ಸರಗೂರು: ತಾಲೂಕಿನ ಸಂಪರ್ಕ ರಸ್ತೆ ಪುರದಕಟ್ಟೆ ಗ್ರಾಮದ ಮುಖ್ಯ ರಸ್ತೆಯು ತೀರಾ ಹದಗೆಟ್ಟಿದ್ದು, ಇಲ್ಲಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಸ್ತೆ ದುರಸ್ತಿಗೆ ಮುಂದಾಗದ ಹಿನ್ನಲೆಯಲ್ಲಿ ಎ.ಎಸ್.ಐ ದೊರೆಸ್ವಾಮಿ ಅವರು ರಸ್ತೆ ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರ ಸುರಕ್ಷತೆಗೆ ಮುಂದಾದರು.
ಈ ಸಂಬಂಧ ಮಾತನಾಡಿದ ಗ್ರಾಮಸ್ಥ ಬೆಟ್ಟನಾಯಕ, ಪುರದಕಟ್ಟೆ ಗ್ರಾಮದ ಮುಖ್ಯ ರಸ್ತೆಯು ತೀರ ಹದಗೆಟ್ಟಿದ್ದು, ಇದು ಅಧಿಕಾರದಲ್ಲಿರುವವರ ಕಣ್ಣಿಗೆ ಕಾಣದಿರುವುದು ಬಹಳ ದುರಂತ. ತಾಲೂಕಿನ ಪ್ರಮುಖ ಕೇಂದ್ರ ಬಿಂದು ಶ್ರೀ ಚಿಕ್ಕದೇವನ ಬೆಟ್ಟಕ್ಕೆ ತೆರಳಲು ಈ ಮಾರ್ಗವೇ ಪ್ರಮುಖವಾದರು, ಯಾವ ಜನಪ್ರತಿನಿಧಿಗಳು ರಸ್ತೆ ಸರಿಪಡಿಸಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ಎ.ಎಸ್.ಐ ದೊರೆಸ್ವಾಮಿ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಈ ರೀತಿಯ ರಸ್ತೆಗಳಿಂದ ಜನರ ಸುಗಮ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಇನ್ನೂ ಮುಂದೆಯಾದರು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಂತಹ ಸಮಸ್ಯೆಗಳನ್ನು ಸರಿಪಡಿಸಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.
ಇದೇ ವೇಳೆ ಎ.ಎಸ್.ಐ ದೊರೆಸ್ವಾಮಿ, ಶಿವಕುಮಾರ್, ಮಲ್ಲಿಕಾರ್ಜುನ ಆರಾಧ್ಯ ಹಾಗೂ ಇನ್ನಿತರರು ಇದ್ದರು.
ವರದಿ: ಚಂದ್ರ ಹಾದನೂರು
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700