ಉತ್ತರ ಪ್ರದೇಶ: ಉತ್ತರ ಪ್ರದೇಶದಲ್ಲಿ ಪತ್ನಿ ಅಪಘಾತದಲ್ಲಿ ಮೃತಪಟ್ಟ ಬೆನ್ನಲ್ಲೇ ಆಘಾತಕ್ಕೊಳಗಾದ ಪತಿಯೂ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ. ಯೋಗೇಶ್ ಕುಮಾರ್(36) ಹಾಗೂ ಮಣಿಕರ್ಣಿಕಾ ಕುಮಾರಿ(28) ಮೃತ ದುರ್ದೈವಿಗಳಾಗಿದ್ದಾರೆ.
ಅವರು 6 ತಿಂಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಏಪ್ರಿಲ್ 22 ರಂದು ಮಣಿಕರ್ಣಿಕಾ ಅವರು ತಡಿಯಾವಾಣ ಆರೋಗ್ಯ ಕೇಂದ್ರಕ್ಕೆ ಹೋಗುವಾಗ ಅಪರಿಚಿತ ವಾಹನವೊಂದು ಸ್ಕೂಟಿಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಮಣಿಕರ್ಣಿಕಾ ಮೃತಪಟ್ಟಿದ್ದರು.
ಗುರುತಿನ ಚೀಟಿ ಆಧಾರದ ಮೇಲೆ ಮಣಿಕರ್ಣಿಕಾ ಸಾವಿನ ಸುದ್ದಿಯನ್ನು ಪತಿ ಯೋಗೇಶ್ ಗೆ ತಿಳಿಸಲಾಗಿದ್ದು, ಪತ್ನಿ ಸಾವಿನಿಂದ ನೊಂದ ಪತಿ, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವೇಳೆ ಡೆತ್ ನೋಟ್ ಪತ್ತೆಯಾಗಿದ್ದು, “ನಾವು ಇದ್ದರೂ ಜತೆಯಾಗಿಯೇ, ಸತ್ತರೂ ಜತೆಯಾಗಿಯೇ” ಎಂದು ಬರೆದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296