ಬೆಂಗಳೂರು: ಮಾಜಿ ಸಚಿವ ಬಿಜೆಪಿ ಶಾಸಕ ಮುನಿರತ್ನಂ ನಾಯ್ಡು ವಿರುದ್ಧ ಆರೋಪಿಸಿ ಹೊಸ ಸಿಡಿ ಲೇಡಿ ಫೇಸ್ ಬುಕ್ ಪೇಜ್ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
ಆರ್.ಆರ್ ನಗರ ಅಷ್ಟೇ ಅಲ್ಲ. ಇಡೀ ರಾಜ್ಯದಲ್ಲಿ ಭೂಕಂಪ ಸೃಷ್ಟಿಸುವ ಸಿಡಿ ಇದಾಗಿದೆ. ಬೇರೆ ಯಾವ ಹೆಣ್ಣು ಮಕ್ಕಳಿಗೂ ಈ ಸ್ಥಿತಿ ಬರಬಾರದು ಎಂದು ಸಿಡಿ ಲೇಡಿ ಬೆಳ್ಳಂ ಬೆಳಗ್ಗೆ ವಿಡಿಯೋ ಮಾಡಿ ಗುಡುಗಿದ್ದಾರೆ. ನನ್ನ ಜೀವನದ ದುರಂತಕ್ಕೆ ಮುನಿರತ್ನ ಅವರೇ ಹೊಣೆ. ಯಾವುದೇ ಕಾರಣಕ್ಕೂ ಈ ಹೋರಾಟ ಕೈ ಬಿಡುವುದಿಲ್ಲ. ಮುನಿರತ್ನರವರ ಹನಿ ಟ್ರ್ಯಾಪ್ ದಂಧೆ ಬಯಲಿಗೆ ಎಳೆಯುತ್ತೇನೆ. ನನ್ನನ್ನು ಬಳಸಿಕೊಂಡು ಹನಿ ಟ್ರ್ಯಾಪ್ ಮಾಡಿಸುತ್ತಿದ್ದರು ಎಂದು ಮಹಿಳೆ ಗುರುತು ಮರೆಮಾಚಿಕೊಂಡು ಒಕ್ಕಲಿಗರು ರಾಜರಾಜೇಶ್ವರಿ ನಗರ ಫೇಸ್ ಬುಕ್ ಪೇಜ್ ಮೂಲಕ ಸಿಡಿ ಬಾಂಬ್ ಎಸೆದಿದ್ದಾರೆ.
ನನ್ನ ಜೀವನದ ಅದೋಗತಿಗೆ ಕಾರಣವೇ ಮಿಸ್ಟರ್ ಮುನಿರತ್ನ. ಎಲ್ಲಾ ಪ್ಲ್ಯಾನ್ ಮಾಡಿ ಎಕ್ಸಿಕ್ಯೂಟ್ ಮಾಡಿದ್ದೆ ಮುನಿರತ್ನ, ಅದಕ್ಕೋಸ್ಕರವೇ ನನ್ನ ಈ ಹೋರಾಟ. ಇದು ಅಂತ್ಯವಾಗಲೇಬೇಕು ಎಂದಿದ್ದಾರೆ.


