ಅರಸೀಕೆರೆ: ಸರ್ಕಾರಿ ಪ್ರೌಢಶಾಲೆ ಅರಸೀಕೆರೆಯಲ್ಲಿ ಮಿನಿ ವಿಜ್ಞಾನ ಸಂಪನ್ಮೂಲ ಕೇಂದ್ರ ಅರಸೀಕೆರೆ ಮತ್ತು ಮಧುಗಿರಿ ವಿಜ್ಞಾನ ಕೇಂದ್ರ ರವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಆವಿಷ್ಕಾರ್ ಅಭಿಯಾನದ ಅಡಿಯಲ್ಲಿ ಶಾಲಾ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಅದ್ದೂರಿ ಯಾಗಿ 38 ನೇ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿರಾ ತಾಲೂಕಿನ ಸರ್ಕಾರಿ ಪ್ರೌಢಶಾಲೆ ದೊಡ್ಡಬಾಣಗೆರೆಯ ಸುಮಾರು 50 ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಎಸ್.ಆರ್.ಪಾಳ್ಯ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಾಗೂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಅರಸೀಕೆರೆಯ ವಿದ್ಯಾರ್ಥಿಗಳು ವಿಜ್ಞಾನ ವಸ್ತು ಪ್ರದರ್ಶನವನ್ನು ವೀಕ್ಷಿಸಿದ್ದು ವಿಶೇಷವಾಗಿತ್ತು.
ಮೊದಲಿಗೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಕಾರ್ಯಕ್ರಮವನ್ನು ವಿಜ್ಞಾನ ನೃತ್ಯದ ಮೂಲಕ ಪ್ರಾರಂಭಿಸಲಾಯಿತು. ನಂತರ ರಾಸಾಯನಿಕ ಊಸರವಳ್ಳಿ ಎಂಬ ಪ್ರಯೋಗದ ಮೂಲಕ ಹಾಗೂ ವಿದ್ಯಾರ್ಥಿಗಳಿಂದ ವೈಜ್ಞಾನಿಕವಾಗಿ ತೇಲುತ್ತಿರುವ ಬೆಂಕಿಯನ್ನು ತೋರಿಸುವ ಪ್ರಯೋಗವನ್ನು ವಿದ್ಯಾರ್ಥಿ ಗಳು ನಡೆಸಿ ಕೊಡುವ ಮೂಲಕ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕರಾದ ರಾಮಚಂದ್ರಪ್ಪ, ಕೆ.ಎಸ್.ಡಿ.ಎಂ.ಸಿ. ಅದ್ಯಕ್ಷರಾದ ಗುರುರಾಜ್, ಅಂತ್ಯೋದಯ ಸಂಸ್ಥೆಯ ಸಂಸ್ಥಾಪಕರಾದ ಬಿ.ಕೆ.ಮುನಿ ಸ್ವಾಮಿ , ಊರಿನ ವಿಜ್ಞಾನಾಸಕ್ತರಾದ ಪಿ.ದೊಡ್ಡಣ್ಣ ಮತ್ತು ತೀರ್ಪುಗಾರರಾಗಿ ಆಗಮಿಸಿದ ನಿವೃತ್ತ ಮುಖ್ಯೋಪಾದ್ಯಾಯರಾದ ಗಂಗಾಧರಪ್ಪಎಂ., ಆದರ್ಶ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿಯಾದ ರೂಪಕುಮಾರಿ ಮತ್ತು ಗುಜ್ಜನಡು ಪ್ರೌಢಶಾಲೆಯ ಮುಖ್ಯಶಿಕ್ಷಕರು ಮತ್ತು ವಿಜ್ಞಾನ ಶಿಕ್ಷಕರಾದ ಮಹೇಶ್ವರಪ್ಪ, ಸರ್ಕಾರಿ ಪ್ರೌಢಶಾಲೆ, ದೊಡ್ಡ ಬಾಣಗೆರೆಯ ವಿಜ್ಞಾನ ಶಿಕ್ಷಕರಾದ ಚನ್ನಬಸವರಾಜು, ವಿಶೇಷ ಶಿಕ್ಷಕರಾದ ರಾಮಣ್ಣ ಮತ್ತು ಸಿಬ್ಬಂದಿ ವರ್ಗದವರು , ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ರೇಣುಕರಾಜ್ G.H., ವಿಜ್ಞಾನ ದಿನಾಚರಣೆಯ ಮೂಲ ಉದ್ದೇಶ, ಗುರಿ ಮತ್ತು ಮಹತ್ವದ ಕುರಿತು ಸವಿಸ್ತಾರವಾಗಿ ಸರ್. ಸಿ.ವಿ. ರಾಮನ್ ರವರ ಸಾಧನೆಗಳ ಬಗ್ಗೆ ತಿಳಿಸಿದರು.
