nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆಗೆ ಒತ್ತಾಯ

    September 5, 2026

    ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿಯ ಬಂಧನ, ಸಾರ್ವಜನಿಕರಿಂದ ಧರ್ಮದೇಟು

    September 5, 2026

    ಸ್ಪೋಟಕ ವರದಿ: ಹೊಳೆನರಸೀಪುರದಲ್ಲಿ ‘ರಸ್ತೆ ಬಂದ್’ ರಾಜಕೀಯ — ಜೆಡಿಎಸ್ ಸಾಮ್ರಾಜ್ಯಕ್ಕೆ ಸ್ವಯಂಕೃತ ಕಂಠಕ!

    September 5, 2026
    Facebook Twitter Instagram
    ಟ್ರೆಂಡಿಂಗ್
    • ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆಗೆ ಒತ್ತಾಯ
    • ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿಯ ಬಂಧನ, ಸಾರ್ವಜನಿಕರಿಂದ ಧರ್ಮದೇಟು
    • ಸ್ಪೋಟಕ ವರದಿ: ಹೊಳೆನರಸೀಪುರದಲ್ಲಿ ‘ರಸ್ತೆ ಬಂದ್’ ರಾಜಕೀಯ — ಜೆಡಿಎಸ್ ಸಾಮ್ರಾಜ್ಯಕ್ಕೆ ಸ್ವಯಂಕೃತ ಕಂಠಕ!
    • ಬೀದರ್: 40 ವರ್ಷಗಳ ಬಳಿಕ ಬೆಳಕುಣಿ (ಚೌದ್ರಿ) ಗ್ರಾಮದಲ್ಲಿ ಆರಂಭವಾಯಿತು ಅಭಿವೃದ್ಧಿ ಕಾಮಗಾರಿ; ಪಿಡಿಒ ಕಾರ್ಯಕ್ಕೆ ಶ್ಲಾಘನೆ
    • ಶ್ರೀ ಕರಿಯಮ್ಮ ದೇವಿ–ಶ್ರೀ ಬನಶಂಕರಿ ದೇವಿಯ ನೂತನ ದೇವಾಲಯ ಪ್ರವೇಶ ಮತ್ತು ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ
    • ತುಮಕೂರು: ಪ್ರಜಾ ಸೇವಾ ಆಂದೋಲನಕ್ಕೆ ಸಿದ್ಧತೆ:  ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ರಿಂದ ಪರಿಶೀಲನೆ
    • ತುಮಕೂರು: ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
    • ತುಮಕೂರು:  ಶಿಕ್ಷಕ ಪ್ರಶಸ್ತಿ ಆಯ್ಕೆ ಪಟ್ಟಿ ಪ್ರಕಟ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟದ ಜಿಲ್ಲಾ ಸಮಾಲೋಚನಾ ಸಭೆ: ರೈತರ ಹಿತರಕ್ಷಣೆಗೆ ಮಹತ್ವದ ನಿರ್ಣಯ
    ಜಿಲ್ಲಾ ಸುದ್ದಿ August 10, 2026

    ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟದ ಜಿಲ್ಲಾ ಸಮಾಲೋಚನಾ ಸಭೆ: ರೈತರ ಹಿತರಕ್ಷಣೆಗೆ ಮಹತ್ವದ ನಿರ್ಣಯ

