ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ಸೊಳ್ಳೆಗಳ ನಾಶಕ್ಕೆ ಚೀನಾದ ಎಂಜಿನಿಯರ್ ಕಂಡು ಹಿಡಿದ ವಿಶಿಷ್ಠ ಸಾಧನವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದು ಕೆಲ ತಿಂಗಳುಗಳಿಂದ ವೈರಲ್ ಆಗಿದೆ. ಇದು ರಾಡಾರ್ ವ್ಯವಸ್ಥೆಯನ್ನು ಹೊಂದಿದ್ದು, ಅದರ ಸುತ್ತಮುತ್ತಲಿನ ಸೊಳ್ಳೆಗಳನ್ನು ತಕ್ಷಣವೇ ಪತ್ತೆ ಮಾಡುತ್ತದೆ. ಅಲ್ಲದೇ ಅವುಗಳನ್ನು ನಾಶಪಡಿಸುವ ಲೇಸರ್ ಪಾಯಿಂಟರ್ ಅನ್ನು ಕೂಡ ಹೊಂದಿದೆ.
ಚಿಕಣಿ ಲೇಸರ್-ಚಾಲಿತ ಫಿರಂಗಿ ಎಂದು ವಿವರಿಸಲಾದ ಈ ಸಾಧನವು ಸೊಳ್ಳೆಗಳನ್ನು ಪತ್ತೆಹಚ್ಚುವ ಮತ್ತು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಚೀನೀ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ವೀಬೊದಲ್ಲಿ ಸಾಧನದ ವೀಡಿಯೋವನ್ನು ಹಂಚಿಕೊಳ್ಳಲಾಗಿತ್ತು. ಇದೀಗ ಮುಂಬೈನಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳಲ್ಲಿ ಏರಿಕೆ ಕಂಡುಬರುತ್ತಿರುವ ಹೊತ್ತಲ್ಲಿ ಈ ವೀಡಿಯೋ ಮತ್ತೆ ಮುನ್ನೆಲೆಗೆ ಬಂದಿದೆ.
ಸದ್ಯ ಈ ವೀಡಿಯೋವನ್ನು ಜನಪ್ರಿಯ ಕಾರು ತಯಾರಕಾ ಕಂಪನಿಯ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ “ಮುಂಬೈನಲ್ಲಿ ಡೆಂಗ್ಯೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೊಳ್ಳೆಗಳನ್ನು ಹುಡುಕಿ ನಾಶಪಡಿಸಬಲ್ಲ ಈ ಚಿಕಣಿ ಫಿರಂಗಿಯನ್ನು ಚೀನಾದ ವ್ಯಕ್ತಿ ಹೇಗೆ ಕಂಡುಹಿಡಿದಿದ್ದು ಎಂದು ನಾನು ಲೆಕ್ಕಾಚಾರ ಹಾಕುತ್ತಿದ್ದೇನೆ! ನಿಮ್ಮ ಮನೆಗೆ ಐರನ್ ಡೋಮ್” ಎಂದು ಬರೆದುಕೊಂಡಿದ್ದಾರೆ.
With dengue on the rise in Mumbai, I’m trying to figure out how to acquire this miniature cannon, invented by a Chinese man, which can seek out & destroy mosquitoes!
An Iron Dome for your Home…
— anand mahindra (@anandmahindra) August 24, 2024
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