ಗಂಗಾಧರಪ್ಪ ಎಂ. ಮಾತನಾಡಿ, ವಿದ್ಯಾರ್ಥಿಗಳು ಆಸಕ್ತಿ, ಕುತೂಹಲದಿಂದ ವಿಜ್ಞಾನವನ್ನು ಓದಿ ಹೆಚ್ಚಿನ ಅಂಕಗಳಿಸಬೇಕೆಂದು ಕಿವಿ ಮಾತು ಹೇಳಿದರು. ವೈಜ್ಞಾನಿಕ ಮನೋಭಾವ ಬೆಳೆಸಿ ಕೊಳ್ಳುವಲ್ಲಿ ವಿದ್ಯಾರ್ಥಿ ಗಳು ಕಾರ್ಯೋನ್ಮುಖರಾಗಬೇಕೆಂದು ತಿಳಿಸಿದರು.
ಬಿ.ಕೆ.ಮುನಿಸ್ವಾಮಿ ಅವರು ಪರೀಕ್ಷಾ ಫಲಿತಾಂಶ ಸುಧಾರಣ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಲಾಯಿತು. ಶಾಲೆಯ ಸುಮಾರು 101 ವಿದ್ಯಾರ್ಥಿಗಳು ,ಎಸ್.ಆರ್.ಪಾಳ್ಯ ಶಾಲೆಯ ಸುಮಾರು 5 ವಿದ್ಯಾರ್ಥಿಗಳು ತಾವೇ ತಯಾರಿಸಿದ ವಿಜ್ಞಾನದ ಮಾದರಿಗಳನ್ನು ಪ್ರದರ್ಶನ ಮಾಡಿದರು.
8,9 ಮತ್ತು 10 ನೇ ತರಗತಿಯ ಸುಮಾರು 101 ವಿದ್ಯಾರ್ಥಿಗಳು ವಿಜ್ಞಾನದ ಮಾದರಿಗಳಾದ ರಾಕೆಟ್ ನ ಮಾದರಿ,ಡಿ.ಸಿ. ಮೋಟಾರು, ಏ.ಸಿ. ಮೋಟಾರ್, ಡೈನಮೋ, ಡ್ರಿಲ್ಲಿಂಗ್ ಮೆಷಿನ್, ಉಪಗ್ರಹ ಉಡಾವಣಾ ವಾಹನ ,ಸೌರವ್ಯೂಹದ ಮಾದರಿ, ನೀರು ಮತ್ತು ಗಾಳಿಯ ರಾಕೆಟ್, ಪರಿಸರ ಮಾಲಿನ್ಯದ ಮಾದರಿ, ಬೋಯಿಂಗ್ ಬೋಟ್, ಟ್ರಕ್ ಮಾದರಿ ,ವ್ಯಾಕ್ಯೂಮ್ ಕ್ಲೀನರ್ ನ ಮಾದರಿ ಹೀಗೆ ಅನೇಕ ಮಾದರಿಗಳನ್ನು ಪ್ರದರ್ಶಿಸಲಾಯಿತು.
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮತ್ತು ಭಾಷಣ ಸ್ಪರ್ಧೆ ಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಮೊಮೆಂಟೋ ಗಳನ್ನು ವಿತರಿಸಲಾಯಿತು.
ಹನುಮೇಶ್ ಸ್ವಾಗತಿಸಿದರು, ಮೋಹನ್ ಕುಮಾರ್ ನಿರೂಪಣೆ ಮಾಡಿದರು. ರಶ್ಮಿ.ಸಿ.ಎಸ್ ರವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಕುಮಾರ್, ವಿಮಲಾ.ಆರ್, ಮಾನಸ ಎನ್., ಮತ್ತು ಅಭಿಷೇಕ್ ಎಂ.ರವರು ಭಾಗವಹಿಸಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4