ವರದಿ: ಚಂದ್ರಹಾದನೂರು
ಸರಗೂರು: ತಾಲ್ಲೂಕಿನ ಸಮೀಪದ ನಂಜನಗೂಡು ತಾಲ್ಲೂಕಿನ ಹೆಡಿಯಾಲ ಗ್ರಾ.ಪಂ.ಯಲ್ಲಿ ಕಸದರಾಶಿ ಬಿದ್ದಿದ್ದು, ದುರ್ವಾಸನೆಯಿಂದ ಮೂಗು ಮುಚ್ಚಿಕೊಳ್ಳುವಂತಾಗಿದೆ. ಸರಗೂರು, ಗುಂಡ್ಲುಪೇಟೆ ಮುಖ್ಯ ರಸ್ತೆಯ ಹೆಡಿಯಾಲ ಮಾರ್ಗವಾಗಿ ಹೋಗುವ ರಸ್ತೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಸರಾಶಿ, ಸತ್ತ ನಾಯಿ, ಕೋಳಿ ತ್ಯಾಜ್ಯಗಳನ್ನು ಅಲ್ಲೆ ಎಸೆಯಲಾಗಿದ್ದು, ಕಸ ವಿಲೇವಾರಿಯಾಗದೆ ಸಾಂಕ್ರಾಮಿಕ ರೋಗದ ಭೀತಿ ಉಂಟಾಗಿದೆ.
ಸಾಂಕ್ರಾಮಿಕ ರೋಗ ಕೊವಿಡ್ 19 ಎರಡನೇ ಅಲೆಯ ಸಂದರ್ಭದಲ್ಲಿಯೂ ಎಚ್ಚೆತ್ತು ಕೊಳ್ಳದ ಹೆಡಿಯಾಲ ಗ್ರಾಪಂಹಾಗೂ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹೆಡಿಯಾಲ ಆಸ್ಪತ್ರೆಯ ಅಧಿಕಾರಿಗಳು ಜನರ ಆರೋಗ್ಯ ದ ಗಮನ ಹರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಪಂಚಾಯಿತಿ ಅಧಿಕಾರಿಗಳು ಹಾಗೂ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಇದೇ ರಸ್ತೆಯಲ್ಲಿ ಓಡಾಡುತ್ತಿದ್ದರೂ, ಕಂಡೂ ಕಾಣದಂತಿದ್ದಾರೆ. ಪಂಚಾಯಿತಿ ವತಿಯಿಂದ ಕಸದರಾಶಿಯನ್ನು ತೆರುವುಗೊಳಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇಲ್ಲಿನ ಭಾರತ್ ಗ್ಯಾಸ್ ಏಜೆನ್ಸಿ ಎದುರುಗಡೆ ಇರುವ ರಸ್ತೆಯ ಬದಿಯಲ್ಲಿ ಕಸದ ರಾಶಿ ಬಿದ್ದಿದೆ. ಇದರಿಂದಾಗಿ ಹೆಡಿಯಾಲ ಗ್ರಾಮಸ್ಥರು ಇಲ್ಲಿ ತಿರುಗಾಡಲು ಕೂಡ ಕಷ್ಟಕರವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ರಸ್ತೆ ಬದಿಯೇ ಕಸದ ಕೊಂಪೆ
ಸಿದ್ದರಾಮಯ್ಯರವರು ಸಿಎಂ ಆದ ಸಮಯದಲ್ಲಿ ಹೆಚ್.ಸಿ.ಮಹದೇವಪ್ಪ ಮೈಸೂರು ಜಿಲ್ಲೆ ಉಸ್ತುವಾರಿ ಸಚಿವರಾಗಿದ್ದಾಗ ಹೆಡಿಯಾಲ ಗ್ರಾಪಂಗೆ ಅನುದಾನ ನೀಡಿದ್ದರು. ಆದರೆ ಇಲ್ಲಿನ ರಸ್ತೆ ಕೂಡ ಅರ್ಧಕ್ಕೆ ನಿಂತು ಹೋಗಿದೆ. ಸರ್ಕಾರದ ಅನುದಾನಗಳನ್ನು ಅಧಿಕಾರಿಗಳು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಸ್ಥಳೀಯ ಮುಖಂಡರೋರ್ವರು ಆರೋಪಿಸಿದ್ದಾರೆ.
ಹೆಡಿಯಾಲ ಸುತ್ತ ಮುತ್ತಲ ಗ್ರಾಮಗಳಿಗೆ ಕೇಂದ್ರ ಬಿಂದುವಾಗಿದೆ.ಇಲ್ಲಿ ಸಾರ್ವಜನಿಕರಿಗೆ ಬಸ್ ನಿಲ್ದಾಣ ಹಾಗೂ ಶೌಚಾಲಯ ನಿರ್ಮಾಣ ವಾಗಿಲ್ಲ . ಜನರು ಮಳೆ ಬಿಸಿಲು ವೇಳೆಯಲ್ಲಿ ರಸ್ತೆ ಬದಿಯಲ್ಲಿ ವಾಹನಗಳಿಗೆ ಹತ್ತುತ್ತಾರೆ. ವಿವಿಧ ಗ್ರಾಮಗಳಿಂದ ಹೆಡಿಯಾಲ ಪಟ್ಟಣಕ್ಕೆ ಬಂದಾಗ ಮಹಿಳೆಯರು ಹಾಗೂ ಮಕ್ಕಳಿಗೆ ಶೌಚಾಲಯವಿಲ್ಲದೆ ಬಯಲು ಶೌಚಾಲಯಕ್ಕೆ ಹೋಗುವಂತಾಗಿದೆ. ಇಲ್ಲಿನ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆಯಿಂದ ಈ ರೀತಿಯ ತೊಂದರೆ ಉಂಟಾಗುತ್ತಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಕಸದ ರಾಶಿ ನೋಡಿ ಸಾರ್ವಜನಿಕರು ನೋಡಿಕೊಂಡು ಶಾಸಕರಿಗೆ ಹಾಗೂ ಇದ್ದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಗಮನಹರಿಸಬೇಕು ಇಲ್ಲವಾದರೆ, ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಇಲ್ಲಿನ ಗ್ರಾಮಸ್ಥರು ಹಾಗೂ ಸ್ಥಳೀಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700