ಮಳೆಗಾಲದ ಸಮಯದಲ್ಲಿ ಪ್ರಕೃತಿ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳಲು ಜನ ಸಹ ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಇವರಿಗೆ ವಾಯುವ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಈ ನಿಟ್ಟಿನಲ್ಲಿ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಿದೆ.
ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದಲ್ಲಿ ಜೋಗ ಫಾಲ್ಸ್ ಪ್ಯಾಕೇಜ್ ಟೂರ್ ಬಸ್ ಗಳಿಗೆ ಚಾಲನೆ ನೀಡಿ, ಅವರು ಮಾತನಾಡಿದರು. ಭಾನುವಾರ ಮತ್ತು ರಜಾ ದಿನಗಳಂದು ವಿಶೇಷ ಪ್ಯಾಕೇಜ ಟೂರ್ ಸಾರಿಗೆ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ವಿಶೇಷ ಸಾರಿಗೆಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ. ಸಾರ್ವಜನಿಕರು ಹುಬ್ಬಳ್ಳಿಯಿಂದ ಜೋಗ್ ಫಾಲ್ಸ್ ಗೆ ವಿಶೇಷ ಬಸ್ ಗಳನ್ನು ಆರಂಭಿಸಲಾಗಿದೆ.
3 ರಾಜಹಂಸ ಹಾಗೂ 2 ಐರಾವತ ಬಸ್ ಗಳು ಜೋಗ್ ಫಾಲ್ಸ್ ಗೆ ಹೊರಟಿವೆ. ರಿಯಾಯಿತಿ ದರದಲ್ಲಿ ಪ್ರಯಾಣಿಸಲು ಅನುಕೂಲ ಮಾಡಿಕೊಡಲಾಗುವುದು. ಜೋಗ್ ಫಾಲ್ಸ್ ಜೊತೆಗೆ ಶಿರಸಿಯ ಮಾರಿಕಾಂಬಾ ದೇವಿಯ ದರ್ಶನವನ್ನು ಪ್ಯಾಕೇಜ್ ಟೂರ್ ಒಳಗೊಂಡಿದೆ. ಮಳೆಗಾಲವಿರುವುದರಿಂದ ಸಾರ್ವಜನಿಕರು ಪ್ಯಾಕೇಜ್ ಟೂರ್ ಸಾರಿಗೆಗಳ ಸದುಪಯೋಗ ಪಡೆದುಕೊಳ್ಳಬೇಕು.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ:7760991682, 7760991674 ಗೆ ಸಂಪರ್ಕಿಸಬಹುದಾಗಿದೆ. ವಿಶೇಷ ಪ್ಯಾಕೇಜ್ ಸಾರಿಗೆಗಳ ಮುಂಗಡ ಟಿಕೇಟ ಬುಕಿಂಗ್ ಗಾಗಿ www.ksrtc.in ವೆಬ್ ಸೈಟ್ ಅಥವಾ ಬಸ್ ನಿಲ್ದಾಣ ರಿಸರ್ವೇಶನ್ ಕೌಂಟರ್ ಗಳ ಮೂಲಕ ಆಸನಗಳನ್ನು ಕಾಯ್ದಿರಿಸಬಹುದಾಗಿರುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


