ಬೆಳೆ ನಾಶಕ್ಕೆ ಸೈನಿಕ ಹುಳು ಕೂಡ ಒಂದು ಕಾರಣ. ಸೈನಿಕ ಹುಳು ಗಳ ನಿಯಂತ್ರಣಕ್ಕಾಗಿ ರೈತರು ಹಲವಾರು ರೀತಿ ಪ್ರಯತ್ನ ಮಾಡಿ ಸೋತಿದ್ದಾರೆ. ಈಗಾಗಲೇ ಬೆಳೆ ನಾಶದಿಂದ ರೈತರು ಕಣ್ಗೆಟ್ಟಿದ್ದಾರೆ. ಅದಕ್ಕಾಗಿ ಸರಿಯಾದ ಪರಿಹಾರವನ್ನು ಇಲ್ಲಿ ತಿಳಿಸಲಾಗಿದೆ.
ಸೈನಿಕ ಹುಳುವು 20-25 ದಿನಗಳ ಜೀವನ ಚಕ್ರ ಹೊಂದಿದ್ದು, ಏಕ ಬೆಳೆಯಲ್ಲೇ ಇದರ ಮೂರು ಹಂತಗಳು (ಮೊಟ್ಟೆ/ ಮರಿಹಳು/ ಪ್ರೌಡ ಚಿಟ್ಟೆ) ಕಾಣಿಸಿಕೊಂಡು ಎಲೆಗಳನ್ನು, ಸುಳಿಗಳನ್ನು ತಿಂದು ರಂಧ್ರಗಳನ್ನು ಮಾಡಿ ಹಿಕ್ಕೆಗಳನ್ನು ಎಲೆಯ ಮೇಲೆಯ ಬಿಡುತ್ತದೆ.
ಅದಕ್ಕಾಗಿ ಶಿವಮೊಗ್ಗ ಕೃಷಿ ವಿಶ್ವವಿದ್ಯಾನಿಲಯದ ಕೀಟಶಾಸ್ತ್ರ ವಿಜ್ಞಾನಿ ಡಾ. ಶರಣಬಸಪ್ಪ ಎಸ್. ದೇಶಮುಖ್ ಅವರು, ಬೆಳೆಯ 45 ದಿನಗಳವರೆಗೆ ಈ ಹುಳು ಕಾಣಿಸಿಕೊಂಡು ಶೇ.70-80 ರವರೆಗೆ ಇಳುವರಿ ನಷ್ಟಕ್ಕೆ ಕಾರಣವಾಗುತ್ತದೆ. ರೈತರು ಪರ್ಯಾಯ ಬೆಳೆ ಪದ್ಧತಿ ರಸಾಯನಿಕ ಸಿಂಪರಣೆ ಮೂಲಕ ಈ ರೋಗವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಜಮೀನುಗಳಲ್ಲಿ ಸೈನಿಕ ಹುಳು ಕಾಟ, ಹತೋಟಿಗೆ ಸಲಹೆಗಳು :
ಬೇಸಾಯ ಶಾಸ್ತ್ರಜ್ಞ ಹೊನ್ನಪ್ಪ ಪ್ರಕಾರ “ಮುಸುಕಿನ ಜೋಳ ಬೆಳೆಯಲ್ಲಿ ಮುಳ್ಳು ಸಜ್ಜೆ ಕಳೆ ನಿರ್ವಹಣೆ ಬಹಳ ಮುಖ್ಯ. ಬಿತ್ತನೆಯಾದ 3 ದಿನಗಳೊಳಗೆ ಅಟ್ರಜಿನ್ 50 WP ಯನ್ನು 1.5 ಕೆ.ಜಿ/ ಒಂದು ಎಕರೆಗೆ ಅಥವಾ ಪೆಂಡಿಮಕಾಲೀನ್ 400 ಎಂ.ಎಲ್/ ಒಂದು ಎಕರೆಗೆ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು . ಹಾಗೆಯೇ 25 ದಿನಗಳ ನಂತರ ಅಂತರ ಬೇಸಾಯ ಮಾಡಿ ಕಳೆ ನಿರ್ವಹಣೆ ಮಾಡಬಹುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


