ತುಮಕೂರು: ಹೇಮಾವತಿ ನದಿ ನೀರನ್ನು ಹೇಮಾವತಿ ಲಿಂಕ್ ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿ ಮೂಲಕ, ಮಾಗಡಿ ತಾಲೂಕಿಗೆ ನಡೆಯುತ್ತಿರುವ ಕಾಮಗಾರಿ ಅಲ್ಲಿನ ಇಂಜಿನಿಯರಿಗೆ, ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ದೂರವಾಣಿ ಮೂಲಕ ಸೂಚನೆ ನೀಡಿದ ಘಟನೆ ನಡೆದಿದೆ.
ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿ ತಕ್ಷಣ ನಿಲ್ಲಿಸುವಂತೆ ಅಲ್ಲಿದ್ದ ಇಂಜಿನಿಯರಿಗೆ ಅವಾಜ್ ಹಾಕಿದರು. ಅಲ್ಲದೆ ತಮ್ಮ ವಿರುದ್ಧ ಪ್ರಕರಣ ದಾಖಲಿಸುವಂತೆಯೂ ಸವಾಲು ಹಾಕಿದರು. ಇದೆಲ್ಲವೂ ನಡೆದದ್ದು ಕೆನಾಲ್ ಕಾಮಗಾರಿ ಕುರಿತು ವಿರೋಧ ವ್ಯಕ್ತಪಡಿಸಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ.
ಅಲ್ಲದೆ ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಸಿ ಎಸ್ ಪು ರ ಗ್ರಾಮದ ಬಳಿ ಕೆಲಸ ಮಾಡದಂತೆ ಹೇಮಾವತಿ ಜಲಾನಯನ ಅಭಿವೃದ್ಧಿ ಇಲಾಖೆ ಇಂಜಿನಿಯರಿಗೆ ಸೂಚನೆ ನೀಡಿದರು. ಇಲಾಖೆಯ ಎಂಡಿಗೆ ನೆನ್ನೆ ದೂರವಾಣಿ ಮೂಲಕ ಕೆಲಸ ನಿಲ್ಲಿಸುವಂತೆ ಸೂಚನೆ ನೀಡಿದ್ದೇನೆ ಎಂದು ಇಂಜಿನಿಯರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು.
ಮರ್ಯಾದೆಯಿಂದ ಹೇಳುತ್ತಿದ್ದೇನೆ ತಕ್ಷಣ ಕೆಲಸ ನಿಲ್ಲಿಸು ಇಲ್ಲದಿದ್ದರೆ ನಾನೇ ಬಂದು ಕೆಲಸ ನಿಲ್ಲಿಸುತ್ತೇನೆ ಎಂದು ಆವಾಜ್ ಹಾಕಿದರು. ಇಂಜಿನಿಯರ್ ರವಿ ಅವರೇ ತಕ್ಷಣ ಕಾಮಗಾರಿ ನಿಲ್ಲಿಸಬೇಕು ಇಲ್ಲದಿದ್ದರೆ ಹದಿನಾರನೇ ತಾರೀಖಿನಿಂದ ನಾವು ಎಲ್ಲವನ್ನು ನಾವು ಮುಚ್ಚುತ್ತೇವೆ ಎಂದು ಎಚ್ಚರಿಕೆ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296