ತುಮಕೂರು: ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಹಿನ್ನೆಲೆಯಲ್ಲಿ ಡಿಸೇಲ್ ತುಂಬಿದ್ದ ಲಾರಿ ಪಲ್ಟಿಯಾಗಿರೋ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಬಳಿಯ ರಾಜ್ಯ ಹೆದ್ದಾರಿ 33 ರಲ್ಲಿರುವ ದೊಡ್ಡಮಾವತ್ತೂರು ಟೋಲ್ ಬಳಿ ನಡೆದಿದೆ.
ಲಾರಿಗಳು ಡಿಕ್ಕಿಯಾದ ರಭಸಕ್ಕೆ ಟೋಲ್ ಸಂಪೂರ್ಣ ಜಖಂಗೊಂಡಿದೆ. ಡಿಸೇಲ್ ತುಂಬಿದ್ದ ಲಾರಿ ಚಾಲಕ ಹಾಗೂ ಇಬ್ಬರು ಟೋಲ್ ಸಿಬ್ಬಂದಿ ಸೇರಿ ಮೂವರಿಗೆ ಗಂಭೀರ ಗಾಯಗಳಾಗಿವೆ.
ಕುಣಿಗಲ್ ಕಡೆಯಿಂದ ಮದ್ದೂರು ಕಡೆಗೆ ತೆರಳುತ್ತಿದ್ದ ಟೈಲ್ಸ್ ತುಂಬಿದ್ದ ಲಾರಿ ಹಾಗೂ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮದ್ದೂರು ಕಡೆಯಿಂದ ಕುಣಿಗಲ್ ಕಡೆಗೆ ಬರುತ್ತಿದ್ದ ಡಿಸೇಲ್ ತುಂಬಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.
ಲಾರಿಗಳು ಡಿಕ್ಕಿಯಾದ ಪರಿಣಾಮ. ದೊಡ್ಡಮಾವತ್ತೂರು ಟೋಲ್ ಗೆ ಗುದ್ದಿ ಟೋಲ್ ಸಿಬ್ಬಂದಿಗಳ ವಿಶ್ರಾಂತಿ ಕೊಠಡಿಗೆ ಲಾರಿ ನುಗ್ಗಿದೆ. ದೊಡ್ಡಮಾವತ್ತೂರು ಟೋಲ್ ಸಂಪೂರ್ಣ ಪುಡಿಯಾಗಿದೆ.
ಡಿಸೇಲ್ ಲಾರಿ ಚಾಲಕ ಹಾಗೂ ಇಬ್ಬರು ಟೋಲ್ ಸಿಬ್ಬಂದಿಗಳಿಗೆ ಗಂಭೀರ ಗಾಯಗಳಾಗಿವೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಮೃತೂರು ಪೊಲೀಸರು, ಹುಲಿಯೂರುದುರ್ಗ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಸಿಬ್ಬಂದಿ ದೌಡಾಯಿಸಿದ್ದಾರೆ.
ಕಾರ್ಯಾಚರಣೆ ನಡೆಸಿ ಡಿಸೇಲ್ ತುಂಬಿದ್ದ ಲಾರಿಯಿಂದ ಅನಾಹುತ ಆಗದಂತೆ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಸಿದರು.
ಮೂರು ಕ್ರೇನ್ ಗಳ ಮೂಲಕ ಲಾರಿಗಳನ್ನ ಮೇಲೆತ್ತಿ ಕಾರ್ಯಾಚರಣೆ ನಡೆಸಲಾಯಿತು. ವಾಹಗಳ ಓಡಾಟಕ್ಕೆ ಅವಕಾಶ ಮಾಡಿಕೊಟ್ಟ ಪೊಲೀಸರು. ಗಾಯಾಳುಗಳನ್ನ ಕುಣಿಗಲ್ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ಆಗುತ್ತಿದ್ದಂತೆ ಟೈಲ್ಸ್ ತುಂಬಿದ್ದ ಲಾರಿ ಚಾಲಕ ಹಾಗೂ ಕ್ಲಿನರ್ ಪರಾರಿ ಆಗಿದ್ದಾರೆ. ಈ ಘಟನೆ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q