nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕಮಲನಗರ, ತೋರಣ ಗ್ರಾಮದ ಸಂಪರ್ಕ ರಸ್ತೆ ದುರಸ್ತಿಗೆ ಹರಿದೇವ ಸಂಗನಾಳ ಆಗ್ರಹ

    September 18, 2025

    ಬೀದರ್ ನಲ್ಲಿ ತಲೆಕೆಳಗಾಗಿ ಹಾರಿದ ರಾಷ್ಟ್ರಧ್ವಜ

    September 18, 2025

    ವಿಶ್ವಕರ್ಮ ಸಮಾಜವು ಸಂಘಟಿತರಾದಾಗ ಯೋಜನೆಗಳ ಸದ್ಬಳಕೆಗೆ ಸಹಕಾರಿ: ತಹಶೀಲ್ದಾರ್ ಮೋಹನಕುಮಾರಿ ಸಲಹೆ

    September 18, 2025
    Facebook Twitter Instagram
    ಟ್ರೆಂಡಿಂಗ್
    • ಕಮಲನಗರ, ತೋರಣ ಗ್ರಾಮದ ಸಂಪರ್ಕ ರಸ್ತೆ ದುರಸ್ತಿಗೆ ಹರಿದೇವ ಸಂಗನಾಳ ಆಗ್ರಹ
    • ಬೀದರ್ ನಲ್ಲಿ ತಲೆಕೆಳಗಾಗಿ ಹಾರಿದ ರಾಷ್ಟ್ರಧ್ವಜ
    • ವಿಶ್ವಕರ್ಮ ಸಮಾಜವು ಸಂಘಟಿತರಾದಾಗ ಯೋಜನೆಗಳ ಸದ್ಬಳಕೆಗೆ ಸಹಕಾರಿ: ತಹಶೀಲ್ದಾರ್ ಮೋಹನಕುಮಾರಿ ಸಲಹೆ
    • ಎಂ.ಎನ್.ಭೀಮರಾಜ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ
    • ದನಗಳ ಅವಶೇಷ ಅರಣ್ಯ ಭೂಮಿಯಲ್ಲಿ ಎಸೆದ ಆರೋಪ: ಇಬ್ಬರ ಬಂಧನ
    • ಡಿಸೆಂಬರ್ 31 ರ ಮುನ್ನ ಹೊಸ ಚಿಕ್ಕೋಡಿ ಜಿಲ್ಲೆ ರಚನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
    • ತುಮಕೂರು: ಸಮೀಕ್ಷೆಯಿಂದ ಕೈ ಬಿಡಲು ಆಶಾ ಕಾರ್ಯಕರ್ತೆಯರಿಂದ ಆಗ್ರಹ
    • ರಾಜ್ಯದಲ್ಲಿರೋದು ಚುನಾಯಿತ  ಸರ್ಕಾರ ಅಲ್ಲ, ಮಾಫಿಯಾ ಸರ್ಕಾರ: ಆರ್‌.ಅಶೋಕ್‌ ಆರೋಪ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಹಿರಿಯೂರು ಶಾಸಕಿಯ ಪತಿಯ ದರ್ಬಾರ್, ಜಿಲ್ಲಾಧಿಕಾರಿಯ ಅಸಹಾಯಕತೆ ನಾಚಿಕೆಗೇಡು: ಕಾಂಗ್ರೆಸ್ ಆಕ್ರೋಶ
    Uncategorized February 9, 2022

    ಹಿರಿಯೂರು ಶಾಸಕಿಯ ಪತಿಯ ದರ್ಬಾರ್, ಜಿಲ್ಲಾಧಿಕಾರಿಯ ಅಸಹಾಯಕತೆ ನಾಚಿಕೆಗೇಡು: ಕಾಂಗ್ರೆಸ್ ಆಕ್ರೋಶ

    By adminFebruary 9, 2022No Comments3 Mins Read
    congress

    ಹಿರಿಯೂರು: ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಪತಿಯ ದರ್ಬಾರ್ ಹಾಗೂ ಇದರ ವಿರುದ್ಧ ಕ್ರಮಕೈಗೊಳ್ಳದೇ ಅಸಹಾಯಕತೆ ವ್ಯಕ್ತಪಡಿಸುತ್ತಿರುವ ಜಿಲ್ಲಾಡಳಿತದ ವಿರುದ್ಧ  ಮಾಜಿ ಸಚಿವ ಡಿ.ಸುಧಾಕರ್ ಹಾಗೂ  ಹಿರಿಯೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಆದಿವಾಲ ಗ್ರಾಮದಲ್ಲಿ ರೂ. 25 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ  ಹೈಟೆಕ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ  ಉದ್ಘಾಟನೆಯ ಸರ್ಕಾರಿ ಕಾರ್ಯಕ್ರಮದಲ್ಲಿ  ಹಿರಿಯೂರು ಶಾಸಕಿಯ ಪತಿಯ ಫೋಟೋವನ್ನು ದೊಡ್ಡದಾಗಿ ಹಾಕಲಾಗಿತ್ತು. ಜೊತೆಗೆ ಶಾಸಕಿ ಮಾಡಬೇಕಾದ ಭಾಷಣವನ್ನು ಅವರ ಪತಿ ಮಾಡಿದ್ದರು ಇದರ ಬಗ್ಗೆ ಕ್ರಮಕೈಗೊಳ್ಳಬೇಕಾದ ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತಾ,  ನಾನು ಜಿಲ್ಲಾಧಿಕಾರಿಯಾಗಿದ್ದರೂ ಬಹಳ ಅಸಹಾಯಕಳಾಗಿದ್ದೇನೆ ಎಂದು ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದರು. ಇಂತಹ ಹೇಳಿಕೆ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಖಾದಿರಮೇಶ್ ಹೇಳಿದರು.


    Provided by
    Provided by
    Provided by

    ಶಾಸಕಿ ಪೂರ್ಣಿಮಾಶ್ರೀನಿವಾಸ್ ರವರ ಪತಿ ಡಿ.ಟಿ ಶ್ರೀನಿವಾಸ್  ರವರು   ಹಿರಿಯೂರು ತಾಲ್ಲೂಕಿನ ಪ್ರತಿಯೊಂದು ಗ್ರಾಮ ಪಂಚಾಯತಿಯ ಪಿ ಡಿ ಓ ಅಧಿಕಾರಿಗಳನ್ನು ಕರೆದುಕೊಂಡು,  ಗ್ರಾಮ ಪಂಚಾಯತಿಯ ಅಧ್ಯಕ್ಷರು,  ಉಪಾದ್ಯಾಕ್ಷರು, ಸದಸ್ಯರೊಂದಿಗೆ   ಸಭೆ ನಡೆಸಿ,  ಗ್ರಾಮ ಪಂಚಾಯತಿಗಳಲ್ಲಿ  ಏನು ಕೆಲಸ ನಡೆಯಬೇಕು. ಅದರ ಬಗ್ಗೆ  ಒಂದು ಪಟ್ಟಿ ಕೊಡಿ ನಾನು ಸರ್ಕಾರದಿಂದ ಅನುದಾನ ತಂದು ಮಾಡುತ್ತೇನೆ ಎಂಬುದಾಗಿ  ಹೇಳಿಕೆ ನೀಡುತ್ತಿದ್ದರೂ, ಸಂಬಂಧ ಪಟ್ಟ ಸರ್ಕಾರಿ ಇಲಾಖೆಯ ಮೇಲಾಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಒಬ್ಬ ಶಾಸಕ  ಮಾಡಬೇಕಾದ ಕಾರ್ಯಕ್ರಮವನ್ನು ,  ಒಬ್ಬ ಜಿಲ್ಲಾಧಿಕಾರಿ ಮಾಡಬೇಕಾದ ಕಾರ್ಯಕ್ರಮವನ್ನು  ಖಾಸಗಿ

    ವ್ಯಕ್ತಿ ಮಾಡುತ್ತಿದ್ದು,  ಈ ಖಾಸಗಿ ವ್ಯಕ್ತಿಯ  ಹಿಂದೆ ಓಡುವಂತಹ ಅಧಿಕಾರಿಗಳ ಬಗ್ಗೆ ಕ್ರಮ ತೆಗೆದುಕೊಳ್ಳುವವರು  ಯಾರು? ಎಂದು  ಖಾದಿ ರಮೇಶ್ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ನಾವು ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ರಾಜ್ಯಪಾಲರಿಗೂ , ಮುಖ್ಯಮಂತ್ರಿಗಳಿಗೂ , ಆರೋಗ್ಯ ಸಚಿವರಿಗೂ ಈಗಾಗಲೇ  ದೂರನ್ನು  ಸಲ್ಲಿಸಿದ್ದೇವೆ  ಎಂದು ಅವರು ತಿಳಿಸಿದರು.

    ಈ ತಾಲ್ಲೂಕಿನ ಅಧಿಕಾರಿಗಳಿಗೆ ಏನಾಗಿದೆ. ಇವರೇನೂ ಈ ದೇಶದ ಸಂವಿಧಾನವನ್ನು ಓದಿಕೊಂಡು ಅಧಿಕಾರಿಯಾಗಿದ್ದರೋ ಏನೋ ಎಂಬುದೇ ತಿಳಿಯುತ್ತಿಲ್ಲ ಎಂದು ಖಾದಿ ರಮೇಶ್ ಅಧಿಕಾರಿಗಳ ಮೇಲೆ ಬೇಸರ ವ್ಯಕ್ತಪಡಿಸಿದ್ದರು.

