ಕೆಲವರು ದೇಹವನ್ನು ಆಟದ ಗೊಂಬೆಯಂತೆ ತಮಗೆ ಬೇಕಾದ ರೀತಿಯಲ್ಲಿ ಅಥವಾ ಪ್ರಸ್ತುತ ಟ್ರೆಂಡ್ ಗಳಿಗೆ ತಕ್ಕಂತೆ ಬದಾಲಾಯಿಸಿಕೊಳ್ಳುವುದು ವಾಡಿಕೆ. ಅಮೆರಿಕದ ವ್ಯಕ್ತಿಯೊಬ್ಬರು ಇತ್ತೀಚಿಗಷ್ಟೇ ಸರ್ಜರಿ ಮೂಲಕ ದೇಹದ ಮೇಲೆ ನಾಲ್ಕು ಮೊಲೆತೊಟ್ಟುಗಳನ್ನು ಸೇರಿಸಿಕೊಂಡ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಹ್ಯಾರಿ ಹೂಫ್ ಕ್ಲೋಪೆನ್ ಎಂಬ ವ್ಯಕ್ತಿ ಇದೀಗಾ ಒಟ್ಟು 6 ಮೊಲೆ ತೊಟ್ಟುಗಳನ್ನು ಹೊಂದಿದ್ದಾರೆ.
ಪ್ರಾರಂಭದಲ್ಲಿ ದೇಹ ಮಾರ್ಪಾಡು ತಜ್ಞ ಸ್ಟೀವ್ ಹಾವರ್ತ್ ಸರ್ಜರಿ ಮೂಲಕ ದೇಹದ ಮೇಲೆ ನಾಲ್ಕು ಮೊಲೆತೊಟ್ಟು ಹಾಕುವ ಸರ್ಜರಿಗೆ ಒಳಗಾಗಿದ್ದ, ಆದರೆ ಅದು ವಿಫಲವಾಗಿತ್ತು. ಬಳಿಕ ಕೊಲೊರಾಡೋ ಮೂಲದ ಟ್ಯಾಟೂ ಕಲಾವಿದ ಏಂಜೆಲ್ ಸಿಲಿಕೋನ್ ಇಂಪ್ಲಾಂಟ್‌ಗಳನ್ನು ನೈಸರ್ಗಿಕವಾಗಿ ಕಾಣುವ ರೀತಿಯಲ್ಲಿ ಹಚ್ಚೆ ಹಾಕಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


