ಜಪಾನ್: ಆರೋಗ್ಯವಂತನಾಗಿರಬೇಕಾದರೆ ಮನುಷ್ಯ ಚೆನ್ನಾಗಿ ನಿದ್ದೆ ಮಾಡಬೇಕು. ಆತ 6 ಅಥವಾ 8 ಗಂಟೆಗಳ ತನಕ ನಿದ್ರಿಸುವುದು ಮನುಷ್ಯನ ಆರೋಗ್ಯಕ್ಕೆ ಉತ್ತಮವಾದದ್ದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಜಪಾನ್ ನಲ್ಲಿ ವ್ಯಕ್ತಿಯೊಬ್ಬ ಕೇವಲ ಅರ್ಧ ಗಂಟೆ ನಿದ್ರೆ ಮಾಡುತ್ತಾನಂತೆ!
ಡೈಸುಕೆ ಹೋರಿ ಎಂಬ ಜಪಾನ್ ನ ಈ ವ್ಯಕ್ತಿ ಕಳೆದ 12 ವರ್ಷಗಳಿಂದ ಕೇವಲ 30 ನಿಮಿಷಗಳ ಕಾಲ ಮಾತ್ರವೇ ನಿದ್ರೆ ಮಾಡುತ್ತಾನಂತೆ. ಉಳಿದ ಸಮಯದಲ್ಲಿ ಉಪಹಾರ, ಜಿಮ್, ಕೆಲಸಗಳಿಗೆ ಈತ ಮುಡಿಪಾಗಿಡುತ್ತಾನಂತೆ.
ಈತ ತನ್ನ ಜೀವನವನ್ನು ಡಬಲ್ ಮಾಡಬೇಕು. ನಿದ್ರಿಸದೇ ಹೆಚ್ಚು ಕಾಲ ಜೀವಿಸಬೇಕು ಎನ್ನುವ ಕಾರಣಕ್ಕಾಗಿ ನಿದ್ದೆಗೆಡುತ್ತಿದ್ದಾನಂತೆ.
ನೀವು ತಿನ್ನುವ ಒಂದು ಗಂಟೆ ಮೊದಲು ನೀವು ವ್ಯಾಯಾಮ ಅಥವಾ ಕಾಫಿ ಕುಡಿಯುವವರೆಗೆ, ನೀವು ಅರೆನಿದ್ರಾವಸ್ಥೆಯನ್ನು ದೂರವಿಡಬಹುದು ಅಂತ ಚೀನಾದ ಮಾಧ್ಯಮಗಳ ಜೊತೆಗೆ ಹೋರಿ ಹೇಳಿದ್ದಾನಂತೆ.
ಅಂದ ಹಾಗೆ ಈ ಹೋರಿ ವಾಣಿಜ್ಯೋದ್ಯಮಿಯಂತೆ, ಆಕ್ಟಿವ್ ಆಗಿರಲು ಮನುಷ್ಯನಿಗೆ ದೀರ್ಘ ನಿದ್ದೆಗಿಂತ ಗುಣಮಟ್ಟದ ನಿದ್ದೆ ಬೇಕು ಎನ್ನುವುದು ಈತನ ವಾದವಂತೆ. ಸ್ವಲ್ಪ ಸಮಯವಾದರೂ ಗುಣಮಟ್ಟದ ನಿದ್ದೆ ಮಾಡುವುದರಿಂದ ಹೆಚ್ಚು ಪ್ರಯೋಜನವಿದೆ. ದೀರ್ಘ ಕಾಲದ ನಿದ್ದೆಯಿಂದ ಪ್ರಯೋಜನವಿಲ್ಲ ಎನ್ನುವುದು ಈತನ ವಾದ.
ಜಪಾನ್ ನ ಯೋಮಿಯುರಿ ಟಿವಿ ವಿಲ್ ಯು ಗೋ ವಿತ್ ಮಿ ಎಂಬ ರಿಯಾಲಿಟಿ ಶೋನಲ್ಲಿ ಈತನ ದಿನಚರಿಯನ್ನು ಪರೀಕ್ಷಿಸಲಾಯಿತು. ಆತ ಅಚ್ಚರಿ ಎಂಬಂತೆ ಮೂರು ದಿನಗಳಲ್ಲಿ ಪ್ರತಿ ದಿನ ಕೇವಲ 26 ನಿಮಿಷಗಳ ಕಾಲ ನಿದ್ರೆ ಮಾಡಿ, ತನ್ನ ಸಾಮರ್ಥ್ಯವನ್ನು ತೋರಿಸಿದ್ದಾನೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q