ತುರುವೇಕೆರೆ: ಹಳ್ಳಿಕಾರ್ ಮಠವು ಕೇವಲ ಎರಡು ವರ್ಷಗಳಲ್ಲಿ ಇಷ್ಟರಮಟ್ಟಿಗೆ ಬೆಳೆದಿರುವುದು ಸಮುದಾಯದ ಸಂಘಟನೆಯ ಅಭಿವೃದ್ಧಿಯನ್ನು ತೋರುತ್ತದೆ ಎಂದು ತುರುವೇಕೆರೆ ಕ್ಷೇತ್ರದ ಶಾಸಕ ಎಂ.ಟಿ.ಕೃಷ್ಣಪ್ಪ ಅಭಿಪ್ರಾಯ ಪಟ್ಟರು.
ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿಯ ಶೆಟ್ಟಿಗೊಂಡನ ಹಳ್ಳಿ ಗ್ರಾಮದಲ್ಲಿ ನೂತನವಾಗಿ ಪ್ರಾರಂಭವಾಗುತ್ತಿರುವ ಹಳ್ಳಿಕಾರ್ ಮಠದ ಪಬ್ಲಿಕ್ ಶಾಲೆ ಹಾಗೂ ಮಠದ ಕೊಠಡಿಗಳ ಲೋಕಾರ್ಪಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ತುರುವೇಕೆರೆ ಕ್ಷೇತ್ರದಲ್ಲಿ ಶೇ.80ರಷ್ಟು ಹಳ್ಳಿಕರ್ ಸಮುದಾಯ ನನಗೆ ಮತ ನೀಡಿದೆ. ನನ್ನ ಹಾಗೂ ಹಳ್ಳಿಕಾರ್ ಸಮುದಾಯದ ಮುಖಂಡರ ಭಾಂದವ್ಯ ತುಂಬಾ ಉತ್ತಮವಾಗಿದ್ದು ಈ ಬಾರಿ ಚುನಾವಣೆಯಲ್ಲಿ ಸಾಕಷ್ಟು ಸಹಕಾರ ನೀಡಿದರು ಹಳ್ಳಿಕಾರ ಸಮುದಾಯ ಒಕ್ಕಲಿಗ ಸಮುದಾಯ ಎರಡು ಒಂದೇ ಎಂಬ ಭಾವನೆಯಲ್ಲಿ ಇರುವ ನಾನು ಹಳ್ಳಿಕಾರ್ ಸಮುದಾಯದ ಮುಖಂಡರಿಗೆ ರಾಜಕೀಯವಾಗಿ ಅವಕಾಶ ಕಲ್ಪಿಸಲು ನಾನು ಸಿದ್ಧನಿದ್ದೇನೆ ಎಂದರು.
ರಾಜ್ಯದಲ್ಲಿ ಇರುವಂತಹ ಏಕೈಕ ಹಳ್ಳಿಕಾರ ಸಮುದಾಯದ ಮಠಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮಠದ ಅಭಿವೃದ್ಧಿಗೆ 5 ಕೋಟಿ ರೂಗಳನ್ನು ಮಂಜೂರು ಮಾಡುವಂತೆ ಒತ್ತಾಯಿಸುತ್ತೇನೆ ಮಠದ ಸಮಗ್ರ ಅಭಿವೃದ್ಧಿಗೆ ನನ್ನ ಸಹಕಾರ ಇದ್ದೇ ಇರುತ್ತದೆ ಎಂದು ಅಭಿಪ್ರಾಯಸಿದರು.
ಈ ಬಾರಿ ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಯಾವುದೇ ಹಣ ಬೆಂಬಲವಿಲ್ಲದೆ ಕಾರ್ಯಕರ್ತರು ಹಾಗೂ ಮತದಾರರ ಸಹಕಾರದಿಂದ ಚುನಾವಣೆಯನ್ನು ಗೆಲ್ಲಲು ಸಹಕಾರಿಯಾಯಿತು ಮತದಾರರು ಕಾರ್ಯಕರ್ತರೇ ನನ್ನ ಗೆಲುವಿಗೆ ಸಹಕಾರಿಯಾದ ದೇವರುಗಳು ಎಂದು ಸಂತಸ ವ್ಯಕ್ತಪಡಿಸಿದ್ದರು.
ಕಾರ್ಯಕ್ರಮದಲ್ಲಿ ಹಳ್ಳಿಕಾರ ಮಠದ ಪೀಠಾಧ್ಯಕ್ಷರಾದ ಬಾಲಕೃಷ್ಣನಂದ ಸ್ವಾಮೀಜಿ. ಮಠದ ಅಧ್ಯಕ್ಷರು ಗೌರವ ಅಧ್ಯಕ್ಷರು ಹಳ್ಳಿಕಾರ್ ಸಮುದಾಯದ ಮುಖಂಡರು ಹಾಜರಿದ್ದರು.
ವರದಿ: ಮಂಜುನಾಥ್, ಗುಬ್ಬಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA