ಬೆಂಗಳೂರು: ಹನಿಟ್ರ್ಯಾಪ್ ಯತ್ನ ಪ್ರಕರಣ ರಾಜ್ಯದಲ್ಲಿ ರಾಜಕೀಯ ತಿರುವು ಪಡೆದುಕೊಂಡಿದ್ದು, ಪ್ರಭಾವಿ ನಾಯಕನ ಪಾತ್ರದ ಬಗ್ಗೆ ಸಚಿವರು ಮತ್ತು ಶಾಸಕರ ಗುಂಪು ಹೈಕಮಾಂಡ್ ನ್ನು ಭೇಟಿ ಮಾಡಲು ಯೋಜನೆ ರೂಪಿಸಿದೆ ಎನ್ನಲಾಗಿದೆ.
ದೂರು ನೀಡುತ್ತೇನೆ ಎನ್ನುತ್ತಿರುವ ಕೆ.ಎನ್.ರಾಜಣ್ಣ, ದೂರು ನೀಡದೇ ವಿಳಂಬ ಮಾಡುತ್ತಿದ್ದಾರೆ. ಪೊಲೀಸ್ ಠಾಣೆಯಲ್ಲಿ, ಕೋರ್ಟ್ ನಲ್ಲಿ ಬಗೆಹರಿಯಬೇಕಾಗಿದ್ದ ವಿಚಾರ ಸದನದಲ್ಲಿ ಪ್ರಸ್ತಾಪವಾಗಿದ್ದು, ಕೇವಲ ವಿವಾದವಾಗಿಯೇ ಮುಂದುವರಿದಿದೆ.
ದೂರು ದಾಖಲಿಸಲು ಕೆ.ಎನ್.ರಾಜಣ್ಣ ವಿಳಂಬ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ದೂರು ದಾಖಲಿಸಲಿ ರಾಜಣ್ಣ ವಿಳಂಬ ಮಾಡುತ್ತಿರುವುದೇಕೆ? ಹನಿಟ್ರ್ಯಾಪ್ ಮಾಡಿದ ಆರೋಪಿಗಳು ಇಂತಹವರೇ ಎನ್ನುವುದು ತಿಳಿದಿದ್ದರೂ, ರಾಜಣ್ಣ ಆರೋಪ ಮಾಡಿ ಕಾಲಹರಣ ಮಾಡುತ್ತಿರುವುದೇಕೆ ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4