ತುಮಕೂರು: ಜಿಲ್ಲೆಯ ಗೃಹರಕ್ಷಕದಳದ ವಿವಿಧ ಘಟಕಗಳಲ್ಲಿ ಖಾಲಿ ಇರುವ 255 ಗೃಹರಕ್ಷಕ/ ಗೃಹರಕ್ಷಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಫೆಬ್ರವರಿ 27ರಂದು ಸಂದರ್ಶನ ಏರ್ಪಡಿಸಲಾಗಿದೆ.
ತುಮಕೂರು ಘಟಕದ 45 ಹುದ್ದೆ, ಕ್ಯಾತಸಂದ್ರ–45, ಕೊರಟಗೆರೆ–15, ಮಧುಗಿರಿ–11, ಪಾವಗಡ–12, ಶಿರಾ–11, ಚಿಕ್ಕನಾಯಕನಹಳ್ಳಿ–5, ತಿಪಟೂರು–8, ತುರುವೇಕೆರೆ–9, ಕುಣಿಗಲ್–18, ಗುಬ್ಬಿ–6, ಊರ್ಡಿಗೆರೆ–18, ನೊಣವಿನಕೆರೆ–10, ಹೊನ್ನವಳ್ಳಿ–6, ಅಮೃತೂರು–12, ಮಿಡಿಗೇಶಿ–11, ತಾವರೆಕೆರೆ–3, ಕಳ್ಳಂಬೆಳ್ಳ–6, ವೈ.ಎನ್.ಹೊಸಕೋಟೆ–4 ಸೇರಿದಂತೆ ಒಟ್ಟು 255 ಹುದ್ದೆಗಳ ಆಯ್ಕೆಗಾಗಿ ಫೆ.27ರಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲಾ ಪೊಲೀಸ್ ಕವಾಯತು ಮೈದಾನ(ಡಿಎಆರ್)ದಲ್ಲಿ ಸಂದರ್ಶನ ನಡೆಯಲಿದೆ.
ಸದರಿ ಹುದ್ದೆಗಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ಎಸ್.ಎಸ್.ಎಲ್.ಸಿ. ಮೂಲ ಅಂಕಪಟ್ಟಿ, ಆಧಾರ್ ಕಾರ್ಡ್, ಪಾನ್ ಕಾರ್ಡ್, ವಾಸಸ್ಥಳ ದೃಢೀಕರಣ(ಪಡಿತರ ಚೀಟಿ) ಪತ್ರದ ಮೂಲ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕೆಂದು ಜಿಲ್ಲಾ ಗೃಹರಕ್ಷಕ ದಳದ ಪ್ರಭಾರ ಸಮಾದೇಷ್ಟರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿ. ಮರಿಯಪ್ಪ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4