nammatumakuru

    Subscribe to Updates

    Get the latest creative news from FooBar about art, design and business.

    What's Hot

    ಫೆ.23ರಂದು ಸಂಪೂರ್ಣ ಒಳ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ

    February 22, 2026

    ದೇವರು ಬಂದಂತೆ ನಾಟಕವಾಡಿ ದಲಿತ ನವದಂಪತಿಗೆ ಅವಮಾನ:  ಒಬ್ಬನ ಸೆರೆ, ಹಲವರ ವಿರುದ್ಧ ಪ್ರಕರಣ ದಾಖಲು

    February 22, 2026

    ಮಧುಗಿರಿ: ಬಸ್ ನಿಲ್ದಾಣಗಳಲ್ಲಿ ತಂಗುದಾಣಗಳ ಕೊರತೆ; ಪ್ರಯಾಣಿಕರ ಪರದಾಟ

    February 21, 2026
    Facebook Twitter Instagram
    ಟ್ರೆಂಡಿಂಗ್
    • ಫೆ.23ರಂದು ಸಂಪೂರ್ಣ ಒಳ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ
    • ದೇವರು ಬಂದಂತೆ ನಾಟಕವಾಡಿ ದಲಿತ ನವದಂಪತಿಗೆ ಅವಮಾನ:  ಒಬ್ಬನ ಸೆರೆ, ಹಲವರ ವಿರುದ್ಧ ಪ್ರಕರಣ ದಾಖಲು
    • ಮಧುಗಿರಿ: ಬಸ್ ನಿಲ್ದಾಣಗಳಲ್ಲಿ ತಂಗುದಾಣಗಳ ಕೊರತೆ; ಪ್ರಯಾಣಿಕರ ಪರದಾಟ
    • ಮಧುಗಿರಿ: ಪಡಿತರ ತರಲು ತೆರಳುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಮಹಿಳೆ ಸಾವು
    • ಶೇ.99ರಷ್ಟು ಕಠಿಣ ಪರಿಶ್ರಮದಿಂದ ಸಾಧನೆ ಕಟ್ಟಿಟ್ಟ ಬುತ್ತಿ: ನ್ಯಾ.ರಾಜೇಶ್ ಎನ್.ಹೊಸಮನೆ ಅಭಿಮತ
    • ಔರಾದ್: ಸಂತಪುರ ಗುರುಕುಲ ಶಾಲೆಯಲ್ಲಿ ರಾಷ್ಟ್ರೀಯ ಬಾಯಿ ಹಲ್ಲು ತಪಾಸಣೆ ಶಿಬಿರ
    • ಪಂಚ ಗ್ಯಾರೆಂಟಿ, ‘ಲಂಚ ಗ್ಯಾರೆಂಟಿ’: ಸತೀಶ್ ಜಾರಕಿಹೊಳಿ ಹೇಳಿಕೆಯಲ್ಲೇ ಭ್ರಷ್ಟಾಚಾರಕ್ಕೆ ಸಾಕ್ಷಿ: ಬಿ.ವೈ.ವಿಜಯೇಂದ್ರ ವಾಗ್ದಾಳಿ
    • ವಿಕಲಚೇತನರಿಗೆ ರಾಜಕೀಯ ಮೀಸಲಾತಿಗೆ ಒತ್ತಾಯಿಸಿ ಪ್ರತಿಭಟನೆ: ಫೆ.22ರಂದು ತುಮಕೂರಿನಲ್ಲಿ ರ‍್ಯಾಲಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತೆರಿಗೆಯಲ್ಲೂ ವಂಚನೆ, ಚಿನ್ನವೂ ನಕಲಿ: ಗುಪ್ತ ಜ್ಯೂಯಲರ್ಸ್ ವಿರುದ್ಧ ಗಂಭೀರ ಆರೋಪ
    ಕೊರಟಗೆರೆ February 14, 2022

    ತೆರಿಗೆಯಲ್ಲೂ ವಂಚನೆ, ಚಿನ್ನವೂ ನಕಲಿ: ಗುಪ್ತ ಜ್ಯೂಯಲರ್ಸ್ ವಿರುದ್ಧ ಗಂಭೀರ ಆರೋಪ

    By adminFebruary 14, 2022No Comments3 Mins Read
    guptha juwellar

    ಕೊರಟಗೆರೆ: ಗ್ರಾಹಕರಿಂದ ತೆರಿಗೆ ಪಡೆಯದೇ ವಹಿವಾಟು ಮಾಡ್ತಾರಂತೆ.. ಅದಕ್ಕಾಗಿ ಸರಕಾರಕ್ಕೆ ಚಿನ್ನದ ಅಂಗಡಿ ಮಾಲೀಕರು ತೆರಿಗೆ ಕಟ್ಟಲ್ವಂತೆ.. ಜ್ಯುವೆಲರಿ , ಬ್ಯಾಂಕರ್ ಹಾಗೂ ಗೋಲ್ಡ್ ಲೋನ್ ಅಂಗಡಿಯ ಮಾಲೀಕರು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಶೇ.30ರಷ್ಟು ಮಾತ್ರ ಜಿಎಸ್ಟಿ ರಸೀದಿ ಕೋಡ್ತಾರಂತೆ.. ಇನ್ನೂಳಿದ ಶೇ.70ರಷ್ಟು ವಹಿವಾಟಿನ ಲೆಕ್ಕಕ್ಕೆ ನಕಲಿ ರಸೀದಿಯೇ ನೀಡ್ತಾರಂತೆ.. ತೆರಿಗೆಮುಕ್ತ ಆಗಿರುವ ಕೊರಟಗೆರೆ ಕ್ಷೇತ್ರದ ಬಲಿಷ್ಟ ಚಿನ್ನದ ಅಂಗಡಿಗಳ ವಹಿವಾಟಿನ ತನಿಖೆಗೆ ಆದಾಯ ಇಲಾಖೆಯ ಮೌನವೇಕೆ ಎಂಬುದೇ ಯಕ್ಷಪ್ರಶ್ನೆ.

    ಕೊರಟಗೆರೆ ಪಟ್ಟಣದ ಮತ್ತು ಗ್ರಾಮೀಣ ಪ್ರದೇಶದಲ್ಲಿ 30ಜ್ಯುವೆಲರ್ಸ್ , ಐದಾರು ಬ್ಯಾಂಕರ್ಸ್ ಮತ್ತು ನಕಲಿ ಗೋಲ್ಡ್ ಲೋನ್ ಅಂಗಡಿಗಳಿವೆ. ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಆದಾಯದ ಲೆಕ್ಕ ನೀಡಲು ಶೇ.30ರಷ್ಟು ಜಿಎಸ್ಟಿ ರಸೀದಿ ನೀಡ್ತಾರಂತೆ. ಆದಾಯ ಮರೆಮಾಚಲು ಶೇ.70ರಷ್ಟು ನಕಲಿ ರಸೀದಿ ನೀಡಿ ಸರಕಾರಕ್ಕೆ ತೆರಿಗೆ ಕಟ್ಟದೇ ವಂಚನೆ ಮಾಡ್ತಾರೇ. ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಬಂದಾಕ್ಷಣ ಅಂಗಡಿಗಳಿಗೆ ವಾರಪೂರ್ತಿ ರಜೆ ಘೋಷಣೆ ಮಾಡಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ವಂಚನೆ ಮಾಡುವುದು ಸರ್ವೆ ಸಾಮಾನ್ಯವಾಗಿದೆ.


    Provided by
    Provided by

    ನಕಲಿ ರಸೀದಿಯಿಂದ ಪ್ರಕರಣ ಬೆಳಕಿಗೆ..

    ಕೊರಟಗೆರೆ ಪಟ್ಟಣದ ಗುಪ್ತ ಜ್ಯೂಯಲರ್ಸ್ ನಲ್ಲಿ ಗೌರಿಬಿದನೂರು ತಾಲೂಕಿನ ಸಾರಗುಂಡ್ಲು ಗ್ರಾಮದ ಮಂಜುಳ ಎಂಬಾಕೆ 2021ನೇ ಜು.10ರಂದು 1ಲಕ್ಷ 48ಸಾವಿರ ಮೌಲ್ಯದ 30ಗ್ರಾಂ ಮಾಂಗಲ್ಯದ ಸರ ಖರೀದಿಸಿದ್ದಾರೆ. ಗುಪ್ತ ಅಂಗಡಿ ಮಾಲೀಕ ನವೀನ್ ಗ್ರಾಹಕಿ ಮಂಜುಳ ಹೆಸರನ್ನು ಸಹ ಬರೆಯದೇ ನಕಲಿ ರಸೀದಿ ನೀಡಿದ್ದಾರೆ. 30ಗ್ರಾಂ ಬಂಗಾರದ ಜೊತೆಗೆ 2.7ಗ್ರಾಂ ಹೆಚ್ಚುವರಿ ವೇಷ್ಟೆಜ್ ಬಂಗಾರದ ಹಣವನ್ನು ಸಹ ಹೆಚ್ಚುವರಿಯಾಗಿ ಪಡೆದಿದ್ದಾರೆ.
    ಮಂಜುಳ ಕತ್ತಿನಲ್ಲಿದ್ದ ಮಾಂಗಲ್ಯದ ಸರ ದಿನ ಕಳೆದಂತೆ ಕಪ್ಪು ಬಣ್ಣಕ್ಕೆ ತಿರುಗಿದೆ. ನಂತರ ಕತ್ತಿನಲ್ಲಿ ಗಾಯವಾಗಲು ಶುರುವಾಗಿದೆ ಗ್ರಾಹಕಿ ಗುಪ್ತ ನವೀನ್ ಬಳಿಗೆ ಬಂದು ಚಿನ್ನದ ಸರವನ್ನು ಪರೀಕ್ಷೆ ನಡೆಸಿದಾಗ 30ಗ್ರಾಂ ಚಿನ್ನದ ಸರ 23ಗ್ರಾಂಗೆ ಇಳಿದಿದೆ. ಕಂಗಲಾದ ಗ್ರಾಹಕಿ ಒಡವೆ ಅಂಗಡಿ ಮಾಲೀಕನಿಗೆ ಪ್ರಶ್ನೆ ಮಾಡಿದಾಗ ಮತ್ತೇ ಪರೀಕ್ಷಿಸಿ ಹೊಸದಾಗಿ ನೀಡುವ ಭರವಸೆ ನೀಡಿದ್ದಾರೆ. ಗ್ರಾಹಕಿಯಿಂದ ನಕಲಿ ರಸೀದಿ ಮತ್ತು ಮಾಂಗಲ್ಯದ ಸರ ಎರಡನ್ನು ಹಿಂದಕ್ಕೆ ಪಡೆದ ಮಾಲೀಕ ನವೀನ್ 15ದಿನ ಕಳೆದರೂ ಹಣವು ನೀಡದೇ ಬಂಗಾರವು ನೀಡಿಲ್ಲ ಎನ್ನಲಾಗಿದೆ.

    ಜಿಎಸ್ ಟಿ ಯಾರು ಕಟ್ಟಲ್ವಂತೆ..

    ಕೊರಟಗೆರೆ ಪಟ್ಟಣದ ಜ್ಯೂಯಲರಿ ಮತ್ತು ಬ್ಯಾಂಕರ್ಸ್ ಮಾಲೀಕರು ಯಾರು ಸಹ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಜಿಎಸ್ ಟಿ ತೆರಿಗೆ ಕಟ್ಟೋದಿಲ್ವಂತೆ. ಭಾರತ ದೇಶ ಸೇರಿದಂತೆ ಕೊರಟಗೆರೆಯಲ್ಲಿ ಶೇ.10ರಿಂದ 15ರಷ್ಟು ಜನ ಮಾತ್ರ ಚಿನ್ನದ ತೆರಿಗೆ ಕಟ್ತಾರಂತೆ ಅಷ್ಟೆ ಎಂಬುದು ಗುಪ್ತ ಜ್ಯುವೆಲರಿ ಮಾಲೀಕ ನವೀನ್ ಹೇಳುತ್ತಿದ್ದಾರೆ ಎನ್ನಲಾಗಿದೆ.

    ಗೌಪ್ಯವಾಗಿ ಗುಪ್ತ ಗೋಲ್ಡ್ ಲೋನ್..

    ಗುಪ್ತ ಜ್ಯುವೆಲರಿ ಸಮೀಪವೇ ಗೌಪ್ಯವಾಗಿ ಗುಪ್ತ ಗೋಲ್ಡ್ ಲೋನ್ ಕೂಡ ಗ್ರಾಹಕರಿಗೆ ಲಭ್ಯವಿದೆ. ಇದಕ್ಕೆ ಯಾರ ಅಪ್ಪಣೆಯು ಬೇಕಿಲ್ವಂತೆ, ಇದನ್ನು ಪ್ರಶ್ನಿಸುವ ಅಧಿಕಾರವು ಯಾರಿಗೂ ಇಲ್ಲವೇ. ಗ್ರಾಹಕರು ಬಂಗಾರ ಖರೀದಿಸುವಾಗ ನಕಲಿ ರಸೀದಿ ನೀಡುತ್ತೀರುವ ಇವರು ಇನ್ನೂ ಗೋಲ್ಡ್ ಲೋನ್ ವ್ಯವಹಾರ ಹೇಗೆ ಮಾಡ್ತಾರೇ. ಗ್ರಾಹಕರಿಂದ ಪಡೆಯುವ ಬಡ್ಡಿ ಎಷ್ಟು, ಬಂಗಾರ ಹೇಗೆ ಕೋಡ್ತಾರೇ? ಎಂಬಿತ್ಯಾದಿ ಪ್ರಶ್ನೆಗಳು ಇದೀಗ ಕೇಳಿ ಬಂದಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಸತ್ಯವನ್ನು ಹೊರತೆಗೆಯಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.

    “ಗುಪ್ತ ಜ್ಯುವೆಲರ್ಸ್ ನಲ್ಲಿ 30ಗ್ರಾಂ ಚಿನ್ನದ ಸರಕ್ಕೆ 1ಲಕ್ಷ 48ಸಾವಿರ ಹಣ ನೀಡಿದ್ದೇನೆ. ನಮಗೆ ಅಂಗಡಿ ಮಾಲೀಕ ನವೀನ್ ಜಿಎಸ್ಟಿ ರಸೀದಿ ನೀಡದೇ ನಕಲಿ ರಸೀದಿಯ ಜೊತೆ ಕೆಡಿಎಂ ಚಿನ್ನದ ಬದಲು ನಕಲಿ ಬಂಗಾರ ನೀಡಿದ್ದಾರೆ. 30ಗ್ರಾಂ ಇದ್ದ ಮಾಂಗಲ್ಯ ಸರ ಈಗ ಕಪ್ಪು ಬಣ್ಣಕ್ಕೆ ತಿರುಗಿ 23ಗ್ರಾಂ ಆಗಿದೆ. ನಾವು ಪ್ರಶ್ನಿಸಿದ್ದಕ್ಕೆ ಸರ ಮತ್ತು ರಸೀದಿ ಪಡೆದು ನಾಳೆ ಬನ್ನಿ ನಾಡಿದ್ದು ಬನ್ನಿ ಅಂತಾರೇ” ಎಂದು ಮೋಸ ಹೋಗಿರುವ ಗ್ರಾಹಕಿ ಮಂಜುಳ ಅಳವತ್ತು ಕೊಂಡಿದ್ದಾರೆ.
    ನನ್ನ ಮಗಳಿಗೆ ಮಾಂಗಲ್ಯ ಸರ ನೀಡುವಾಗಲೇ ಮೋಸವಾಗಿದೆ. ಗುಪ್ತ ಅಂಗಡಿ ಮಾಲೀಕ ಅಧಿಕೃತ ರಸೀದಿಯು ಕೊಟ್ಟಿಲ್ಲ, ಕೆಡಿಎಂ ಬಂಗಾರವು ನೀಡಿಲ್ಲ. ನಮ್ಮ ಕಡೆಯಿಂದ ಚಿನ್ನದ ಸರ ಹಿಂದಕ್ಕೆ ಪಡೆದು 15ದಿನ ಕಳೆದಿವೆ. ಇತ್ತ ಹಣವು ಇಲ್ಲ ಬಂಗಾರವು ಇಲ್ಲದೇ ಪರದಾಡುವ ಪರಿಸ್ಥಿತಿ ಇದೆ. ದಯವಿಟ್ಟು ನಮಗೆ ನ್ಯಾಯ ಕೋಡಿಸಿ ಎಂದು ಮಂಜುಳ ಅವರ ತಂದೆ ಬೇಡಿಕೊಂಡರು.

    ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

    admin
    • Website

    Related Posts

    ಕೊರಟಗೆರೆ ಪೊಲೀಸರಿಂದ ಭರ್ಜರಿ ಬೇಟೆ: ಅಂತಾರಾಜ್ಯ ಮೊಬೈಲ್ ಪೋನ್ ಕಳ್ಳರ ಬಂಧನ

    February 20, 2026

    ಎಸ್ ಎಸ್ ಎಲ್ ಸಿ ಪರೀಕ್ಷೆ : ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಂವಾದ

    February 19, 2026

    ಶ್ರೀ ಸಂತ ಸೇವಾಲಾಲ್ ರವರ ಆದರ್ಶ ತತ್ವ ಪಾಲಿಸಿ: ತಹಶೀಲ್ದಾರ್ ಕೆ.ಮಂಜುನಾಥ್

    February 19, 2026

    Leave A Reply Cancel Reply

    Our Picks

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಫೆ.23ರಂದು ಸಂಪೂರ್ಣ ಒಳ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ

    February 22, 2026

    ತುಮಕೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣದ ವಿಚಾರಕ್ಕೆ ಸಂಬಂಧಿಸಿದಂತೆ ಆಗಸ್ಟ್ 1, 2024ರ ಸರ್ವೋಚ್ಚ ನ್ಯಾಯಾಲಯದ ಐತಿಹಾಸಿಕ ತೀರ್ಪಿನ ಆಧಾರದ…

    ದೇವರು ಬಂದಂತೆ ನಾಟಕವಾಡಿ ದಲಿತ ನವದಂಪತಿಗೆ ಅವಮಾನ:  ಒಬ್ಬನ ಸೆರೆ, ಹಲವರ ವಿರುದ್ಧ ಪ್ರಕರಣ ದಾಖಲು

    February 22, 2026

    ಮಧುಗಿರಿ: ಬಸ್ ನಿಲ್ದಾಣಗಳಲ್ಲಿ ತಂಗುದಾಣಗಳ ಕೊರತೆ; ಪ್ರಯಾಣಿಕರ ಪರದಾಟ

    February 21, 2026

    ಮಧುಗಿರಿ: ಪಡಿತರ ತರಲು ತೆರಳುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಮಹಿಳೆ ಸಾವು

    February 21, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.