ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಅವರ ಹಿರಿಯ ಸಹೋದರ ಕೂಡಾ ಅಸಹಜ ಲೈಂಗಿಕ ದೌರ್ಜನ್ಯ ಆರೋಪದಡಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ಇಬ್ಬರೂ ಕೂಡಾ ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಂದೇ ಸೆಲ್ ನಲ್ಲಿದ್ದಾರೆ.
ಸದ್ಯ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಎರಡು ದಿನಗಳ ಹಿಂದಷ್ಟೇ ಪ್ರಜ್ವಲ್ ರೇವಣ್ಣರನ್ನು ಸೂರಜ್ ರೂಮಿಗೆ ಶಿಫ್ಟ್ ಮಾಡಲಾಗಿದೆ. ಆ ಕೊಠಡಿಯಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಇಬ್ಬರೂ ಕೂಡಾ ಸಾಮಾನ್ಯ ಕೈದಿಗಳಂತೆ ಇದ್ದಾರೆ. ಇವರಿರುವ ರೂಮಿನಲ್ಲಿ ಟಿವಿ, ಮಂಚ ಏನೂ ಇಲ್ಲ. ಕೇವಲ ಚಾಪೆ ಹಾಗೂ ದಿಂಬು ಮಾತ್ರ ಇದೆ ಎಂದು ತಿಳಿದುಬಂದಿದೆ.
ಅಣ್ಣ, ತಮ್ಮ ಇಬ್ಬರೂ ಆಕಡೆ ಮೂಲೆಗೊಂದು ಚಾಪೆ, ಈ ಕಡೆ ಮೂಲೆಗೊಂದು ಚಾಪೆ ಹಾಕಿಕೊಂಡು ಅದರ ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದಾರೆ ಎಂದು ಗೊತ್ತಾಗಿದೆ. ಹೊರಗೆ ಏನು ನಡೆಯುತ್ತಿದೆ. ರಾಜಕೀಯ ಹೇಗಿದೆ..? ಹೊರಗೆ ಜನ ಏನು ಮಾತನಾಡುತ್ತಿದ್ದಾರೆ ಇತ್ಯಾದಿಯ ಬಗ್ಗೆ ಮಾತುಕತೆ ನಡೆದಿದೆ ಎಂದು ವರದಿಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


