ಸ್ಯಾಂಡಲ್ ವುಡ್ ಹಿರಿಯ ಹಾಸ್ಯ ನಟ ಸರಿಗಮ ವಿಜಿ ಅವರು ನಿಧನರಾಗಿದ್ದಾರೆ. ಯಶವಂತಪುರದಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ವಿಜಿ ಅವರ ಸಂಪೂರ್ಣ ಹೆಸರು ವಿಜಯ್ ಕುಮಾರ್ ಆಗಿತ್ತು. 1965ರಿಂದ 2024ರ ವರೆಗೆ ಆ್ಯಕ್ಟೀವ್ ಆಗಿದ್ದ ಸರಿಗಮ ವಿಜಿ 250ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
75ಕ್ಕೂ ಅಧಿಕ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ವಿಜಿ ಕೆಲಸ ಮಾಡಿದ್ದರು, ಬೆಳವಳದ ಮಡಿಲಲ್ಲಿ ಚಿತ್ರದಲ್ಲಿ ವಿಜಿ ಮೊದಲ ಬಾರಿಬಣ್ಣ ಹಚ್ಚಿದ್ದರು. ವಿಜಿ ನಟಿಸುತ್ತಿದ್ದ ‘ಸಂಸಾರದಲ್ಲಿ ಸರಿಗಮ’ ನಾಟಕ ಬಹಳ ಜನಪ್ರಿಯವಾಗಿತ್ತು. ಹಾಗಾಗಿ ಅವರ ಹೆಸರಿನ ಜೊತೆ ಸರಿಗಮ ಎನ್ನುವುದು ಸೇರಿಕೊಂಡಿತ್ತು. ಈ ನಾಟಕ 500ಕ್ಕೂ ಅಧಿಕ ಪ್ರದರ್ಶನ ಕಂಡಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx