ಈ ಕಾಲದಲ್ಲಿ ಆಲ್ಕೋಹಾಲ್ ಸೇವನೆ ಮಾಡಲ್ಲ ಅಂದ್ರೆ ನೀನು ಮಾಡರ್ನ್ ಅಲ್ಲ ಅಂತಾರೆ. ಆದರೂ ಆಲ್ಕೋಹಾಲ್ ಸೇವನೆ ಆರೋಗ್ಯಕ್ಕೆ ಉತ್ತಮವಲ್ಲ. ಮದ್ಯದ ಬಾಟಲಿಯ ಮೇಲೆಯೇ ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕಾರಕ ಎಂದು ಬರೆದಿದ್ದರೂ, ಮದ್ಯ ಸೇವನೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗ್ತಲೇ ಇದೆ. ಇಂತಹ ಸಂದರ್ಭದಲ್ಲಿ ಆರೋಗ್ಯ ಹದಗೆಡದಂತೆ ಮದ್ಯ ಸೇವನೆ ಮಾಡಬೇಕಾದರೆ, ವಾರದಲ್ಲಿ ಎಷ್ಟು ಬಾರಿ ಮದ್ಯ ಸೇವನೆ ಮಾಡಬಹುದು ಎನ್ನುವುದನ್ನು ತಿಳಿದುಕೊಳ್ಳೋಣ.
ನೀವು ಪಾರ್ಟಿ, ಸಮಾರಂಭಗಳಲ್ಲಿ ಈ ಕಡಿಮೆ ಅಪಾಯಕಾರಿ ಮದ್ಯವನ್ನು ಸೇವನೆ ಮಾಡುವವರಾದರೆ, ಆಸ್ಟ್ರೇಲಿಯಾ ಮತ್ತು ಫ್ರಾನ್ಸ್‌ನಲ್ಲಿ, ಪುರುಷರು ಮತ್ತು ಮಹಿಳೆಯರು ವಾರಕ್ಕೆ 10 ಕ್ಕಿಂತ ಹೆಚ್ಚು ಡ್ರಿಂಕ್ಸ್ ಸೇವಿಸಬಾರದು ಎಂದು ತಜ್ಞರು ಶಿಫಾರಸು ಮಾಡುತ್ತಾರೆ.
ಕೆನಡಾದ ನಿಯಮಗಳಿಗೆ ಅನುಸಾರವಾಗಿ ಸ್ತ್ರೀಯಾಗಲಿ ಪುರುಷರಾಗಲಿ ವಾರಕ್ಕೆ ಎರಡು ಡ್ರಿಂಕ್ ಗಳಿಗಿಂತ ಹೆಚ್ಚು ಆಲ್ಕೋಹಾಲ್ ಸೇವಿಸಬಾರದು ಎಂದು ಸೂಚಿಸಲಾಗಿದೆ.
ಭಾರತದಲ್ಲಿ ಮಾಡರೇಟ್ ಡ್ರಿಂಕಿಂಗ್ ಅನ್ನು ಸೂಚಿಸುವ ಯಾವುದೇ ಸಮಿತಿಗಳಿಲ್ಲ ಹಾಗಾಗಿ ದಿನಕ್ಕೆ ಇಂತಿಷ್ಟೇ ಡ್ರಿಂಕ್ಸ್ ಸೇವನೆ ಮಾಡಬೇಕು ಎನ್ನುವ ಕಟ್ಟುಪಾಡುಗಳನ್ನು ವಿಧಿಸಿಲ್ಲ.
ಭಾರತದಲ್ಲಿ ತಜ್ಞರ ಪ್ರಕಾರ ಒಂದು ಲೋಟ ಆಲ್ಕೋಹಾಲ್ ಕೂಡ ನಿಮ್ಮ ಆರೋಗ್ಯಕ್ಕೆ ವಿಷ ಎಂದು ಸೂಚಿಸಲಾಗುತ್ತದೆ. ಹಾಗಾಗಿ ಇಂತಿಷ್ಟೇ ಮದ್ಯ ಸೇವನೆ ಮಾಡಬಹುದು ಎನ್ನುವ ಪರಿಕಲ್ಪನೆ ಇಲ್ಲಿಲ್ಲ. ಮದ್ಯದ ಪ್ರಕಾರಗಳು ನಮ್ಮ ಸೇವನೆಯ ಅಭ್ಯಾಸಗಳಿಗೆ ದೇಹವು ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನಷ್ಟೇ ಇಲ್ಲಿ ತಜ್ಞರು ಹೇಳುತ್ತಾರೆ.
ಭಾರತೀಯರು ಮದ್ಯಪ್ರಿಯರು ಎಂಬ ಹೇಳಿಕೆಯಂತೆ ಭಾರತೀಯರು ವೈನ್, ವೋಡ್ಕಾಕ್ಕಿಂತ ವಿಸ್ಕಿ, ಜಿನ್ ಮತ್ತು ರಮ್ ನಂತಹ ಮದ ಏರಿಸುವ ಪೇಯಗಳಿಗೆ ಪ್ರಾಶಸ್ತ್ಯ ನೀಡುತ್ತಾರಂತೆ.
ದಿಲ್ಲಿಯ ಸಿಕೆ ಬಿರ್ಲಾ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಸಲಹೆಗಾರ ಡಾ ವಿಕಾಸ್ ಜಿಂದಾಲ್, ವಿಶ್ವ ಆರೋಗ್ಯ ಸಂಸ್ಥೆಯ ನಿಯಮಾನುಸಾರ ಆಲ್ಕೊಹಾಲ್ ಸೇವನೆಗೆ ಗರಿಷ್ಠ ಮಿತಿಯು ಮಹಿಳೆಯರಿಗೆ ದಿನಕ್ಕೆ ಒಂದು ಡ್ರಿಂಕ್, ಪುರುಷರಿಗೆ ದಿನಕ್ಕೆರಡು ಡ್ರಿಂಕ್ ಅಗಿದೆ ಎಂದು ಹೇಳುತ್ತಾರೆ. ಆದರೆ ಭಾರತೀಯರ ವಿಷಯದಲ್ಲಿ ಈ ಮಿತಿಗಿಂತ ಕಡಿಮೆ ಮದ್ಯಪಾನ ಸೇವಿಸುವುದು, ಇಲ್ಲವೇ ಅಪರೂಪಕ್ಕೊಮ್ಮೆ ಮದ್ಯಪಾನ ಮಾಡುವುದು ಅವರ ಆರೋಗ್ಯದ ದೃಷ್ಟಿಯಿಂದ ಉತ್ತಮ ಎಂದು ವಿಕಾಸ್ ಸೂಚಿಸುತ್ತಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q