    By Ganesh TumkuruAugust 10, 2026No Comments2 Mins Read

    ಬೆಳ್ತಂಗಡಿ: ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮಟ್ಟದ ಕೋಳಿ ಸಾಕಾಣಿಕೆ ರೈತರ ಸಮಾಲೋಚನಾ ಸಭೆಯು ಬೆಳ್ತಂಗಡಿಯಲ್ಲಿ ಯಶಸ್ವಿಯಾಗಿ ಜರುಗಿತು. ಒಕ್ಕೂಟದ ಅಧ್ಯಕ್ಷರಾದ ಶ್ರೀ ಸಯ್ಯದ್ ಹಸನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ, ಪ್ರಧಾನ ಕಾರ್ಯದರ್ಶಿ ಅಶ್ವಿನ್ ಕುಮಾರ್ ಬಿ.ಕೆ. ಅವರು ಎಲ್ಲರನ್ನೂ ಸ್ವಾಗತಿಸಿದರು. ಅಧ್ಯಕ್ಷರು ಒಕ್ಕೂಟದ ಮುಂದಿನ ಕಾರ್ಯ ಯೋಜನೆಗಳನ್ನು ವಿವರಿಸಿದ ಬಳಿಕ ನಡೆದ ಮುಕ್ತ ಚರ್ಚೆಯಲ್ಲಿ, ಕೋಳಿ ಸಾಕಾಣಿಕೆ ರೈತರು ಎದುರಿಸುತ್ತಿರುವ ವಿವಿಧ ಜ್ವಲಂತ ಸಮಸ್ಯೆಗಳು ಹಾಗೂ ಕಂಪನಿಗಳ ಧೋರಣೆಯ ಕುರಿತು ಸುದೀರ್ಘವಾಗಿ ಚರ್ಚಿಸಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.

    ಒಕ್ಕೂಟದ ಕಾರ್ಯಚಟುವಟಿಕೆಗಳನ್ನು ಹೆಚ್ಚು ವ್ಯವಸ್ಥಿತವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಸೂಕ್ತ ಸ್ಥಳದಲ್ಲಿ ಸ್ವಂತ ಕಚೇರಿಯನ್ನು ಪ್ರಾರಂಭಿಸಲು ತೀರ್ಮಾನಿಸಲಾಯಿತು. ಹಾಗೆಯೇ ಎಲ್ಲಾ ಕಂಪನಿಗಳು ಕನಿಷ್ಠ ಜಿ.ಸಿ. ದರವನ್ನು 10 ರೂಪಾಯಿಗಳಿಗೆ ಏರಿಕೆ ಮಾಡುವಂತೆ ಆಗ್ರಹಿಸಲು ನಿರ್ಧರಿಸಲಾಯಿತು. ಕೋಳಿ ಲಿಫ್ಟಿಂಗ್‌ ಗೆ ಕಂಪನಿಗಳು ನೀಡುವ ಲೇಬರ್ ದರ ತೀರಾ ಕಡಿಮೆಯಿರುವುದರಿಂದ ರೈತರೇ ಸ್ವಂತ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ ಹಾಗೂ ಹಂತ-ಹಂತವಾಗಿ ಲಿಫ್ಟ್ ಮಾಡುವುದರಿಂದ ರೈತರಿಗೆ ಭಾರಿ ನಷ್ಟ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಂಪನಿಗಳೇ ಲಿಫ್ಟಿಂಗ್‌ಗೆ ಕಾರ್ಮಿಕರನ್ನು ಒದಗಿಸಬೇಕು ಮತ್ತು ಲಿಫ್ಟಿಂಗ್ ವೆಚ್ಚವನ್ನು ರೈತರ ಮೇಲೆ ಹಾಕಬಾರದು ಎಂದು ಕಂಪನಿಗಳೊಂದಿಗೆ ಗಂಭೀರ ಮಾತುಕತೆ ನಡೆಸಲು ತೀರ್ಮಾನಿಸಲಾಯಿತು.

