ತಿಪಟೂರು: ಕಾಲ ಬದಲಾಗುವಂತೆ ಮನುಷ್ಯನ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಬದಲಾಗುತ್ತಿದೆ. ಆರೋಗ್ಯದ ಬಗ್ಗೆ ಅರಿವು ಅಗತ್ಯ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.
ನಗರಸಭೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ ಕೊನೇಹಳ್ಳಿ ಹಾಗೂ ನಗರಸಭೆಯಿಂದ ವಿಶ್ವ ಆಹಾರ ದಿನದ ಅಂಗವಾಗಿ ಪೌರ ಕಾರ್ಮಿಕರು ಹಾಗೂ ನೀರು ವಿತರಕರಿಗೆ ಕಾರ್ಯಾಗಾರ ನಡೆಯಿತು.
ಮಾನವ ಪೌಷ್ಟಿಕತೆ, ವಿಜ್ಞಾನ ಮತ್ತು ಆರೋಗ್ಯದ ಆಧಾರದಲ್ಲಿ ಆಹಾರ ಆಯ್ಕೆಮಾಡುತ್ತಿದ್ದಾನೆ. ಉತ್ತಮ ಆಹಾರ ಮತ್ತು ಭವಿಷ್ಯಕ್ಕಾಗಿ ಕೈ ಜೋಡಿಸಿ ಎಂಬ ಘೋಷವಾಕ್ಯದಲ್ಲಿ ವಿಶ್ವ ಆಹಾರ ದಿನ ಆಯೋಜಿಸಲಾಗಿದೆ ಎಂದರು.
ನಗರಸಭೆ ಪ್ರಭಾರ ಅಧ್ಯಕ್ಷೆ ಮೇಘಶ್ರೀ ಭೂಷಣ್ ಮಾತನಾಡಿ, ಆಧುನಿಕ ಜೀವನ ಶೈಲಿ ವೇಗವಾಗಿ ಬದಲಾಗುತ್ತಿದ್ದು, ನಮ್ಮ ಆಹಾರ ಪದ್ಧತಿ ಆರೋಗ್ಯವನ್ನು ನಿರ್ಧರಿಸುತ್ತದೆ ಎಂದು ಹೇಳಿದರು.
ಜಿಕವಿಕ ವಿಸ್ತರಣಾ ನಿರ್ದೇಶಕ ವೈ.ಎನ್.ಶಿವಲಿಂಗಯ್ಯ ಮಾತನಾಡಿ, ಪೌಷ್ಟಿಕ ಆಹಾರದ ಅಗತ್ಯತೆ, ಆಹಾರದ ಗುಣಮಟ್ಟ ಮತ್ತು ಪೌಷ್ಟಿಕ ಬೆಳೆಗಳ ಬೆಳವಣಿಗೆ ಕುರಿತು ಉಪನ್ಯಾಸ ನೀಡಿದರು. ಮನುಷ್ಯನ ಬೆಳವಣಿಗೆಯ ಹಾದಿಯಲ್ಲಿ ಆಹಾರದ ಗುಣಮಟ್ಟವೇ ಅವನ ಬುದ್ಧಿ ಮತ್ತು ಆರೋಗ್ಯವನ್ನು ನಿರ್ಧರಿಸಿದೆ ಎಂದರು.
ಜಿಕೆವಿಕೆಯ ವಿಸ್ತರಣಾಧಿಕಾರಿ ವೈ.ಎನ್.ಶಿವಲಿಂಗಯ್ಯ, ಕವಿಕೆ ಮುಖ್ಯಸ್ಥಎಂ.ಎಚ್.ಶಂಕರ್, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಮ್.ಎಸ್.ಯೋಗೀಶ್, ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ವಿಜ್ಞಾನಿ ದರ್ಶನ್ ಎಂ.ಈ. ಆರ್ಥಿಕ ಸಾಕ್ಷರತಾ ಸಮಾಲೋಚಕಿ ರೇಖಾ, ನಗರಸಭೆ ಅಧಿಕಾರಿಗಳು, ಪೌರಕಾರ್ಮಿಕರು, ಜಿಕೆವಿಕೆ ವಿದ್ಯಾರ್ಥಿಗಳು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC