ವರ ನಟ ಡಾ.ರಾಜಕುಮಾರ ಅವರು ಕಾವೇರಿ ವಿಚಾರ ಬಂದಾಗ ಎಲ್ಲರನ್ನು ಎಬ್ಬಿಸಿ ಜಾಗೃತರಾಗಿಸುತ್ತಿದ್ದರು ಎಂದು ಹಿರಿಯ ನಟ ಶ್ರೀನಾಥ್ ಹೇಳಿದರು. ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನ ಫಿಲ್ಡ್ ಚೇಂಬರ್ ಮುಂದೆ ಆಯೋಜಿಸಿರುವ ಧರಣಿಯಲ್ಲಿ ಅವರು ಮಾತನಾಡಿದರು.
ಕಾವೇರಿ ವಿಚಾರದಲ್ಲಿ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಬೇಕು. ಆದರೆ ಇಲ್ಲಿ ಆ ಕೆಲಸವಾಗುತ್ತಿಲ್ಲ. ಇದರಿಂದ ರೈತರು ತೊಂದರೆಗೆ ಒಳಗಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


