ತಿಪಟೂರು: ಧಾರ್ಮಿಕ ನಾಡು ಎಂದು ಹೆಸರಾಗಿರುವ ಹಾಲುಕುರಿಕೆಯ ಅಮಾನಿಕೆರೆ ಕೆರೆ ಮೈದುಂಬಿ ಕೋಡಿ ಹರಿದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಗಂಗಾಮಾತೆಗೆ ಬಾಗಿನ ಸಮರ್ಪಿಸಿದರು.
ತಿಪಟೂರು ತಾಲೂಕಿನ ಎರಡನೇ ಅತಿ ದೊಡ್ಡ ಕೆರೆಯಾದ ಹಾಲುಕುರಿಕೆ ಕೆರೆಯು ಸರಿಸುಮಾರು 440 ಎಕರೆ ಇದ್ದು. ಸುಮಾರು12 ವರ್ಷದ ನಂತರ ಕೋಡಿ ಹರಿದಿದೆ. ಹೀಗಾಗಿ ಗ್ರಾಮಸ್ಥರು ಸಿಡಿಮದ್ದ ಸಿಡಿಸಿ ಸಂಭ್ರಮಿಸಿದರು.
ಗ್ರಾಮ ದೇವತೆಗಳಾದ ಶ್ರೀ ಕೆಂಪಮ್ಮ ಮತ್ತು ಶ್ರೀ ಪ್ಲೇಗಿನಮ್ಮ ದೇವರುಗಳ ಸಮಕ್ಷಮದಲ್ಲಿ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರು ಗಂಗಾಮಾತೆಗೆ ಬಾಗಿನ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ಹಲವು ಮುಖಂಡರುಗಳು, ಹಾಲುಕುರಿಕೆ ಗ್ರಾಮಸ್ಥರು ಮತ್ತು ಅಕ್ಕ ಪಕ್ಕದ ಊರಿನ ಗ್ರಾಮಸ್ಥರು ಭಾಗಿಯಾಗಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz