ತಿಪಟೂರು: ನಗರದ ಕಲ್ಪತರು ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷರ ಮತ್ತು ಮಹಿಳೆಯರ ಖೋ ಖೋ ಪಂದ್ಯಾವಳಿ ನಡೆಯಿತು.
ಈ ಪಂದ್ಯದಲ್ಲಿ 45 ಪುರುಷರ ತಂಡ ಹಾಗೂ 25 ಮಹಿಳಾ ತಂಡ ಭಾಗವಹಿಸಿದ್ದು, ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲಾ ತಾಲೂಕುಗಳಿಂದ ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಆಗಮಿಸಿದ್ದಾರೆ. ನೂರು ಜನ ಕ್ರೀಡಾ ಅಧಿಕಾರಿಗಳು ಕೂಡ ಭಾಗವಹಿಸಿದ್ದಾರೆ.
ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಮೂರೂವರೆ ಲಕ್ಷ ರೂ.ಗಳ ನಗದು ಮತ್ತು ಪಾರಿತೋಷಕಗಳನ್ನು ನೀಡಲಾಗುವುದು. ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಕ್ರೀಡಾಅಧಿಕಾರಿಗಳಿಗೆ ಊಟ ವಸತಿ ಸೌಲಭ್ಯ ಮಾಡಲಾಗಿದೆ. ಈ ಕ್ರೀಡಾಂಗಣದಲ್ಲಿ ನಾಲ್ಕು ಅಂಕಗಳನ್ನು ಮಾಡಲಾಗಿದ್ದು, ಒಂದು ಕ್ರೀಡಾಂಗಣಕ್ಕೆ ಸುತ್ತ ಮ್ಯಾಟ್ ಗಳನ್ನು ಹಾಕಿ ಗ್ಯಾಲರಿ ನಿರ್ಮಿಸಿ ದೀಪಾಲಂಕಾರ ಗಳನ್ನು ಮಾಡಲಾಗಿದೆ. ಹೊನಲು ಬೆಳಕಿನ ಕೋಕೋ ಪಂದ್ಯಾವಳಿಗೆ ಸುತ್ತಮುತ್ತ ಕಲ್ಪತರು ಕ್ರೀಡಾಂಗಣ ಪೂರ್ತಿ ವಿಜೃಂಭಣೆಯಿಂದ ಕಂಗೊಳಿಸುತ್ತಿದೆ. ಈ ಪಂದ್ಯಾಟದಲ್ಲಿ ಆಯ್ಕೆಯಾಗುವ ತಂಡಗಳನ್ನು ಮಧ್ಯಪ್ರದೇಶದ ಜಬಲ್ ಪುರದಲ್ಲಿ ನಡೆಯುವ ರಾಷ್ಟ್ರೀಯ ಸೀನಿಯರ್ ಕೋಕೋ ಪಂದ್ಯಕ್ಕೆ ಆಯ್ಕೆ ಮಾಡಲಾಗುವುದು.
ಬಹುಮಾನ ವಿತರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ್, ಅಖಿಲ ಭಾರತ ಕೋಕೋ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಹೇಂದರ್ ಸಿಂಗ್ ತ್ಯಾಗಿ, ಖ್ಯಾತ ಚಲನಚಿತ್ರ ಹಾಸ್ಯನಟ ದೊಡ್ಡಣ್ಣ, ಮೂಡಬಿದ್ರೆಯ ಆಳ್ವಾಸ್ ಸಂಸ್ಥೆಯ ವಿವೇಕ್ ಆಳ್ವಾಸ್, ಕನ್ನಡಪರ ಹೋರಾಟಗಾರ ಪ್ರವೀಣ್ ಶೆಟ್ಟಿ ಮತ್ತಿತರು ಭಾಗವಹಿಸಿದ್ದರು.
ವರದಿ: ಮಂಜು ಗುರುಗದಹಳ್ಳಿ
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700