ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC) ಸೆಪ್ಟೆಂಬರ್ 15ರಿಂದ ಅನ್ವಯವಾಗುವಂತೆ ಡಿಜಿಟಲ್ ಬಸ್ ಪಾಸ್ ವ್ಯವಸ್ಥೆ ಜಾರಿಗೊಳಿಸಿದೆ. ಈ ಡಿಜಿಟಲ್ ಬಸ್ ಪಾಸ್ ನ್ನು ಪ್ರಯಾಣಿಕರು ತಮ್ಮ ಮೊಬೈಲ್ ಫೋನ್ ನಲ್ಲಿಯೇ ಪಡೆದುಕೊಳ್ಳಬಹುದಾಗಿದೆ. ಡಿಜಿಟಲ್ ಪಾಸ್ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳೋಣ…!
ಮೊದಲು ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ Tummoc ಎಂದು ಹುಡುಕಾಟ ನಡೆಸಿ. ಆಗ ಅಲ್ಲಿ Tummoc App ದೊರಕುತ್ತದೆ. ಅದನ್ನು ಇನ್ ಸ್ಟಾಲ್ ಮಾಡಿಕೊಳ್ಳಿ.
ಬಳಿಕ ಆಪ್ ತೆರೆಯಿರಿ. ಇಂಗ್ಲಿಷ್, ಕನ್ನಡ, ಹಿಂದಿ ಭಾಷೆ ಆಯ್ಕೆಗಳು ಕಾಣಿಸುತ್ತವೆ. ಇದು ದೆಹಲಿ ಮತ್ತು ಬೆಂಗಳೂರು ಬಿಎಂಟಿಸಿ ಬಸ್ ಪಾಸ್ಗೆ ನೆರವಾಗುವ ಆಪ್. ಕನ್ನಡ ಅಥವಾ ಇಂಗ್ಲಿಷ್ ಆಯ್ಕೆ ಮಾಡಿ. ಲೊಕೆಷನ್ ಆಯ್ಕೆ ನೀಡಿ.
ಬಸ್, ಮೆಟ್ರೋ, ಡೈರೆಕ್ಟ್ ರೂಟ್, ಏರ್ಪೋರ್ಟ್ ರೈಲು ಇತ್ಯಾದಿ ಆಯ್ಕೆಗಳು ಕಾಣಿಸುತ್ತವೆ. ಅದಕ್ಕಿಂತಲೂ ಮೇಲೆ ಪಾಸ್ಗಳು ಮತ್ತು ಟಿಕೆಟ್ ಗಳು ಆಯ್ಕೆ ಇದೆ. ಅದರಲ್ಲಿ ಬಿಎಂಟಿಸಿ ಪಾಸ್ ಕ್ಲಿಕ್ ಮಾಡಿ.
ಅಲ್ಲಿ ದಿನದ ಪಾಸ್, ವಾರದ ಪಾಸ್, ತಿಂಗಳ ಪಾಸ್, ಆರ್ಡಿನರಿ ಬಸ್ ಪಾಸ್, ವಜ್ರ ಬಸ್ ಪಾಸ್, ವೋಲ್ವೋ ಪಾಸ್ಗಳು ಕಾಣಿಸುತ್ತವೆ. ನಿಮಗೆ ಯಾವ ಪಾಸ್ ಬೇಕೋ ಆ ಪಾಸ್ ಖರೀದಿಸಲು ಮುಂದಾಗಿ.
ಈ ಸಮಯದಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನೀಡಿ. ಒಟಿಪಿ ನೀಡಿ. ಇದಾದ ಬಳಿಕ ಬಯಸಿದ ಮಾಹಿತಿಯನ್ನು ಭರ್ತಿ ಮಾಡಿ. ಹಣ ಪಾವತಿಸಿದ ಬಳಿಕ ಡಿಜಿಟಲ್ ಪಾಸ್ ದೊರಕುತ್ತದೆ. ಈ ಬಸ್ ಪಾಸ್ ಅನ್ನು ಕಂಡೆಕ್ಟರ್ಗೆ ತೋರಿಸಿ. ಕೆಲವೊಮ್ಮೆ ಬಸ್ ನಿರ್ವಾಹಕ ಸೂಚಿಸಿದ ಕ್ಯೂಆರ್ ಕೋಡ್ ಗೆ ಪಾಸ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ದೃಢೀಕರಿಸಬೇಕಾಗುತ್ತದೆ.
ಬಿಎಂಟಿಸಿ ಡಿಜಿಟಲ್ ಪಾಸ್ ದರವೆಷ್ಟು?
ದಿನದ ಪಾಸ್
ಆರ್ಡಿನರಿ ಡೇ ಪಾಸ್: 70 ರೂಪಾಯಿ
ವಜ್ರ ಗೋಲ್ಡ್ ಡೇ ಪಾಸ್: 120 ರೂಪಾಯಿ
ವಾರದ ಪಾಸ್
ಆರ್ಡಿನರಿ ವೀಕ್ಲಿ ಪಾಸ್: 300 ರೂಪಾಯಿ
ಮಾಸಿಕ ಪಾಸ್
ಆರ್ಡಿನರಿ ಸರ್ವೀಸ್ ಮಂತ್ಲಿ ಪಾಸ್: 1050 ರೂಪಾಯಿ
ವಜ್ರ ಗೋಲ್ಡ್ ಮಂತ್ಲಿ ಪಾಸ್: 1800 ರೂಪಾಯಿ
ವಜ್ರ ಗೋಲ್ಡ್ ಪಾಸ್ (ಎಸಿ): 3755 ರೂಪಾಯಿ
ನೈಸ್ ರೋಡ್ ಮಂತ್ಲಿ ಪಾಸ್ (ಆರ್ಡಿನರಿ): 2200 ರೂಪಾಯಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q