    ಹಿರಿಯೂರು  ನಗರಸಭೆಯ ಸದಸ್ಯರಾದ  ಅಜ್ಜಪ್ಪ ಮಾತನಾಡಿ,   ಹಿರಿಯೂರು ತಾಲ್ಲೂಕಿನಲ್ಲಿ  ಶಿಷ್ಟಾಚಾರ ನಡೆಯುತ್ತಿರುವುದು ಇದೇನು ಹೊಸದಲ್ಲ, ಕಳೆದ  ಮೂರು ನಾಲ್ಕು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದೆ.  ಕಳೆದ  ಒಂದು ವರ್ಷಗಳ ಹಿಂದೆ  ಹಿರಿಯೂರು ನಗರದ ಟಿ.ಬಿ. ಸರ್ಕಲ್ ವೃತ್ತದ ಬಳಿ ಇರುವ ಅಂಬೇಡ್ಕರ್ ಸರ್ಕಲ್  ಬಳಿ  ಅಂಬೇಡ್ಕರ್ ಸರ್ಕಲ್ ನ ಉದ್ಘಾಟನೆ  ಸಮಯದಲ್ಲಿ ಪಾಂಬ್ಲೆಟ್ಸ್ ಪ್ರಿಂಟ್ ಮಾಡಿಸಿದ  ಸಂದರ್ಭದಲ್ಲಿ ಕರ್ನಾಟಕ ಸರ್ಕಾರವೆಂದು ಪ್ರಿಂಟ್ ಮಾಡಿಸಿದರು .  ಆ ಸಂದರ್ಭದಲ್ಲಿ ನಗರಸಭೆ ಕಮಿಷನರ್ ಗಮನಕ್ಕೆ ಸಹ ತಿಳಿದುಬಂದಿಲ್ಲ  ಎಂಬುದಾಗಿಯೂ , ತಾಲ್ಲೂಕು ಆಡಳಿತ ತಹಶೀಲ್ದಾರರ ಗಮನಕ್ಕೆ ಸಹ ತಿಳಿಸದೇ,ನಿರ್ಲಕ್ಷ್ಯತನವಾಗಿ ಸರ್ಕಾರಿ ಕಾರ್ಯಕ್ರಮ ವೆಂದು ಪಾಂಬ್ಲೆಟ್ಸ್ ಪ್ರಿಂಟ್ ಮಾಡಿರಬಹುದು ಎಂದು ಇದನ್ನು  ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ ಇದರ  ಬಗ್ಗೆ  ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಆ ಸಂದರ್ಭದಲ್ಲಿ ಶಿಸ್ತು ಕ್ರಮಕ್ಕೆ ಜಿಲ್ಲಾ ಪಂಚಾಯತಿಯ ಅಧ್ಯಕಕ್ಷರು ಹಾಗೂ ನಗರಸಭೆಯಿಂದ ಗೌರ್ನಮೆಂಟ್ ಸೆಕ್ರೆಟರಿಯವರಿಗೆ  ದೂರು ನೀಡಿದ್ದೇವೆ , ಅದ ನಂತರ  ಶಿಷ್ಠಾಚಾರವಾಯಿತು. ಅಲ್ಲಿ ತಹಶೀಲ್ದಾರು, ಜಿಲ್ಲಾಧಿಕಾರಿ, ಕಮಿಷನರ್  ಸೇರಿ ಆರು ಬಾರಿ ಕಟ್ಟಕಡೆಯಲ್ಲಿ  (ಕೋರ್ಟು ) ನಿಂತು ಬಂದಿರುವುದಾಗಿಯೂ ನಗರಸಭೆ ಸದಸ್ಯರಾದ ಅಜ್ಜಪ್ಪ ತಿಳಿಸಿದರು. ಸರ್ಕಾರ ಮಟ್ಟದಲ್ಲಿಯೇ ಈ ವಿಷಯವನ್ನು ಮುಚ್ಚಿಹಾಕುತ್ತಿದ್ದಾರೆ. ಜಿಲ್ಲೆಯ ಜಿಲ್ಲಾಧಿಕಾರಿಗಳೇ  ತಾನು ಅಸಹಾಯಕಳಾಗಿದ್ದೇನೆ ಎನ್ನುತ್ತಿದ್ದಾರೆ. ಅದು ಜಿಲ್ಲಾಧಿಕಾರಿಗಳ ಲಕ್ಷಣವಲ್ಲ ಎಂದು ಅಜ್ಜಪ್ಪ ತಿಳಿಸಿದರು.  .

