ಮಧುಗಿರಿ: ಮಧುಗಿರಿ ತಾಲ್ಲೂಕಿನ ನೇರಳೇಕೆರೆ ಗ್ರಾ.ಪಂ.ವ್ಯಾಪ್ತಿಯ ವೀರಾಪುರ ಮತ್ತು ಅಕ್ಕ-ಪಕ್ಕದ ಗ್ರಾಮಗಳಿಗೆ ಯಾವುದಾದರೂ ಮೂಲಕಗಳಿಂದ ನೀರನ್ನು ಒದಗಿಸಬೇಕೆಂದು ಒತ್ತಾಯಿಸಿ ನೇರಳೇಕೆರೆ ಗ್ರಾ.ಪಂ.ಅಧ್ಯಕ್ಷರಾದ ನಾಗಲಕ್ಷ್ಮೀ ನೇತೃತ್ವದಲ್ಲಿ ಗ್ರಾಮಸ್ಥರುಗಳು, ಮುಖಂಡರುಗಳು ಕಾವೇರಿ ನೀರಾವರಿ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್ ರವರಿಗೆ ಮನವಿ ಪತ್ರ ಅರ್ಪಿಸಿದರು.
ವೀರಾಪುರ ಭಾಗದಲ್ಲಿ ಸುಮಾರು 5 ಸಾವಿರ ಮಂದಿ ವಾಸಿಸುತ್ತಿದ್ದು, ಕೃಷಿಯೇ ಮೂಲಧಾರವಾಗಿದೆ. ಜೀವನ ನಿರ್ವಹಣೆಗೆ ಯಾವುದೇ ಮೂಲ ಇರುವುದಿಲ್ಲ. ಹಾಗೂ ಅಂತರ್ಜಲ ಕುಸಿದು ಹೋಗಿದೆ. ರೈತರಿಗೆ ವ್ಯವಸಾಯಕ್ಕೆ ನೀರಿನ ತೊಂದರೆ ಎದುರಿಸುತ್ತಿದ್ದಾರೆ. ಕಳೆದ 20 ವರ್ಷಗಳಿಂದ ಬರಗಾಲ ಪೀಡಿತ ಪ್ರದೇಶವಾಗಿ ಜನರು ಸಂಕಷ್ಟ ಅನುಭವಿಸುತ್ತಿದ್ದು, ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ.
ಈ ಸಂದರ್ಭದಲ್ಲಿ ಕನಿಷ್ಠ ಕುಡಿಯುವ ನೀರು ತಮ್ಮ ದನ, ಕರುಗಳಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು, ಯಾವುದಾದರೂ ಮೂಲಗಳಿಂದ ನೀರನ್ನು ಒದಗಿಸುವ ಮತ್ತು ಕೆರೆಗಳಿಗೆ ನೀರು ತುಂಬಿಸುವ ಪ್ರಯತ್ನ ಮಾಡಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಿದ್ದಲಿಂಗಪ್ಪ ಸಿದ್ದರಾಮಯ್ಯ, ಕೆಂಚಪ್ಪ, ಇಂದ್ರಕುಮಾರ್, ಸಿದ್ದಪ್ಪ, ಶಿವಣ್ಣ, ಶಿವಕುಮಾರ್ ವೀರಾಪುರ, ಕರಿಯಣ್ಣ, ರಮೇಶ್ ಮತ್ತಿತರರು ಹಾಜರಿದ್ದರು.
ವರದಿ: ಅಬಿದ್ ಮಧುಗಿರಿ
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700