    ಇದಲ್ಲದೆ, ಫೀಡಿನಲ್ಲಿ ನೊಣ ನಿಯಂತ್ರಣ ಔಷಧ ಬೆರೆಸದ ಕಂಪನಿಗಳ ನಿರ್ಲಕ್ಷ್ಯದಿಂದಾಗಿ ನೊಣದ ಬಾಧೆ ಹೆಚ್ಚಾಗಿ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಆದರೆ ಸಮಸ್ಯೆ ನಿಯಂತ್ರಿಸಬೇಕಾದ ಕಂಪನಿಗಳು ತಮ್ಮ ತಪ್ಪನ್ನು ಒಪ್ಪಿಕೊಳ್ಳದೆ ರೈತರ ಮೇಲೆ ಗೂಬೆ ಕೂರಿಸಿ ಕೋಳಿ ಸಾಕಾಣಿಕೆಯನ್ನು ಸ್ಥಗಿತಗೊಳಿಸುತ್ತಿರುವುದನ್ನು ಒಕ್ಕೂಟವು ತೀವ್ರವಾಗಿ ಖಂಡಿಸಿದ್ದು, ಇದರ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಕರೆ ನೀಡಿದೆ. ನೊಣ ನಿಯಂತ್ರಣ ಔಷಧದ ವೆಚ್ಚವನ್ನು ರೈತರ ಮೇಲೆ ಹೊರಿಸದೆ, ಕಂಪನಿಗಳೇ ಫೀಡಿನಲ್ಲಿ ಔಷಧ ಬೆರೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು. ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಲ್ಲಾ ಕಂಪನಿಗಳಿಗೆ, ಕ್ಷೇತ್ರದ ಶಾಸಕರಿಗೆ ಹಾಗೂ ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.

    ಸಂಘಟನೆಯನ್ನು ಬಲಪಡಿಸಲು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಎಲ್ಲಾ ತಾಲೂಕುಗಳಲ್ಲಿ ತಾಲೂಕು ಮಟ್ಟದ ಘಟಕಗಳನ್ನು ರಚಿಸಲು ತೀರ್ಮಾನಿಸಲಾಯಿತು. ಇದಕ್ಕಾಗಿ ಕಡಬ ತಾಲೂಕಿನ ಜವಾಬ್ದಾರಿಯನ್ನು ಸೂರ್ಯನಾರಾಯಣ ಭಟ್, ಮೂಡುಬಿದಿರೆ ತಾಲೂಕನ್ನು ಪ್ರದೀಪ್ ಕುಮಾರ್, ಪುತ್ತೂರು ತಾಲೂಕನ್ನು ರವೀಂದ್ರ ಕಾಂಚನ ಹಾಗೂ ಬಂಟ್ವಳ ತಾಲೂಕನ್ನು ಧರ್ಮಪ್ಪ ಒಗ್ಗ ಅವರಿಗೆ ವಹಿಸಲಾಯಿತು.

    ಇದೇ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಘಟಕವನ್ನು ನೂತನವಾಗಿ ರಚಿಸಲಾಗಿದ್ದು, ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಸುದರ್ಶನ್ ಶೆಟ್ಟಿ ಸಿದ್ದಕಟ್ಟೆ, ಉಪಾಧ್ಯಕ್ಷರಾಗಿ ರಕ್ಷಿತ್ ಹಾಗೂ ವೆಲೇರಿಯನ್ ನಡ, ಕಾರ್ಯದರ್ಶಿಯಾಗಿ ಪುಷ್ಪಕರ ಗೌಡ ಪೆರಿಯಡ್ಕ, ಜೊತೆ ಕಾರ್ಯದರ್ಶಿಗಳಾಗಿ ಮಹಮದ್ ಅಮೀನ್ ಹಾಗೂ ಅಭಿನಂದನ್ ಪಟ್ರಮೆ, ಕೋಶಾಧಿಕಾರಿಯಾಗಿ ಗಿರೀಶ್ ಪುತ್ತಿಲ, ಸಂಘಟನಾ ಕಾರ್ಯದರ್ಶಿಗಳಾಗಿ ಯೋಗೀಶ್ ಉಜಿರೆ ಹಾಗೂ ತಾರಾನಾಥ ಗೌಡ ಕೊಯ್ಯೂರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಲಕ್ಷ್ಮಣ್ ಬಂಗೇರ ಅವರು ಆಯ್ಕೆಯಾದರು. ನೂತನ ಅಧ್ಯಕ್ಷರು ತಮ್ಮ ಮುಂದಿನ ಕಾರ್ಯಕ್ರಮಗಳ ರೂಪುರೇಷೆಯನ್ನು ಸಭೆಯ ಮುಂದಿಟ್ಟರು. ಅಂತಿಮವಾಗಿ ಕೇಂದ್ರ ಸಮಿತಿಯ ಜೊತೆ ಕಾರ್ಯದರ್ಶಿ ಜಯರಾಮ್ ಶೆಟ್ಟಿ ಅವರ ವಂದನಾರ್ಪಣೆಯೊಂದಿಗೆ ಸಭೆಯು ಯಶಸ್ವಿಯಾಗಿ ಮುಕ್ತಾಯಗೊಂಡಿತು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಸ್ಪೋಟಕ ವರದಿ: ಹೊಳೆನರಸೀಪುರದಲ್ಲಿ ‘ರಸ್ತೆ ಬಂದ್’ ರಾಜಕೀಯ — ಜೆಡಿಎಸ್ ಸಾಮ್ರಾಜ್ಯಕ್ಕೆ ಸ್ವಯಂಕೃತ ಕಂಠಕ!

