ತುರುವೇಕೆರೆ: ನಾದಬ್ರಹ್ಮ ಹಂಸಲೇಖ ಅವರ ತೇಜೋವಧೆಯನ್ನು ಖಂಡಿಸಿ ದಲಿತ ಸಂಘಟನೆಗಳು, ತಾಲೂಕು, ಛಲವಾದಿ ಮಹಾಸಭಾ, ಅಲ್ಪಸಂಖ್ಯಾತ ಘಟಕ, ಪ್ರಗತಿಪರ ಸಂಘಟನೆಗಳು ತುರುವೇಕರೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದವು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಹಂಸಲೇಖ ಅವರೊಂದಿಗೆ ನಾವಿದ್ದೇವೆ. ಬಾಡು ನಮ್ಮ ಗಾಡು ಎಂದು ಘೋಷಣೆ ಕೂಗಿ ಮಾನವ ಸರಪಳಿ ನಿರ್ಮಿಸಿ ಹಂಸಲೇಖ ಅವರ ಹೇಳಿಕೆಗೆ ಬೆಂಬಲ ಸೂಚಿಸಲಾಯಿತು.
ಇದೇ ವೇಳೆ ಮಾತನಾಡಿದ ಮುಖಂಡರಾದ ಚಂದ್ರಯ್ಯನವರು, ನಮ್ಮ ಹೋರಾಟ ಬ್ರಾಹ್ಮಣರ ವಿರುದ್ಧವಲ್ಲ, ಬ್ರಾಹ್ಮಣ್ಯದ ವಿರುದ್ಧವಾಗಿದೆ ಎಂದರು.
ಇನ್ನೂ ಇದೇ ವೇಳೆ ಮಾತನಾಡಿದ ಸಿ.ಐ.ಟಿ.ಯು. ಮುಖಂಡ ಸತೀಶ್, ಆಹಾರ ಎನ್ನುವುದು ನಮ್ಮ ಹಕ್ಕು, ಅದನ್ನು ನೀವೇಕೆ ಪ್ರಶ್ನೆ ಮಾಡುತ್ತೀರಿ? ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಸತೀಶ್, ದ.ಸಂ.ಸ. ನಗರ ಘಟಕದ ಬಡಾವಣೆ ಶಿವರಾಜ್, ದಲಿತಮುಖಂಡ, ಟಿ.ಹೆಚ್.ಗುರುದತ್, ಹೊನ್ನೇನಹಳ್ಳಿ ಕೃಷ್ಣಪ್ಪ, ಕುರುಬ ಸಮಾಜದ ತಾಲ್ಲೂಕು ಕಾರ್ಯದರ್ಶಿ ರೇವಣ್ಣ, ತಿಗಳ ಸಮಾಜದ ತಾಲ್ಲೂಕು, ಅಧ್ಯಕ್ಷರಾದ ಟಿ.ಎನ್., ಶಿವಕುಮಾರ್, ತುರುವೇಕೆರೆ ಗುಡಿಗೌಡರಾದ, ತಿಮ್ಮೇಗೌಡ್ರು, ಛಲವಾದಿ ಮಹಾ ಸಭಾದ ರಾಮಣ್ಣ, ಪುರರಾಮಚಂದ್ರು, ಜಗದೀಶ್, ಆದಿತ್ಯವಾಣಿ ಪತ್ರಿಕೆಯ ವರದಿಗಾರ ಮಂಜುನಾಥ್, ಬಾಳೆಕಾಯಿ ಶೇಖರ್, ನಾರಾಯಣ ಮುನಿಯೂರು, ಬಿಗನೆನಹಳ್ಳಿ ಪುಟ್ಟರಾಜು, ಬಿ.ಪುರ ತಮ್ಮಯ್ಯ, ಮರಾಠಿ ಪಾಳ್ಯ ಚೆನ್ನಬಸವಣ್ಣ, ಮುತ್ತುಗದಹಳ್ಳಿ, ಶಿವರಾಜು, ಶಿಕ್ಷಕರಾದಬೋರಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಹನುಮಂತಯ್ಯ ಭಾಗವಹಿಸಿದ್ದರು.
ವರದಿ: ಸುರೇಶ್ ಬಾಬು ಎಂ., ತುರುವೇಕೆರೆ
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700