ಪಾವಗಡ: ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿರವರ ಹುಟ್ಟು ಹಬ್ಬದ ಪ್ರಯುಕ್ತ ಸೋಮವಾರರಂದು ಪಟ್ಟಣದ ಸರ್ಕಾರಿ ಆಸ್ಪತ್ರೆ ಮತ್ತು ಕಣಿವೇನಹಳ್ಳಿ ಗೇಟ್ ಬಳಿಯಿರುವ ಅನಾಥಾಶ್ರಮದಲ್ಲಿ ಬ್ರೇಡ್ ಮತ್ತು ಹಣ್ಣುಗಳನ್ನು ವಿತರಣೆ ಮಾಡಿ ಬಳಿಕ, ಪಕ್ಷದ ಕಚೇರಿಯಲ್ಲಿ ಕೇಕ್ ಕಟ್ ಮಾಡುವ ಮೂಲಕ ಸಂಭ್ರಮದಿಂದ ಆಚರಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ತಿಮ್ಮರಾಯಪ್ಪ, ತಾಲ್ಲೂಕು ಅಧ್ಯಕ್ಷರಾದ ಎನ್.ಎ. ಈರಣ್ಣ, ಗೌರವಾಧ್ಯಕ್ಷರಾದ ರಾಜಶೇಕರಪ್ಪ, ಸತ್ಯಪ್ಪ, ಚನ್ನಮಲ್ಲಯ್ಯ, ಬಲರಾಮರೆಡ್ಡಿ, ಗೋವಿಂದಬಾಬು, ಅಕ್ಕಲಪ್ಪನಾಯ್ಡು ಗೋವಿಂದಪ್ಪ, ರಾಜಗೋಪಾಲ, ನಾಗರಾಜು, ಶಿವಕುಮಾರ್, ಗಡ್ಡಂತಿಮ್ಮಪ್ಪ, ಕಾವಲಗೇರಿ ರಾಮಾಂಜಿ, ಮನು, ವೆಂಕಟೇಶ್, ನಾಗೇಂದ್ರ, ಗೋಪಾಲ, ಆಫ್ ಬಂಡೆ ಗೋಪಾಲ, ಗಂಗಾಧರ ನಾಯ್ಡು, ಯೂನಸ್, ಧರ್ಮಪಾಲ, ಭರತ್, ಸೆಲೇಕ್ಟ್ ಟೈಲರ್ ಹನುಮಂತರೆಡ್ಡಿ, ಅಂಭಿಕಾ, ಶಿಲ್ಪ ಮಹೇಶ್, ಹಾಗೂ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ನಂದೀಶ್ ನಾಯ್ಕ ಪಿ., ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx