ಬೀಜಿಂಗ್: ಭಾರೀ ಮಳೆಯಿಂದಾಗಿ ದಕ್ಷಿಣ ಚೀನಾದ ಗುವಾಂಗ್ ಡಾಂಗ್ ಪ್ರಾಂತ್ಯದಲ್ಲಿ ಹೆದ್ದಾರಿ ಕುಸಿತದಿಂದ 48 ಮಂದಿ ಮೃತಪಟ್ಟ ಘಟನೆ ನಡೆದಿದೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ದಟ್ಟವಾದ ಜನನಿಬಿಡ ಕೈಗಾರಿಕಾ ಶಕ್ತಿ ಕೇಂದ್ರವಾದ ಗುವಾಂಗ್ ಡಾಂಗ್, ಇತ್ತೀಚಿನ ವಾರಗಳಲ್ಲಿ ಹವಾಮಾನ ವೈಪರೀತ್ಯಗಳಿಂದಾಗಿ ಸಂಭವಿಸಿದ ವಿಪತ್ತುಗಳ ಸರಮಾಲೆಯಿಂದ ಹಾನಿಗೊಳಗಾಗಿದೆ.
ಚಂಡಮಾರುತಗಳು ವರ್ಷದಲ್ಲಿ ನಿರೀಕ್ಷೆಗಿಂತ ಹೆಚ್ಚು ಭಾರೀ ಪ್ರಮಾಣದಲ್ಲಾಗಿವೆ. ಹವಾಮಾನ ಬದಲಾವಣೆಗೆ ಸಂಭವಿಸುತ್ತಿವೆ. ಗುರುವಾರ ಬೆಳಗ್ಗೆ ಹೆದ್ದಾರಿ ಕುಸಿತದಿಂದ 36 ಮಂದಿ ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಮೃತರ ಸಂಖ್ಯೆ 48 ಕ್ಕೆ ಏರಿದೆ ಎಂದು ವರದಿ ತಿಳಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


