ತುಮಕೂರು: ಮೈಸೂರಿನಲ್ಲಿ ಡಿ.28ರಂದು ನಡೆಯಲಿರುವ ರಾಜ್ಯ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯನ್ನು ಡಿ.18ರಂದು ನಗರದ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ನಡೆಸಲಾಗುತ್ತದೆ.
ಪುರುಷರು ಮತ್ತು ಮಹಿಳೆಯರಿಗೆ 10ಕಿ.ಮೀ., 20ವರ್ಷದ ಬಾಲಕ ಮತ್ತು ಬಾಲಕಿಯರಿಗೆ 8 ಹಾಗೂ 6 ಕಿ.ಮೀ, 18 ವರ್ಷದ ಬಾಲಕ ಬಾಲಕಿಯರಿಗೆ 6 ಮತ್ತು 4 ಕಿ.ಮೀ., 16 ವರ್ಷದ ಬಾಲಕ ಬಾಲಕಿಯರಿಗೆ 2 ಕಿ.ಮೀ ದೂರದ ಸ್ಪರ್ಧೆಗಳು ಇರಲಿವೆ.
ಆಯ್ಕೆ ಪ್ರಕ್ರಿಯೆ ಬೆಳಗ್ಗೆ 8:30 ಮತ್ತು ಸಂಜೆ 4:30 ಗಂಟೆಗೆ ನಡೆಸಲಾಗುವುದು. ಜಿಲ್ಲೆಯ ಆಸಕ್ತ ಕ್ರೀಡಾಪಟುಗಳು ಆಯ್ಕೆಯ ದಿನದಂದು ವಯಸ್ಸಿನ ದೃಡೀಕರಣ ಪತ್ರ, ಆಧಾರ್ ಕಾರ್ಡ್ ಹಾಜರು ಪಡಿಸಿ ಜಿಲ್ಲಾ ಅಥ್ಲೆಟಿಕ್ ತರಬೇತುದಾರ ಶಿವಪ್ರಸಾದ್ ಅವರಲ್ಲಿ ವರದಿ ಮಾಡಿಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9964529175 ಅನ್ನು ಸಂಪರ್ಕಿಸಬಹುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


