ಹಲಗೂರು: ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಹಲಗೂರಿನ ಸರ್ಕಲ್ ನಿಂದ ಗ್ರಾಮ ಪಂಚಾಯಿತಿವರೆಗೆ ಜಾಥಾ ನಡೆಸಿ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನಯನ್ನುದ್ದೇಶಿಸಿ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಕನ್ನಡ ಗಿರೀಶ್ ಮಾತನಾಡಿ, ಹಲಗೂರು ಗ್ರಾಮ ಪಂಚಾಯಿತಿಯಲ್ಲಿ ಕಾಯಂ ಆಗಿ ಆಡಳಿತ ಅಧಿಕಾರಿ ಇಲ್ಲದ ಕಾರಣ ನೂತನ ಕೆಲಸ ಕಾರ್ಯಗಳು ಆಗುತ್ತಿಲ್ಲ. ಗ್ರಾಮ ಪಂಚಾಯಿತಿಯಲ್ಲಿ 9/11 ಖಾತೆಗಳು ಆಗುತ್ತಿಲ್ಲ. ಹಣ ಕೊಟ್ಟವರಿಗೆ ಬೇಗ ಕೆಲಸ ಆಗುತ್ತಿದೆ.ತಿಂಗಳಿಗೆ 3 ಲಕ್ಷ ಕಂದಾಯ ಮತ್ತು ತೆರಿಗೆ ಹಣ ವಸೂಲಿ ಆದರೂ ಸಹ 1 ಟ್ರ್ಯಾಕ್ಟರ್ ಹಾಗೂ ಆಟೊ ಇದ್ದರೂಯಾವುದೇ ಸ್ವಚ್ಚತೆ ಕಾರ್ಯಗಳು ನಡೆದಿರುವುದು ಕಾಣುತ್ತಿಲ್ಲ ಎಂದು ಆರೋಪಿಸಿದರು.
ಹಲಗೂರಿನ ಸರ್ಕಲ್ ನಲ್ಲಿ ಹೈಮಾಸ್ಕ್ ಲೈಟ್ ಕೆಟ್ಟಿದ್ದರೂ ರಿಪೇರಿಯಾಗಿಲ್ಲ. ಸ್ಥಳಕ್ಕೆ ತಾಲ್ಲೂಕು ಅಧಿಕಾರಿ ಅಥವಾ ಜಿಲ್ಲಾಡಳಿತ ಬಂದು ನಮ್ಮ ಮನವಿಯನ್ನು ಸ್ವೀಕರಿಸಬೇಕು .ಅಲ್ಲಿಯವರೆಗೂ ನಮ್ಮ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸಂತೋಷ್ , ಗಿರೀಶ್ ಮನು, ಕೆಂಪೇಗೌಡ, ಮೋಹನ್ ಪ್ರಸಾದ್, ರಾಜು, ಕೆಂಪರಾಜು, ಪುಟ್ರಾಜು, ಸೂರ್ಯಪ್ರಕಾಶ್, ವಿನಯ್ ಕುಮಾರ್ ಹಾಜರಿದ್ದರು .
ಸ್ಥಳಕ್ಕೆ ಇಒ ರಾಮಲಿಂಗಯ್ಯ ಭೇಟಿ ನೀಡಿ ಮನವಿ ಪತ್ರ ಸ್ವೀಕರಿಸಿದರು .ನಂತರ ಮಾತನಾಡಿ ಅತಿ ಶೀಘ್ರದಲ್ಲೇ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ತಿಳಿಸಿದರು .
ವರದಿ: ಶ್ರೀನಿವಾಸ, ಮಂಡ್ಯ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz