಿಳಿ ಮಾಲೀಕನನ್ನು ಸರ್ಕಾರವು ಬಂಧಿಸಿದೆ.
ತಮಿಳುನಾಡಿನ ಕಡಲೂರಿನಲ್ಲಿ ಪಟ್ಟಾಲಿ ಮಕ್ಕಳ್ ಕಚ್ಚಿ ಅಭ್ಯರ್ಥಿ ನಿರ್ದೇಶಕ ತಂಗರಬಚ್ಚನ್ ಗೆಲುವು ಸಾಧಿಸಲಿದ್ದಾರೆ ಎಂದು ಗಿಣಿಶಾಸ್ತ್ರದ ಗಿಣಿ ಇತ್ತೀಚೆಗೆ ಭವಿಷ್ಯ ನುಡಿದಿತ್ತು. ಆದರೆ ಬುಧವಾರದ ವೇಳೆ ಈ ಗಿಳಿಗಳ ಮಾಲೀಕ ಸೆಲ್ವರಾಜ್ ಹಾಗೂ ಆತನ ಸಹೋದರ ಸೀನುವಾಸನ್ ಅವರನ್ನು ತಮಿಳುನಾಡು ಅರಣ್ಯ ಇಲಾಖೆ ಬಂಧಿಸಿದೆ. ಗಿಳಿಯನ್ನು ಅಕ್ರಮವಾಗಿ ಸೆರೆಯಲ್ಲಿಟ್ಟ ಕಾರಣಕ್ಕೆ ಬಂಧನ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.
ಇದರ ಬೆನ್ನಲ್ಲಿಯೆ NDA ಮೈತ್ರಿ ಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕಡಲೂರು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ನಿರ್ದೇಶಕ ತಂಗರಬಚ್ಚನ್ ಅವರು ಪಟ್ಟಾಲಿ ಪೀಪಲ್ಸ್ ಪಾರ್ಟಿಯ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಗಿಣಿ ಮರಿ ಹೇಳಿದ್ದನ್ನು ಸಹಿಸಲಾಗದೆ ಡಿಎಂಕೆ(DMK) ಸರ್ಕಾರ ಈ ಸೇಡಿನ ಕ್ರಮ ಕೈಗೊಂಡಿದೆ. ಇದು ಫ್ಯಾಸಿಸಂನ ಪರಮಾವಧಿಯಾಗಿರುವುದರಿಂದ ಈ ಕೃತ್ಯ ಖಂಡನೀಯ’ ಎಂದು ಪಿಎಂಕೆ ಅಧ್ಯಕ್ಷ ಮತ್ತು ರಾಜ್ಯಸಭಾ ಸಂಸದ ಡಾ. ಅನ್ಬುಮಣಿ ರಾಮದಾಸ್ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ಅಲ್ಲದೆ ವನ್ಯಜೀವಿ(ರಕ್ಷಣೆ) ಕಾಯಿದೆ, 1972 ರ ಅಡಿಯಲ್ಲಿ ಶೆಡ್ಯೂಲ್ II ಜಾತಿಗಳ ಅಡಿಯಲ್ಲಿ ಗಿಳಿಗಳನ್ನು ವರ್ಗೀಕರಿಸಲಾಗಿದೆ ಮತ್ತು ಪಕ್ಷಿಯನ್ನು ಸೆರೆಯಲ್ಲಿ ಇಡುವುದು ಅಪರಾಧ ಎಂದು ಕಡಲೂರು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಜೆ. ರಮೇಶ್ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಇನ್ನು ಎಚ್ಚರಿಕೆ ನೀಡಿ, ಗಿಣಿಗಳನ್ನು ವಶಕ್ಕೆ ಪಡೆದು ಮಾಲೀಕರನ್ನು ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296