ಟ್ರಾಫಿಕ್ ಜಂಕ್ಷನ್ ಗಳಲ್ಲಿ ತೃತೀಯಲಿಂಗಿಗಳು ಪ್ರಯಾಣಿಕರಿಂದ ಬಲವಂತವಾಗಿ ಹಣ ಪಡೆಯುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ನಡು ರಸ್ತೆಯಲ್ಲಿ, ಟ್ರಾಫಿಕ್ ನಲ್ಲಿ ಮಂಗಳಮುಖಿಯರು ಪ್ರಯಾಣಿಕರೊಂದಿಗೆ ಹಣವನ್ನು ಕೇಳುತ್ತಾ, ಭಿಕ್ಷೆ ಬೇಡುತ್ತಾ ಬರುತ್ತಾರೆ. ಹಣ ಕೊಡಲಿಲ್ಲ ಎಂದರೆ ಕೆಲವರು ಅಸಭ್ಯವಾಗಿ ವರ್ತಿಸಿ ರಂಪಾಟ ಮಾಡುತ್ತಾರೆ. ಒಮ್ಮೊಮ್ಮೆ ಎಲ್ಲರ ಮುಂದೆ ಬಾಯಿಗೆ ಬಂದಂತೆ ಮಾತನಾಡಿ, ಪುರುಷರ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿ, ಮುಜುಗರವನ್ನುಂಟುಮಾಡುತ್ತಾರೆ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರದ ಪುಣೆ ಪೋಲೀಸರು ಇದಕ್ಕೆಲ್ಲ ಬ್ರೇಕ್ ಹಾಕಲು ಮುಂದಾಗಿದ್ದಾರೆ.
ಮಂಗಳಮುಖಿಯರಲ್ಲಿ ಹೆಚ್ಚಿನವರು ಪ್ರೀತಿ, ಕರುಣೆ, ವಾತ್ಸಲ್ಯ ಹೊಂದಿರುತ್ತಾರೆ. ಜನರ ಕಷ್ಟಗಳನ್ನು ಅರ್ಥೈಸಿಕೊಳ್ಳುತ್ತಾರೆ. ಹಣವಿಲ್ಲ ಎಂದರೆ ಕೆಲವೊಮ್ಮೆ ತಾವೇ ಹಣ ನೀಡಿ ಮಾತೃಹೃದಯಿಗಳಾಗುತ್ತಾರೆ. ಆದರೆ ಕೆಲವರು ಮಾಡುವ ರಂಪಾಟದಿಂದ ಇಂತಹ ಒಳ್ಳೆಯವರಿಗೂ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಇದರ ತಾಪತ್ರಯವೇ ಬೇಡ ಎಂದು ನಿರ್ಧಾರ ಮಾಡಿರುವ ಮಹಾರಾಷ್ಟ್ರದ ಪುಣೆ ಪೊಲೀಸರು ತೃತೀಯ ಲಿಂಗಿಗಳು ಭಿಕ್ಷೆ ಬೇಡುವುದನ್ನು ಬ್ಯಾನ್ ಮಾಡಿದ್ದಾರೆ.
ಪುಣೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಅವರು ಟ್ರಾಫಿಕ್ ಜಂಕ್ಷನ್ ಗಳಲ್ಲಿ ತೃತೀಯಲಿಂಗಿಗಳು ಪ್ರಯಾಣಿಕರಿಂದ ಬಲವಂತವಾಗಿ ಹಣ ಪಡೆಯುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಇಷ್ಟೇ ಅಲ್ಲದೆ ತೃತೀಯಲಿಂಗಿಗಳು ಹಬ್ಬಗಳು, ಜನನ ಮತ್ತು ಸಾವಿನ ಸಮಯದಲ್ಲಿ ಮನೆ ಮತ್ತು ಸಂಸ್ಥೆಗಳಿಗೆ ಭೇಟಿ ನೀಡುವುದನ್ನು ಗಮನಿಸಿದ್ದೇವೆ. ಈ ವೇಳೆ ಸ್ವಯಂಪ್ರೇರಣೆಯಿಂದ ನೀಡುವ ಹಣಕ್ಕಿಂತ ಹೆಚ್ಚಿನ ಹಣವನ್ನು ಬಲವಂತವಾಗಿ ಪಡೆಯುತ್ತಿದ್ದಾರೆ. ಆದರೆ, ಆಹ್ವಾನವಿಲ್ಲದೆ ಮನೆಗಳಿಗೆ ಭೇಟಿ ನೀಡುವುದನ್ನು ಈ ಆದೇಶದ ಅಡಿಯಲ್ಲಿ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅಮಿತೇಶ್ ಕುಮಾರ್ಸಿ ಆರ್‌ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ಪೊಲೀಸರು ಸ್ವೀಕರಿಸಿದ ಹಲವಾರು ದೂರುಗಳಿಗೆ ಪ್ರತಿಕ್ರಿಯೆಯಾಗಿ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296