    ಈ ಸಂದರ್ಭದಲ್ಲಿ ನಗರ  ಬ್ಲಾಕ್  ಕಾಂಗ್ರೆಸ್ ಸಮಿತಿಯ ನಗರಸಭಾ ಉಪಾಧ್ಯಾಕ್ಷರಾದ  ಬಿ.ಎನ್. ಪ್ರಕಾಶ್, ನಗರಸಭಾ ಅಧ್ಯಕ್ಷರಾದ  ಅಜ್ಜಪ್ಪ , ಅನಿಲ್ ಕುಮಾರ್ , ಸಮೀವುಲ್ಲಾ , ಚಿದಾನಂದಸ್ವಾಮಿ ಆರ್., ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಎಸ್.ಟಿ.ವಿಭಾಗದ, ಎಸ್.ಸಿ.ನಗರ ಘಟಕ ಅಧ್ಯಕ್ಷರಾದ  ಚಂದ್ರನಾಯ್ಕ ,  ಕಾರ್ಮಿಕ ವಿಭಾಗದ  ಅಧ್ಯಕ್ಷರಾದ  ವಿ.ಶಿವಕುಮಾರ್ , ಎಸ್.ಸಿ. ಘಟಕದ ಉಪಾಧ್ಯಾಕ್ಷರಾದ ಜ್ಞಾನೇಶ್, ಮಾಜಿ ಪಿ.ಎಲ್. ಡಿ.ಬ್ಯಾಂಕ್  ಅಧ್ಯಕ್ಷರಾದ ಸಾದತ್ ವುಲ್ಲಾ , ಹೊಸ ಯಳನಡು ಗ್ರಾಮ ಪಂಚಾಯತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ತಿಪ್ಪೇಸ್ವಾಮಿ ,ಶರಣಪ್ಪ ಇತರರು  ಉಪಸ್ಥಿತರಿದ್ದರು .

    ವರದಿ: ಮುರುಳಿಧರನ್ ಆರ್. ಹಿರಿಯೂರು (ಚಿತ್ರದುರ್ಗ).


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

    admin
    • Website

    Related Posts

    ಶಾಲಾ ಮಕ್ಕಳ ಸಮಸ್ಯೆ ಖುದ್ದು ಅನುಭವಿಸಿದ ಸಿಇಒ: ಅಧಿಕಾರಿಗಳಿಗೆ ತರಾಟೆ

    September 12, 2025

    ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ: ಬಿಜೆಪಿ ಬಳಿಕ ಜೆಡಿಎಸ್ ನಿಂದಲೂ ಆರೋಪ

    August 30, 2025

    ನೀಲಿ ಬಣ್ಣದ ಮೊಟ್ಟೆಯಿಟ್ಟು ಅಚ್ಚರಿ ಮೂಡಿಸಿದ ಕೋಳಿ!

    August 27, 2025
    Our Picks

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025

    ರಾಜಕೀಯ, ಆರ್ಥಿಕ ಸ್ಥಿರತೆ ಭಾರತ 3ನೇ ಅತೀ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಲಿದೆ: ಪ್ರಧಾನಿ ಮೋದಿ

    August 29, 2025

    ದರ್ಗಾದ ಮೇಲ್ಛಾವಣಿ ಕುಸಿದು 5 ಮಂದಿ ಸಾವು

    August 16, 2025

    ಹಿಂದೂ ಎಂದು ನಂಬಿಸಿ ಅನೇಕ ಯುವತಿಯರನ್ನು ವಿವಾಹವಾಗಿದ್ದ ವ್ಯಕ್ತಿಯ ಬಂಧನ

    August 16, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಕಮಲನಗರ, ತೋರಣ ಗ್ರಾಮದ ಸಂಪರ್ಕ ರಸ್ತೆ ದುರಸ್ತಿಗೆ ಹರಿದೇವ ಸಂಗನಾಳ ಆಗ್ರಹ

    September 18, 2025

    ಬೀದರ್: ಜಿಲ್ಲೆಯ ಕಮಲನಗರ ಹಾಗೂ ತೋರಣ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವಂತಹ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಅಧಿಕಾರಿಗಳು ದುರಸ್ತಿಗೆ ಮುಂದಾಗಬೇಕು ಎಂದು…

    ಬೀದರ್ ನಲ್ಲಿ ತಲೆಕೆಳಗಾಗಿ ಹಾರಿದ ರಾಷ್ಟ್ರಧ್ವಜ

    September 18, 2025

    ವಿಶ್ವಕರ್ಮ ಸಮಾಜವು ಸಂಘಟಿತರಾದಾಗ ಯೋಜನೆಗಳ ಸದ್ಬಳಕೆಗೆ ಸಹಕಾರಿ: ತಹಶೀಲ್ದಾರ್ ಮೋಹನಕುಮಾರಿ ಸಲಹೆ

    September 18, 2025

    ಎಂ.ಎನ್.ಭೀಮರಾಜ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

    September 18, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.