ತಿಪಟೂರು: ಕಲೆ ಹಾಗೂ ಶಿಕ್ಷಣಕ್ಕೆ ತವರೂರಾಗಿರುವ ತಿಪಟೂರಿನ, ಭೋವಿ ಕಾಲೋನಿ, ಗಾಂಧಿನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 1972 ರಲ್ಲಿ ಪ್ರಾರಂಭ ಗೊಂಡು ಐವತ್ತು ವಸಂತಗಳನ್ನು ಪೂರೈಸಿದ್ದು, ಫೆಬ್ರವರಿ 2024 ರಂದುಸುವರ್ಣ ಮಹೋತ್ಸವದ ಜೊತೆಗೆ ಶಾಲಾ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು .
“ವಿಶ್ವ ಗುರು ಬಸವಣ್ಣ ಸಾಂಸ್ಕೃತಿಕ ನಾಯಕ” ಎಂಬ ಘೋಷವಾಕ್ಯ ಮೊಳಗಿಸಿ ಭಾವಚಿತ್ರಕ್ಕೆ ಮಾಲಾರ್ಪಣೆ ಪುಷ್ಪ ನಮನ ಸಲ್ಲಿಸಿ, ಜ್ಯೋತಿ ಬೆಳಗುವುದರ ಮೂಲಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ತಾಲ್ಲೂಕಿನ ಜನಪ್ರಿಯ ಶಾಸಕರಾದ ಕೆ. ಷಡಕ್ಷರಿ, ಮಕ್ಕಳ ಸರ್ವತೋಮಖ ಬೆಳವಣಿಗೆಗೆ ಸಹ ಪಠ್ಯ ಚಟುವಟಿಕೆಗಳು ಸಹಾಯಕವಾಗಿವೆ ಎಂದರು.
ಶಾಲೆಯು ಸುವರ್ಣ ಮಹೋತ್ಸವ ಹಾಗೂ ಶಾಲಾ ವಾರ್ಷಿಕೋತ್ಸವದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಹೊಸದಾಗಿ ನಮ್ಮ ತಾಲ್ಲೂಕಿಗೆ ನೇಮಕಗೊಂಡ ಶಿಕ್ಷಕರಿಗೆ ಸ್ವಾಗತ, ತಾಲ್ಲೂಕಿನ ಶಿಕ್ಷಕರಿಗೆ ಗುರುವಂದನೆಯನ್ನು ಹಮ್ಮಿಕೊoಡಿರುವುದು ಸಂತಸ ತಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸುವ ಭಾಗ್ಯವನ್ನು ನನಗೆ ನೀಡಿದ ಈ ಶಾಲೆ ಉತ್ತುಂಗ ಸ್ಥಿತಿ ತಲುಪಲಿ. ಇಲ್ಲಿನ ಕ್ರಿಯಾಶೀಲ ಶಿಕ್ಷಕರ ಶ್ರಮ ಸಾಥ೯ಕವಾಗಿದೆ ಎಂದು ಶಾಸಕರು ಶುಭ ಹಾರೈಸಿದರು .
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ. ಚಂದ್ರಯ್ಯ ಮಾತನಾಡಿ, ಈ ಶಾಲೆಯು ಮಕ್ಕಳಿಗೆ ಅಗತ್ಯವಾಗಿ ಬೇಕಾದಂತದ ಎಲ್ಲ ಮೂಲಸೌಕರ್ಯಗಳನ್ನು ಒಳಗೊಂಡಿದೆ, ಇಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದ ವಿಭಾಗಗಳಿದ್ದು ಮಕ್ಕಳ ಕಲಿಕೆಗೆ ಅಗತ್ಯವಿರುವ ಕಂಪ್ಯೂಟರ್, ಆಟೋಪಕರಣಗಳು, ಕ್ರೀಡೋಪಕರಣಗಳು, ಹಾಗೂ ಚಟುವಟಿಕೆಯುಕ್ತ ಬೋಧನೆಯನ್ನು ಮಾಡುವ ನುರಿತ ಶಿಕ್ಷಕರನ್ನು ಒಳಗೊಂಡಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮಕ್ಕಳನ್ನು ದಾಖಲಿಸಬೇಕೆಂದು ಪೋಷಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಮೊಹಮ್ಮದ್ ಗೌಸ್ , ಎಸ್ ಡಿ ಎಂ ಸಿ ಅಧ್ಯಕ್ಷರಾದ ನಿಶಾ ಬಾನು, ಮುಖ್ಯ ಶಿಕ್ಷಕರಾದ ಎಂ. ಎಂ. ಮಂಜಪ್ಪ, ಶ್ರೀ ನಂದೀಶ್, ಲಿಂಗರಾಜು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೆ.ಪಟ್ಟಾಭಿರಾಮು, ಗೌರವಾಧ್ಯಕ್ಷರಾದ ಹೆಚ್.ಸಿ. ಓಂಕಾರ್ ಮೂರ್ತಿ, ಉಪಾಧ್ಯಕ್ಷರಾದ ಸಿ. ಎಂ. ಸುಮಾ, ಖಜಾಂಚಿಗಳಾದ ಎಸ್. ಎಸ್. ಮಮತಾ, ಸಹಕಾರ್ಯದರ್ಶಿಗಳಾದ ಸಿ. ಎಸ್. ನಾಗರಾಜು , ಸಾವಿತ್ರಮ್ಮ, ಗುರು ವಂದನೆಯನ್ನು ಸ್ವೀಕರಿಸಿದ ಹಲವು ಶಿಕ್ಷಕರು , ಅಪಾರ ಸಂಖ್ಯೆಯ ಪೋಷಕ ವರ್ಗದವರು ಹಾಗೂ ಶಾಲಾ ಶಿಕ್ಷಕರು ಹಾಜರಿದ್ದರು.
ಕಾರ್ಯಕ್ರಮದಲ್ಲಿದ್ದ ಸರ್ವರನ್ನು ಮುಖ್ಯ ಶಿಕ್ಷಕರಾದ ಎಂ.ಎಂ.ಮಂಜಪ್ಪ ಸ್ವಾಗತಿಸಿದರು, ನಿರೂಪಣೆಯನ್ನು ಶಿಕ್ಷಕರಾದ ಸಿದ್ದೇಶ್ವರ ಮತ್ತು ಸುರೇಶ್ ನಡೆಸಿಕೊಟ್ಟರು ಶಾಲಾ ವರದಿಯನ್ನು ಆರ್. ನಾಗವೇಣಿ ವಾಚಿಸಿದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಛಾಯಾ ಹಾಗೂ ಪ್ರತಿಭಾ ನಿರ್ವಹಿಸಿದರು. ಬಹುಮಾನ ವಿತರಣೆಯನ್ನು ಸುಧಾಮಣಿ ನಡೆಸಿಕೊಟ್ಟರು. ಚಿದಾನಂದ್ ವಂದಿಸಿದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296