ನಿಯಮಿತವಾಗಿ ಲವಂಗ ಸೇವನೆಯಿಂದ ಎಷ್ಟೋ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಪ್ರತಿದಿನ 1 ಲವಂಗ ಜಗಿದರೆ ಸಾಕು. ದೇಹದಲ್ಲಿ ಅದ್ಭುತ ಬದಲಾವಣೆ ಆಗಲಿದೆ.
ಪ್ರತಿದಿನ ಲವಂಗ ಜಗಿಯುವುದರಿಂದ ಆಗುವ ಪ್ರಯೋಜನಗಳು: ಆಸ್ರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಗದೀಶ್ ಹಿರೇಮಠ್ ಅವರು ಹೇಳುವ ಪ್ರಕಾರ, ಲವಂಗಗಳಲ್ಲಿರುವ ಔಷಧೀಯ ಗುಣಗಳು ಬಾಯಿಯ ಕಾಯಿಲೆಗಳಾದ ಜಿಂಗೈವಿಟಿಸ್ ಮತ್ತು ಪಿರಿಯಾಂಟೈಟಿಸ್ ಅನ್ನು ತಡೆಯಲು ಸಹಾಯ ಮಾಡುತ್ತದೆ.
ಲವಂಗದಲ್ಲಿರುವ ಆಂಟಿಮೈಕ್ರೊಬಿಯಲ್, ಉತ್ಕರ್ಷಣ ನಿರೋಧಕ ಅಂಶಗಳು ದೇಹಕ್ಕೆ ತುಂಬಾ ಉಪಯುಕ್ತವಾಗಿದೆ. ಲವಂಗದಲ್ಲಿರುವ ಆಂಟಿಆಕ್ಸಿಡೆಂಟ್ಗಳಾದ ಫ್ಲೇವನಾಯ್ಡ್ಗಳು ಮತ್ತು ಐಸೊಫ್ಲೇವೊನ್ಗಳು ಜೀವಕೋಶಗಳಿಗೆ ಹಾನಿಯಾಗುವುದನ್ನು ತಡೆಯುತ್ತದೆ. ದೀರ್ಘಕಾಲದ ರೋಗಗಳಾದ ಹೃದ್ರೋಗ ಹಾಗೂ ಕ್ಯಾನ್ಸರ್ ನಂತಹ ರೋಗಗಳು ವಿರುದ್ಧ ಹೋರಾಡುತ್ತದೆ. ಅಷ್ಟೇ ಅಲ್ಲ ಸಂಧಿವಾತ, ಉರಿಯೂತದ ಸಮಸ್ಯೆಗಳನ್ನು ದೂರ ಮಾಡುತ್ತದೆ.
ಲವಂಗದಲ್ಲಿರುವ ಔಷಧೀಯ ಗುಣಗಳುಳ್ಳ ಬ್ಯಾಕ್ಟೀರಿಯಾಗಳು ವೈರಸ್, ಶಿಲೀಂಧ್ರಗಳ ವಿರುದ್ಧ ಹೋರಾಡುತ್ತದೆ. ಇದು ಬಾಯಿಯನ್ನು ಸ್ವಚ್ಛವಾಗಿಟ್ಟುಕೊಳ್ಳಲು, ಅದರ ಆರೋಗ್ಯ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳಲ್ಲೂ ತಿಳಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಲವಂಗದಲ್ಲಿದೆ ರೋಗನಿವಾರಕ ಲಕ್ಷಣ: ಲವಂಗ ನೈಸರ್ಗಿಕ ನೋವು ನಿವಾರಕ ಗುಣಲಕ್ಷಣಗಳನ್ನು ಹೊಂದಿದೆ. ದಂತ ಆರೈಕೆಯಲ್ಲಿ ಲವಂಗ ಎಣ್ಣೆಯನ್ನು ಬಳಸಲಾಗುತ್ತದೆ. ಹಲ್ಲುಗಳಲ್ಲಿ ನೋವಿದ್ದರೆ ಲವಂಗದ ಔಷಧೀಯ ಗುಣ ತ್ವರಿತವಾಗಿ ಕಡಿಮೆಗೊಳಿಸುತ್ತದೆ ಎನ್ನಲಾಗಿದೆ.
ಉತ್ತಮ ಒಸಡಿನ ಆರೋಗ್ಯ: ಲವಂಗಗಳನ್ನು ಜಗಿಯುತ್ತಿದ್ದರೆ ವಡಸುಗಳಲ್ಲಿ ಕಾಣಿಸುವ ಸಮಸ್ಯೆಗಳು ದೂರವಾಗುತ್ತದೆ. ಲವಂಗದಲ್ಲಿನ ಬ್ಯಾಕ್ಟೀರಿಯಾ ಉತ್ಪತ್ತಿಯಿಂದ ಆರೋಗ್ಯಕರ ಒಸಡು ನಿಮ್ಮದಾಗುತ್ತದೆ. ಪ್ರತಿದಿನ ಜಗಿಯುತ್ತಿದ್ದರೆ ಬಾಯಿಯ ದುರ್ವಾಸನೆಯೂ ದೂರವಾಗುತ್ತದೆ. ಯಾವುದೇ ಮೌತ್ ವಾಶ್ ಬಳಸುವುದು ಸಹ ಅಗತ್ಯವಿರುವುದಿಲ್ಲ.
ಹಲ್ಲುನೋವು ನಿವಾರಣೆಗೆ, ಒಸಡು ಸಮಸ್ಯೆಗೆ ಲವಂಗ ರಾಮಬಾಣ: ಹಲ್ಲುನೋವು ಬಂದರೆ ಸಾಮಾನ್ಯವಾಗಿ ಹಿರಿಯರು ಸಹ ನೋವಿರುವ ಕಡೆ ಲವಂಗ ಇಡಬೇಕು ಎಂದು ಹೇಳುತ್ತಾರೆ. ಲವಂಗದಲ್ಲಿನ ರಸ ನೋವಿರುವ ಜಾಗಕ್ಕೆ ತಲುಪಿದರೆ ಹಲ್ಲುನೋವು ಕಡಿಮೆಯಾಗುತ್ತದೆ ಎನ್ನಲಾಗಿದೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಡಾ.ಹಿರೇಮಠ್ ಅವರು ಹೇಳುವಂತೆ ಲವಂಗ ಜಗಿದರೆ ಹಲ್ಲುನೋವು ಕಡಿಮೆಯಾಗುತ್ತದೆ, ಒಸಡು ಸಮಸ್ಯೆಯೂ ನಿವಾರಣೆಯಾಗುತ್ತದೆ ಎಂದಿದ್ದಾರೆ.
ಜೀರ್ಣಕ್ರಿಯೆಗೆ ಸಹಾಯ: ಲವಂಗವು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಹೊಟ್ಟೆ ಉಬ್ಬರ, ಅಜೀರ್ಣದಂತಹ ಸಮಸ್ಯೆ ಸಹ ದೂರವಾಗುತ್ತದೆ.
ಅತಿಯಾದ ಲವಂಗ ಸೇವನೆ ಒಳ್ಳೆಯದಲ್ಲ: ಲವಂಗವನ್ನು ಪ್ರತಿನಿತ್ಯ ಜಗಿಯುವುದು ಆರೋಗ್ಯಕರ. ಆದರೆ ಅತಿಯಾಗಿ ಸೇವಿಸುವುದು ಒಳ್ಳೆಯದಲ್ಲ. ಅತಿಯಾದ ಸೇವನೆಯು ಯಕೃತ್ತಿನ ಹಾನಿಗೆ ಕಾರಣವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಪ್ರತಿದಿನ ಒಂದು ಅಥವಾ ಎರಡು ಲವಂಗ ಸೇವಿಸುವುದು ಅಥವಾ ಜಗಿಯುವುದು ಮಾಡಿದರೆ ಸಾಕು. ಟೀನಲ್ಲಿ ಲವಂಗ ಹಾಕುವುದು, ಬೇಯಿಸುವ ಆಹಾರಗಳಲ್ಲಿ ಸೇರಿಸುವುದು ಅಥವಾ ನೀರಲ್ಲಿ ಹಾಕಿ ಕುಡಿಯುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