    September 5, 2026

    ಬೀದರ್: 40 ವರ್ಷಗಳ ಬಳಿಕ ಬೆಳಕುಣಿ (ಚೌದ್ರಿ) ಗ್ರಾಮದಲ್ಲಿ ಆರಂಭವಾಯಿತು ಅಭಿವೃದ್ಧಿ ಕಾಮಗಾರಿ; ಪಿಡಿಒ ಕಾರ್ಯಕ್ಕೆ ಶ್ಲಾಘನೆ

    September 5, 2026

    ಶ್ರೀ ಕರಿಯಮ್ಮ ದೇವಿ–ಶ್ರೀ ಬನಶಂಕರಿ ದೇವಿಯ ನೂತನ ದೇವಾಲಯ ಪ್ರವೇಶ ಮತ್ತು ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ

    September 5, 2026

    Leave A Reply Cancel Reply

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆಗೆ ಒತ್ತಾಯ

    September 5, 2026

    ತುಮಕೂರು: ಸುಪ್ರೀಂ ಕೋರ್ಟ್ ಆದೇಶಂತೆ ನಗರಪಾಲಿಕೆ ಅಧಿಕಾರಿಗಳು ನಗರದಲ್ಲೇ ಫುಟ್‌ ಪಾತ್ ಅಂಗಡಿಗಳನ್ನು ತೆರವು ಮಾಡಿಸಿದ್ದಾರೆ. ಈ ಕ್ರಮದಿಂದ ನಗರದ…

    ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿಯ ಬಂಧನ, ಸಾರ್ವಜನಿಕರಿಂದ ಧರ್ಮದೇಟು

    September 5, 2026

    ಸ್ಪೋಟಕ ವರದಿ: ಹೊಳೆನರಸೀಪುರದಲ್ಲಿ ‘ರಸ್ತೆ ಬಂದ್’ ರಾಜಕೀಯ — ಜೆಡಿಎಸ್ ಸಾಮ್ರಾಜ್ಯಕ್ಕೆ ಸ್ವಯಂಕೃತ ಕಂಠಕ!

    September 5, 2026

    ಬೀದರ್: 40 ವರ್ಷಗಳ ಬಳಿಕ ಬೆಳಕುಣಿ (ಚೌದ್ರಿ) ಗ್ರಾಮದಲ್ಲಿ ಆರಂಭವಾಯಿತು ಅಭಿವೃದ್ಧಿ ಕಾಮಗಾರಿ; ಪಿಡಿಒ ಕಾರ್ಯಕ್ಕೆ ಶ್ಲಾಘನೆ

    September 5, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.