nammatumakuru

    Subscribe to Updates

    Get the latest creative news from FooBar about art, design and business.

    What's Hot

    ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರಾ ಗೌಡಗೆ ಬಿಗ್‌ ಶಾಕ್; ಪ್ರದೋಷ್‌ ಮಾಫಿ ಸಾಕ್ಷಿಯಾಗಲು ಕೋರ್ಟ್‌ ಅಸ್ತು!

    August 10, 2026

    ನೂತನ ಸಚಿವರಿಗೆ ಶೀಘ್ರವೇ ಖಾತೆ ಹಂಚಿಕೆ: ನಮ್ಮಲ್ಲಿ ಯಾವುದೇ ಗೊಂದಲವಿಲ್ಲ : ಡಿಸಿಎಂ ಜಿ. ಪರಮೇಶ್ವರ್

    August 10, 2026

    RSS–ಪಾಕ್ ಲಿಂಕ್ ಬಗ್ಗೆ ತನಿಖೆಯಾಗಲಿ: ಆರ್‌ ಎಸ್‌ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಬಿ.ಕೆ. ಹರಿಪ್ರಸಾದ್ ಆಕ್ರೋಶ

    August 10, 2026
    Facebook Twitter Instagram
    ಟ್ರೆಂಡಿಂಗ್
    • ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರಾ ಗೌಡಗೆ ಬಿಗ್‌ ಶಾಕ್; ಪ್ರದೋಷ್‌ ಮಾಫಿ ಸಾಕ್ಷಿಯಾಗಲು ಕೋರ್ಟ್‌ ಅಸ್ತು!
    • ನೂತನ ಸಚಿವರಿಗೆ ಶೀಘ್ರವೇ ಖಾತೆ ಹಂಚಿಕೆ: ನಮ್ಮಲ್ಲಿ ಯಾವುದೇ ಗೊಂದಲವಿಲ್ಲ : ಡಿಸಿಎಂ ಜಿ. ಪರಮೇಶ್ವರ್
    • RSS–ಪಾಕ್ ಲಿಂಕ್ ಬಗ್ಗೆ ತನಿಖೆಯಾಗಲಿ: ಆರ್‌ ಎಸ್‌ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಬಿ.ಕೆ. ಹರಿಪ್ರಸಾದ್ ಆಕ್ರೋಶ
    • ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟದ ಜಿಲ್ಲಾ ಸಮಾಲೋಚನಾ ಸಭೆ: ರೈತರ ಹಿತರಕ್ಷಣೆಗೆ ಮಹತ್ವದ ನಿರ್ಣಯ
    • ಸರಗೂರು: ಮಕ್ಕಳ ಉತ್ತಮ ಆರೋಗ್ಯಕ್ಕೆ ಜಂತುಹುಳು ನಿವಾರಣಾ ಮಾತ್ರೆ ಸೇವನೆ ಅತ್ಯಗತ್ಯ: ಡಾ. ಚಂದ್ರಶೇಖರ
    • ಸಾರ್ಥವಳ್ಳಿಯ ಗಂಗಾಧರ್ ಕುಟುಂಬಕ್ಕೆ ಆಸರೆಯಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
    • ಐಷಾರಾಮಿ ರೆಸ್ಟೋರೆಂಟ್‌ ಮೇಲೆ ದಾಳಿ:  ಕೊಳೆತ ಮಾಂಸ ಕಂಡು ಬೆಚ್ಚಿಬಿದ್ದ ಆಹಾರ ಸುರಕ್ಷತಾ ಅಧಿಕಾರಿಗಳು
    • ಚಿತ್ರದುರ್ಗ: ವಿದ್ಯುತ್ ಆಘಾತಕ್ಕೆ ನವಿಲು ಹಾಗೂ ಚಿರತೆ ದಾರುಣ ಸಾವು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸರ್ಕಾರಿ ಪ್ರೌಢಶಾಲೆ ಅರಸೀಕೆರೆ: 38ನೇ ರಾಷ್ಟ್ರೀಯ ವಿಜ್ಞಾನ ದಿನಾಚರಣೆ
    ಪಾವಗಡ February 23, 2025

    ಸರ್ಕಾರಿ ಪ್ರೌಢಶಾಲೆ ಅರಸೀಕೆರೆ: 38ನೇ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

    By adminFebruary 23, 2025No Comments2 Mins Read
    arasikere

    ಅರಸೀಕೆರೆ: ಸರ್ಕಾರಿ ಪ್ರೌಢಶಾಲೆ ಅರಸೀಕೆರೆಯಲ್ಲಿ ಮಿನಿ ವಿಜ್ಞಾನ ಸಂಪನ್ಮೂಲ ಕೇಂದ್ರ ಅರಸೀಕೆರೆ ಮತ್ತು ಮಧುಗಿರಿ ವಿಜ್ಞಾನ ಕೇಂದ್ರ ರವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಆವಿಷ್ಕಾರ್ ಅಭಿಯಾನದ ಅಡಿಯಲ್ಲಿ ಶಾಲಾ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಅದ್ದೂರಿ ಯಾಗಿ 38 ನೇ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು.

    ಕಾರ್ಯಕ್ರಮದಲ್ಲಿ ಶಿರಾ ತಾಲೂಕಿನ ಸರ್ಕಾರಿ ಪ್ರೌಢಶಾಲೆ ದೊಡ್ಡಬಾಣಗೆರೆಯ ಸುಮಾರು 50 ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಎಸ್.ಆರ್.ಪಾಳ್ಯ  ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಾಗೂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಅರಸೀಕೆರೆಯ ವಿದ್ಯಾರ್ಥಿಗಳು ವಿಜ್ಞಾನ ವಸ್ತು ಪ್ರದರ್ಶನವನ್ನು ವೀಕ್ಷಿಸಿದ್ದು ವಿಶೇಷವಾಗಿತ್ತು.

    ಮೊದಲಿಗೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಕಾರ್ಯಕ್ರಮವನ್ನು ವಿಜ್ಞಾನ ನೃತ್ಯದ ಮೂಲಕ ಪ್ರಾರಂಭಿಸಲಾಯಿತು.  ನಂತರ ರಾಸಾಯನಿಕ ಊಸರವಳ್ಳಿ  ಎಂಬ ಪ್ರಯೋಗದ ಮೂಲಕ ಹಾಗೂ ವಿದ್ಯಾರ್ಥಿಗಳಿಂದ ವೈಜ್ಞಾನಿಕವಾಗಿ ತೇಲುತ್ತಿರುವ ಬೆಂಕಿಯನ್ನು ತೋರಿಸುವ ಪ್ರಯೋಗವನ್ನು ವಿದ್ಯಾರ್ಥಿ ಗಳು ನಡೆಸಿ ಕೊಡುವ ಮೂಲಕ ಉದ್ಘಾಟಿಸಲಾಯಿತು.

    ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕರಾದ  ರಾಮಚಂದ್ರಪ್ಪ,  ಕೆ.ಎಸ್.ಡಿ.ಎಂ.ಸಿ. ಅದ್ಯಕ್ಷರಾದ ಗುರುರಾಜ್,  ಅಂತ್ಯೋದಯ ಸಂಸ್ಥೆಯ ಸಂಸ್ಥಾಪಕರಾದ ಬಿ.ಕೆ.ಮುನಿ ಸ್ವಾಮಿ , ಊರಿನ ವಿಜ್ಞಾನಾಸಕ್ತರಾದ ಪಿ.ದೊಡ್ಡಣ್ಣ ಮತ್ತು  ತೀರ್ಪುಗಾರರಾಗಿ ಆಗಮಿಸಿದ  ನಿವೃತ್ತ ಮುಖ್ಯೋಪಾದ್ಯಾಯರಾದ ಗಂಗಾಧರಪ್ಪಎಂ., ಆದರ್ಶ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿಯಾದ ರೂಪಕುಮಾರಿ ಮತ್ತು ಗುಜ್ಜನಡು ಪ್ರೌಢಶಾಲೆಯ ಮುಖ್ಯಶಿಕ್ಷಕರು ಮತ್ತು ವಿಜ್ಞಾನ ಶಿಕ್ಷಕರಾದ ಮಹೇಶ್ವರಪ್ಪ, ಸರ್ಕಾರಿ ಪ್ರೌಢಶಾಲೆ, ದೊಡ್ಡ ಬಾಣಗೆರೆಯ ವಿಜ್ಞಾನ ಶಿಕ್ಷಕರಾದ ಚನ್ನಬಸವರಾಜು, ವಿಶೇಷ ಶಿಕ್ಷಕರಾದ ರಾಮಣ್ಣ ಮತ್ತು ಸಿಬ್ಬಂದಿ ವರ್ಗದವರು , ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ರೇಣುಕರಾಜ್  G.H.,  ವಿಜ್ಞಾನ ದಿನಾಚರಣೆಯ ಮೂಲ ಉದ್ದೇಶ, ಗುರಿ ಮತ್ತು ಮಹತ್ವದ ಕುರಿತು ಸವಿಸ್ತಾರವಾಗಿ ಸರ್. ಸಿ.ವಿ. ರಾಮನ್ ರವರ ಸಾಧನೆಗಳ ಬಗ್ಗೆ ತಿಳಿಸಿದರು.

    ಗಂಗಾಧರಪ್ಪ ಎಂ. ಮಾತನಾಡಿ, ವಿದ್ಯಾರ್ಥಿಗಳು ಆಸಕ್ತಿ, ಕುತೂಹಲದಿಂದ ವಿಜ್ಞಾನವನ್ನು ಓದಿ ಹೆಚ್ಚಿನ ಅಂಕಗಳಿಸಬೇಕೆಂದು ಕಿವಿ ಮಾತು ಹೇಳಿದರು. ವೈಜ್ಞಾನಿಕ ಮನೋಭಾವ ಬೆಳೆಸಿ ಕೊಳ್ಳುವಲ್ಲಿ ವಿದ್ಯಾರ್ಥಿ ಗಳು ಕಾರ್ಯೋನ್ಮುಖರಾಗಬೇಕೆಂದು ತಿಳಿಸಿದರು.

    ಬಿ.ಕೆ.ಮುನಿಸ್ವಾಮಿ ಅವರು ಪರೀಕ್ಷಾ ಫಲಿತಾಂಶ ಸುಧಾರಣ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

    ಇದೇ ಸಂದರ್ಭದಲ್ಲಿ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಲಾಯಿತು.  ಶಾಲೆಯ ಸುಮಾರು 101 ವಿದ್ಯಾರ್ಥಿಗಳು ,ಎಸ್.ಆರ್.ಪಾಳ್ಯ ಶಾಲೆಯ ಸುಮಾರು 5 ವಿದ್ಯಾರ್ಥಿಗಳು ತಾವೇ ತಯಾರಿಸಿದ ವಿಜ್ಞಾನದ ಮಾದರಿಗಳನ್ನು ಪ್ರದರ್ಶನ ಮಾಡಿದರು.

    8,9 ಮತ್ತು 10 ನೇ ತರಗತಿಯ  ಸುಮಾರು 101 ವಿದ್ಯಾರ್ಥಿಗಳು ವಿಜ್ಞಾನದ ಮಾದರಿಗಳಾದ ರಾಕೆಟ್‌ ನ ಮಾದರಿ,ಡಿ.ಸಿ. ಮೋಟಾರು, ಏ.ಸಿ. ಮೋಟಾರ್, ಡೈನಮೋ, ಡ್ರಿಲ್ಲಿಂಗ್ ಮೆಷಿನ್, ಉಪಗ್ರಹ ಉಡಾವಣಾ ವಾಹನ ,ಸೌರವ್ಯೂಹದ ಮಾದರಿ, ನೀರು ಮತ್ತು ಗಾಳಿಯ ರಾಕೆಟ್, ಪರಿಸರ ಮಾಲಿನ್ಯದ ಮಾದರಿ, ಬೋಯಿಂಗ್ ಬೋಟ್, ಟ್ರಕ್ ಮಾದರಿ ,ವ್ಯಾಕ್ಯೂಮ್ ಕ್ಲೀನರ್ ನ ಮಾದರಿ ಹೀಗೆ ಅನೇಕ ಮಾದರಿಗಳನ್ನು ಪ್ರದರ್ಶಿಸಲಾಯಿತು.

    ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮತ್ತು ಭಾಷಣ ಸ್ಪರ್ಧೆ ಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಮೊಮೆಂಟೋ ಗಳನ್ನು ವಿತರಿಸಲಾಯಿತು.

    ಹನುಮೇಶ್ ಸ್ವಾಗತಿಸಿದರು, ಮೋಹನ್ ಕುಮಾರ್  ನಿರೂಪಣೆ ಮಾಡಿದರು. ರಶ್ಮಿ.ಸಿ.ಎಸ್ ರವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಕುಮಾರ್, ವಿಮಲಾ.ಆರ್, ಮಾನಸ ಎನ್., ಮತ್ತು ಅಭಿಷೇಕ್ ಎಂ.ರವರು ಭಾಗವಹಿಸಿದ್ದರು.

    ವರದಿ: ನಂದೀಶ್ ನಾಯ್ಕ, ಪಾವಗಡ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

    admin
    • Website

    Related Posts

    ಗೃಹಲಕ್ಷ್ಮಿ, ಯುವನಿಧಿ: 323 ಕೋಟಿ ರೂ. ಬಿಡುಗಡೆ

    August 1, 2026

    ಪಾವಗಡ: ವಸತಿ ಶಾಲೆಯಿಂದ ಓಡಿ ಹೋಗಿದ್ದ ವಿದ್ಯಾರ್ಥಿಗಳು ಪತ್ತೆ

    July 31, 2026

    ಪಳವಳ್ಳಿ ವಸತಿ ಶಾಲೆಯ 3 ಮಕ್ಕಳ ನಾಪತ್ತೆ: ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯದ ಗಂಭೀರ ಆರೋಪ

    July 30, 2026

    Comments are closed.

    Our Picks

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026

    36 ಕೋಟಿ ರೂಪಾಯಿಯಿಂದ 180 ಕೋಟಿ ರೂ.ಗೆ  ಹೆಚ್ಚಳವಾದ ಪ್ರಧಾನಿ ಮೋದಿ ವಿದೇಶ ಪ್ರವಾಸ ಖರ್ಚು ವೆಚ್ಚ!

    August 8, 2026

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರಾ ಗೌಡಗೆ ಬಿಗ್‌ ಶಾಕ್; ಪ್ರದೋಷ್‌ ಮಾಫಿ ಸಾಕ್ಷಿಯಾಗಲು ಕೋರ್ಟ್‌ ಅಸ್ತು!

    August 10, 2026

    ಬೆಂಗಳೂರು:  ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಹಾಗೂ ಅವರ ಗೆಳತಿ ಪವಿತ್ರಾ ಗೌಡ ಅವರಿಗೆ ಭಾರೀ ಕಾನೂನು…

    ನೂತನ ಸಚಿವರಿಗೆ ಶೀಘ್ರವೇ ಖಾತೆ ಹಂಚಿಕೆ: ನಮ್ಮಲ್ಲಿ ಯಾವುದೇ ಗೊಂದಲವಿಲ್ಲ : ಡಿಸಿಎಂ ಜಿ. ಪರಮೇಶ್ವರ್

    August 10, 2026

    RSS–ಪಾಕ್ ಲಿಂಕ್ ಬಗ್ಗೆ ತನಿಖೆಯಾಗಲಿ: ಆರ್‌ ಎಸ್‌ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಬಿ.ಕೆ. ಹರಿಪ್ರಸಾದ್ ಆಕ್ರೋಶ

    August 10, 2026

    ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟದ ಜಿಲ್ಲಾ ಸಮಾಲೋಚನಾ ಸಭೆ: ರೈತರ ಹಿತರಕ್ಷಣೆಗೆ ಮಹತ್ವದ ನಿರ್ಣಯ

    August 10, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.