ತಿಪಟೂರು: ಖ್ಯಾತ ವೈದ್ಯ ಡಾ.ಶ್ರೀಧರ್ ತಿಪಟೂರಿನ ಜನತೆಗೆ ವೈದ್ಯಕೀಯ ಸೇವೆ ಜೊತೆಗೆ ಅನೇಕ ಸಾಮಾಜಿಕ ಸೇವಾ ಕಾರ್ಯ ಗಳನ್ನು ಮಾಡುತ್ತಿದ್ದಾರೆ. ಅವರು ಮಾಡುತ್ತಿರುವ ಕಾರ್ಯಕ್ರಮಗಳು ಪ್ರತಿದಿನ ಬಡ ಜನರಿಗೆ ಅನ್ನಪೂರ್ಣ ಕಾರ್ಯಕ್ರಮದ ಮೂಲಕ ಅನ್ನದಾಸೋಹ ಹಾಗೂ ಯುವಜನತೆಗೆ ಉಚಿತ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪಿಸಿ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆಂದು ತಿಪಟೂರಿನ ಕಲಾಕೃತಿಯ ಅಧ್ಯಕ್ಷ ಶಿವಪ್ರಸಾದ್ ತಿಳಿಸಿದರು
ವೈದ್ಯಕೀಯ ಸೇವೆ ಮತ್ತು ಇತರೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವವರಿಗೆ ನಮೃತ ಆಯಿಲ್ ಮಿಲ್ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಶ್ರೀಧರ್, ಕಷ್ಟದಿಂದ ಮೇಲೆ ಬಂದವರಿಗೆ ಕಷ್ಟದ ಅರಿವು ಇರುತ್ತದೆ. ಶಿವಪ್ರಸಾದ್ ಅವರು ಸ್ಥಳೀಯವಾಗಿ ಸಾವಿರಾರು ಜನಕ್ಕೆ ಉದ್ಯೋಗ ನೀಡುವುದರ ಜೊತೆಗೆ ಹಲವಾರು ಸಮಾಜ ಕಾರ್ಯಗಳಲ್ಲಿ ತೊಡಗಿಕೊಂಡಿರುತ್ತಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಡಾ. ವಿವೇಕ್, ಉದಯ ರವಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ.ರಾಜಣ್ಣ, ವೊಡಾಫೋನ್ ಚಂದ್ರು, ಹಲವಾರು ಸಾರ್ವಜನಿಕರು ಮತ್ತು ಕಲಾಕೃತಿ ತಂಡದವರುಭಾಗವಹಿಸಿದ್ದರು.
ವರದಿ: ಆನಂದ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4