ಅಂತ್ಯಸಂಸ್ಕಾರ ನಡೆಸಲು ದಲಿತರಿಗೆ ಸೂಕ್ತವಾದ ಸ್ಮಶಾನದ ವ್ಯವಸ್ಥೆ ಒದಗಿಸಬೇಕು ಎಂದು ಒತ್ತಾಯಿಸಿ ಹೆಚ್.ಡಿ.ಕೋಟೆ ಪಟ್ಟಣದ ಆಡಳಿತ ಸೌಧದ ಮುಂಭಾಗದಲ್ಲಿ ನಡೆಸಿದ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿತು.
ಹೆಚ್.ಡಿ.ಕೋಟೆ ತಾಲ್ಲೂಕಿನ ಆನೇಕ ಗ್ರಾಮಗಳಲ್ಲಿ ಸ್ಮಶಾನವಿಲ್ಲದೆ ಜನರು, ಸತ್ತ ವ್ಯಕ್ತಿಯ ಶವ ಸಂಸ್ಕಾರಮಾಡಲು ಪರದಾಡುತ್ತಿದ್ದಾರೆ. ದಲಿತರಿಗೆ ಸರಿಯಾದ ರೀತಿಯಲ್ಲಿ ಸ್ಮಶಾನವನ್ನು ಒದಗಿಸಿಕೊಡಬೇಕೆಂದು ತಾಲ್ಲೂಕು ಆಡಳಿತಕ್ಕೆ ಪ್ರತಿಭಟನಾಕಾರರು ಮನವಿ ಮಾಡಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕ ಕೋಟೆ ಬೆಟ್ಟಯ್ಯ, ನಾವು ಈ ಭೂಮಿಯ ಮೇಲೆ ಹುಟ್ಟಿದಾಗಿಂದ ಇದುವರೆಗೂ ಒಂದಲ್ಲ ಒಂದು ರೀತಿಯಲ್ಲಿ ಬದುಕಲು ಹೋರಾಟ ನಡೆಸುತ್ತಾ ಬಂದಿರುತ್ತೇವೆ, ನಾವು ಬದುಕನ್ನು ನಡೆಸಲು ನಮಗೆ ದೊರಕ ಬೇಕಾದ ಮೂಲಭೂತ ಸೌಕರ್ಯಗಳಿಗಾಗಿ ಹೋರಾಟ ಮಾಡಿದ್ದೇವೆ ಆದರೆ ಇಂದು ಸತ್ತಮೇಲೆ ನಮ್ಮನ್ನು ಊಳಲು ಜಾಗಕೊಡಿ ಎಂದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಬೆಟ್ಟಯ್ಯಕೋಟೆ, ಜಿಲ್ಲಾ ಪಂಚಾಯಿತಿ ಸದಸ್ಯ ಹೆಚ್.ಪಿ. ಮಂಜುನಾಥ್, ರೈತಮುಖಂಡ ಮಹದೇವನಾಯಕ, ಅಕ್ಬರ್ ಪಾಷ, ಮಲಾರ ಮಹದೇವು, ಪುಟ್ಟಯ್ಯ ಹ್ಯಾಂಡ್ ಪೋಸ್ಟ್, ಮಹದೇವಯ್ಯ, ಅಂಕಯ್ಯ, ಮುತ್ತುಉಯ್ಯಂಬಳ್ಲಿ, ಹೆಗ್ಗನೂರು ನಿಂಗರಾಜು, ಮಲಾರ ಮಹೇಶ್ ಹೊಮ್ಮರಗಳ್ಳಿ ಸಿದ್ದರಾಜು, ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು, ಮುಖಂಡರು ಪಾಲ್ಗೊಂಡಿದರು,
ವರದಿ: ಮಲಾರ ಮಹದೇವಸ್ವಾಮಿ


