ಆಷಾಢ ಮಾಸದ ಶುಕ್ರವಾರವನ್ನು ಆಷಾಢ ಶುಕ್ರವಾರವೆಂದು ಕರೆಯಲಾಗುತ್ತದೆ. ಈ ದಿನವನ್ನು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಗೆ ಸಮರ್ಪಿತವಾಗಿದೆ. ಕೆಲವರು ಆಷಾಢ ಮಾಸದ ಇಡೀ ತಿಂಗಳು ಲಕ್ಷ್ಮಿಯನ್ನು ಪೂಜಿಸುತ್ತಾರೆ. ಇನ್ನು ಕೆಲವರು ಆಷಾಢದಲ್ಲಿ ಶುಕ್ರವಾರದಂದು ವಿಶೇಷ ಪೂಜೆ ಸಲ್ಲಿಸಲಾಗುವುದು.
ಆಷಾಢ ಮಾಸದಲ್ಲಿ ಹಲವಾರು ಪ್ರಮುಖ ವ್ರತಗಳನ್ನು ಆಚರಿಸಲಾಗುವುದು. ಅದರಲ್ಲೊಂದು ಆಷಾಢ ಶುಕ್ರವಾರ. ಆಷಾಢ ಮಾಸದಲ್ಲಿ ದೇವಿ ಶಕ್ತಿಗಳನ್ನು ಆರಾಧಿಸಲಾಗುವುದು. ಈ ತಿಂಗಳಿನಲ್ಲಿ ದೇವಿಯ ಶಕ್ತಿ ಭೂಮಿಯ ಮೇಲೆ ಅಧಿಕವಿರುತ್ತದೆ, ಇದರಿಂದಾಗಿ ದೇವಿಯನ್ನು ಆರಾಧಿಸುವುದರಿಂದ ಅನೇಕ ಪ್ರಯೋಜನಗಳು ಸಿಗುವುದು.
ಶಕ್ತಿಯ ಆರಾಧನೆ ಇರುವ ದೇವಸ್ಥಾನಗಳಲ್ಲಿ ಈ ಮಾಸ ವಿಶೇಷ. ಉದಾರಣೆಗೆ ಮೈಸೂರಿನ ಚಾಮುಂಡಿ ದೇವಾಲಯ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ ದೇವಾಲಯ ಮುಂತಾದ ಕಡೆಗಳೆಲ್ಲ ಶಕ್ತಿ ಆರಾಧನೆಗೆ ಹೆಸರುವಾಸಿ, ಇಲ್ಲಿ ಆಷಾಢ ಶುಕ್ರವಾರಗಳಂದು ವಿಶೇಷ ಪೂಜೆ ನೆರವೇರುತ್ತದೆ. ಅಂದು ಅಲ್ಲಿ ದರ್ಶನ ಪಡೆಯುವುದು ಕೂಡ ಪುಣ್ಯಕಾರ್ಯ.
ಆಷಾಢ ಮಾಸದ ಮತ್ತೊಂದು ಮಹತ್ವ. ಈ ಅವಧಿಯಲ್ಲಿ ರಥ ಯಾತ್ರೆ, ಚಾರ್ತುಮಾಸ ಯಾತ್ರೆ, ಪಾಲ್ಕಿ ಯಾತ್ರೆ ಮುಂತಾದ ಪೂಜೆ ಹಾಗೂ ವ್ರತಗಳು ಆಷಾಢ ಮಾಸದಲ್ಲಿ ಜನಪ್ರಿಯವಾಗಿದೆ. ಭಕ್ತರು ಈ ಪೂಜೆ, ವ್ರತವನ್ನು ಭಕ್ತಿ, ಸಮರ್ಪಣೆಯೊಂದಿಗೆ ಆಚರಿಸುತ್ತಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


