ಬೆಂಗಳೂರು: ಇನ್ಮುಂದೆ ರೈಲುಗಳ ವಿಳಂಬ ಸಂಚಾರಕ್ಕೆ ಬ್ರೇಕ್ ಬೀಳಲಿದೆ. ಬೆಂಗಳೂರು–ಮೈಸೂರು ವಿಭಾಗ ವ್ಯಾಪ್ತಿಯಲ್ಲಿ ಆರು ಯೋಜನೆಗಳಿಗೆ ಗ್ರೀನ್ ಸಿಗ್ನಲ್ ನೀಡಲಾಗಿದ್ದು, 874.13 ಕೋಟಿ ರುಪಾಯಿ ವೆಚ್ಚದಲ್ಲಿ ಒಟ್ಟು 639.05 ಕಿ.ಮೀ. ರೈಲ್ವೆ ಮಾರ್ಗದಲ್ಲಿ ಆಟೋಮ್ಯಾಟಿಕ್ ಸಿಗ್ನಲಿಂಗ್ ಸಿಸ್ಟಂ ಜಾರಿಯಾಗಲಿದೆ.
ರೈಲುಗಳ ವಿಳಂಬ ಸಂಚಾರದಿಂದಾಗಿ, ರೈಲಿನ ಮೂಲಕ ಬೆಂಗಳೂರಿಗೆ ಬರುವ ಪ್ರಯಾಣಿಕರು ಹೆಚ್ಚಾಗುತ್ತಿದ್ದು, ಆದರೆ ಬೆಂಗಳೂರಿನಿಂದ ಸರಿಯಾದ ಸಮಯಕ್ಕೆ ತಮ್ಮ ಊರು ತಲುಪಲು ಆಗ್ತಿಲ್ಲ. ತಮ್ಮ ಊರುಗಳಿಂದ ರಾಜಧಾನಿಗೆ ಬರಬೇಕೆಂದರು ಸರಿಯಾದ ಸಮಯಕ್ಕೆ ತಲುಪಲು ಆಗ್ತಿಲ್ಲ.
ಎಎ ಎಲ್ಲಾ ಸಮಸ್ಯೆಗಳಿಗೆ ಕಾರಣ ಸರಿಯಾಗಿ ಸಿಗ್ನಲ್ ಸಿಗಲ್ಲ ಈ ಕಾರಣಕ್ಕಾಗಿ ಸೌತ್ ವೆಸ್ಟರ್ನ್ ರೈಲ್ವೆ ಆಟೋಮ್ಯಾಟಿಕ್ ಸಿಗ್ನಲಿಂಗ್ ಸಿಸ್ಟಮ್ ಅನ್ನು ಅಳವಡಿಸಲು ಪ್ಲಾನ್ ಮಾಡಿಕೊಂಡಿದ್ದು, ಇದಕ್ಕೆ ಕೇಂದ್ರ ರೈಲ್ವೆ ಬೋರ್ಡ್ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದ್ದು ಆಟೋಮ್ಯಾಟಿಕ್ ಸಿಗ್ನಲಿಂಗ್ ಸಿಸ್ಟಂನಿಂದ ರೈಲ್ವೆ ನಿಲ್ದಾಣದ ಟ್ರ್ಯಾಕ್ ಗಳಲ್ಲಿ ರೈಲುಗಳು ನಿಂತಿರುವ, ತೆರಳಿರುವ ರೈಲಿನ ಬಗ್ಗೆ ಪಕ್ಕಾ ಮಾಹಿತಿ ರೈಲ್ವೆ ಕಮಾಂಡ್ ಸೆಂಟರ್ ಸಿಗಲಿದೆ.
ರೈಲುಗಳ ವಿಳಂಬ ಸಂಚಾರ ನಿಯಂತ್ರಿಸಲು ಅನುಕೂಲವಾಗಲಿದೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಆಟೋಮ್ಯಾಟಿಕ್ ಸಿಗ್ನಲಿಂಗ್ ಸಹಕಾರಿಯಾಗಲಿದ್ದು, ರೈಲ್ವೆ ಅಪಘಾತ ತಡೆಯುವಲ್ಲಿಯು ಪ್ರಮುಖ ಪಾತ್ರವನ್ನು ವಹಿಸಲಿದೆ ಎಂದು ರೈಲ್ವೆ ಅಧಿಕಾರಿ ಕುಸುಮ ಹರಿಪ್ರಸಾದ್ ತಿಳಿಸಿದ್ದಾರೆ.


