nammatumakuru

    Subscribe to Updates

    Get the latest creative news from FooBar about art, design and business.

    What's Hot

    ಗರ್ಭಕಂಠದ ಕ್ಯಾನ್ಸರ್ ನಿಂದ ಎಚ್ ಪಿ ವಿ ಲಸಿಕೆ ರಕ್ಷಣೆ ನೀಡುತ್ತದೆ: ತಹಶೀಲ್ದಾರ್ ಮೋಹನಕುಮಾರಿ

    March 13, 2026

    ಹಬ್ಬಗಳ ಆಚರಣೆಯ ಮಧ್ಯೆ ಧರ್ಮಗಳನ್ನು ತರಬಾರದು:  ಶಾಂತಿ ಸಭೆಯಲ್ಲಿ ಆರ್.ಕಿರಣ್

    March 13, 2026

    ಇಂದಿರಾ ಕ್ಯಾಂಟೀನ್‌ ಗೂ ತಟ್ಟಿದ ಸಿಲಿಂಡರ್ ಕೊರತೆ ಬಿಸಿ; ತುಮಕೂರಿನಲ್ಲಿ ಕ್ಯಾಂಟೀನ್ ಮುಚ್ಚುವ ಆತಂಕ

    March 13, 2026
    Facebook Twitter Instagram
    ಟ್ರೆಂಡಿಂಗ್
    • ಗರ್ಭಕಂಠದ ಕ್ಯಾನ್ಸರ್ ನಿಂದ ಎಚ್ ಪಿ ವಿ ಲಸಿಕೆ ರಕ್ಷಣೆ ನೀಡುತ್ತದೆ: ತಹಶೀಲ್ದಾರ್ ಮೋಹನಕುಮಾರಿ
    • ಹಬ್ಬಗಳ ಆಚರಣೆಯ ಮಧ್ಯೆ ಧರ್ಮಗಳನ್ನು ತರಬಾರದು:  ಶಾಂತಿ ಸಭೆಯಲ್ಲಿ ಆರ್.ಕಿರಣ್
    • ಇಂದಿರಾ ಕ್ಯಾಂಟೀನ್‌ ಗೂ ತಟ್ಟಿದ ಸಿಲಿಂಡರ್ ಕೊರತೆ ಬಿಸಿ; ತುಮಕೂರಿನಲ್ಲಿ ಕ್ಯಾಂಟೀನ್ ಮುಚ್ಚುವ ಆತಂಕ
    • ಚಿಕ್ಕನಾಯಕನಹಳ್ಳಿಯಲ್ಲಿ ಅಡುಗೆ ಅನಿಲ ಅಭಾವ: ಕಾಳಸಂತೆ ಮಾರಾಟ ಆರೋಪಿಸಿ ಗ್ರಾಹಕರ ಪ್ರತಿಭಟನೆ
    • ಪಾವಗಡ: ಎಲ್‌ ಪಿಜಿ ಸಿಲಿಂಡರ್‌ ಗಾಗಿ ಗ್ರಾಹಕರ ಪರದಾಟ; ವಿತರಣಾ ಕೇಂದ್ರದ ಮುಂದೆ ಕ್ಯೂ
    • ಒಂಟಿ ವೃದ್ಧೆಯ ಕೊಲೆ ಪ್ರಕರಣ: 24 ಗಂಟೆಗಳೊಳಗೆ ಆರೋಪಿಯನ್ನು ಬಂಧಿಸಿದ ತುಮಕೂರು ಪೊಲೀಸರು | 11 ಲಕ್ಷ ಮೌಲ್ಯದ ಚಿನ್ನಾಭರಣ ವಶ
    • ತುಮಕೂರಿನಿಂದ ನಿರ್ಗಮಿಸುವ–ಆಗಮಿಸುವ ಹಲವು ರೈಲು ಸಂಚಾರಗಳ ರದ್ದು: ಮಾಹಿತಿಗಳಿಗಾಗಿ ಈ ಸುದ್ದಿ ಓದಿ
    • ಭೂಸ್ವಾಧೀನದಲ್ಲಿ ರೈತರಿಗೆ ನಷ್ಟ ತಪ್ಪಿಸಲು ‘ಮಾರ್ಗಸೂಚಿ ದರ’ ಪರಿಷ್ಕರಣೆ ಅಗತ್ಯ: ಸಚಿವ ಕೃಷ್ಣ ಬೈರೇಗೌಡ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಗರ್ಭಕಂಠದ ಕ್ಯಾನ್ಸರ್ ನಿಂದ ಎಚ್ ಪಿ ವಿ ಲಸಿಕೆ ರಕ್ಷಣೆ ನೀಡುತ್ತದೆ: ತಹಶೀಲ್ದಾರ್ ಮೋಹನಕುಮಾರಿ
    ಜಿಲ್ಲಾ ಸುದ್ದಿ March 13, 2026

    ಗರ್ಭಕಂಠದ ಕ್ಯಾನ್ಸರ್ ನಿಂದ ಎಚ್ ಪಿ ವಿ ಲಸಿಕೆ ರಕ್ಷಣೆ ನೀಡುತ್ತದೆ: ತಹಶೀಲ್ದಾರ್ ಮೋಹನಕುಮಾರಿ

    By adminMarch 13, 2026No Comments2 Mins Read

    ಸರಗೂರು:  ಎಚ್ ಪಿ ವಿ ಲಸಿಕೆಯು ಗರ್ಭಕಂಠದ ಕ್ಯಾನ್ಸರ್ ಗೆ ಮುಖ್ಯ ಕಾರಣವಾದ ಹ್ಯೂಮನ್ ಪ್ಯಾಪಿಲೋಮ ವೈರಸ್ ಸೋಂಕಿನಿಂದ ರಕ್ಷಣೆ ನೀಡುತ್ತದೆ. ಈ ಅಭಿಯಾನವು ಹದಿಹರೆಯದ ಬಾಲಕಿಯರ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಹೆಜ್ಜೆಯಾಗಿದ್ದು ಎಂದು ತಹಶೀಲ್ದಾರ್ ಮೋಹನಕುಮಾರಿ ತಿಳಿಸಿದರು.

    ಪಟ್ಟಣದ ಸಾರ್ವಜನಿಕ ಸಮುದಾಯ ಆಸ್ಪತ್ರೆಯಲ್ಲಿ ಶುಕ್ರವಾರದಂದು ತಾಲೂಕು ಆರೋಗ್ಯಾಧಿಕಾರಿ ಇಲಾಖೆ ದಿಂದ 14 ವರ್ಷದ ಹೆಣ್ಣು ಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ನಿರೋಧಕ(ಎಚ್ ಪಿ ವಿ) ಲಸಿಕೆ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


    Provided by
    Provided by

    ಹ್ಯೂಮನ್ ಪ್ಯಾಪಿಲೋಮ ವೈರಸ್ ಗರ್ಭಕಂಠ ಸೇರಿದಂತೆ ಅನೇಕ ಮಾದರಿಯ ಕ್ಯಾನ್ಸರ್‌ ಗೆ ಕಾರಣವಾಗುತ್ತದೆ. ಲಸಿಕೆ ಹಾಕಿಸಿಕೊಳ್ಳುವುದರಿಂದ ಕ್ಯಾನ್ಸರ್‌ ಸೇರಿದಂತೆ ಇತರ ಗಂಭೀರ ಕಾಯಿಲೆಗಳು ಬರದಂತೆ ತಡೆಯಬಹುದು’ ಎಂದರು.

    ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಮಾತನಾಡಿ, ಅಭಿಯಾನದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 14ರಿಂದ 15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ತಾಲ್ಲೂಕಿನ ಎಲ್ಲಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುವುದು.

    ಫಲಾನುಭವಿಗಳು ಗುರುತಿನ ಚೀಟಿಯೊಂದಿಗೆ ಮೊಬೈಲ್ ಫೋನ್‌ ಸಂಖ್ಯೆ, ಆಧಾರ್ ಕಾರ್ಡ್ ಜತೆಗೆ ಆಸ್ಪತ್ರೆಗೆ ಬಂದು ಲಸಿಕೆ ಪಡೆಯಬಹುದು. ಹೆಣ್ಣು ಮಕ್ಕಳ ಸದೃಢ ಆರೋಗ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಎಲ್ಲ ಪೋಷಕರು ಸಹಕರಿಸಬೇಕು’ ಎಂದರು.

    ಗರ್ಭಕಂಠದ ಕ್ಯಾನ್ಸರ್ ಮಹಿಳೆಯರ ಆರೋಗ್ಯಕ್ಕೆ ಇರುವ ಪ್ರಮುಖ ಬೆದರಿಕೆಗಳಲ್ಲಿ ಒಂದು, ಆದರೆ ಇದು ತಡೆಗಟ್ಟಬಹುದಾದ ಕ್ಯಾನ್ಸರ್‌’ಗಳಲ್ಲಿ ಒಂದಾಗಿದೆ. ಇಂದು ನಾವು, ಹ್ಯೂಮನ್ ಪ್ಯಾಪಿಲೋಮವೈರಸ್ (ಎಚ್‌ಪಿವಿ) ಲಸಿಕೆಗೆ ಆದ್ಯತೆ ನೀಡುವ ಮೂಲಕ, ನಾವು ಕೇವಲ ವೈದ್ಯಕೀಯ ಚಿಕಿತ್ಸೆಯನ್ನು ನೀಡುತ್ತಿಲ್ಲ, ಬದಲಿಗೆ, ನಾವು “ತಡೆಗಟ್ಟಬಹುದಾದ” ಲಸಿಕೆಯ ಮೇಲೆ ಹೂಡಿಕೆ ಮಾಡುತ್ತಿದ್ದೇವೆ.

    ಪ್ರಸ್ತುತ ಈ ಲಸಿಕೆಯನ್ನು14 ವರ್ಷ ತುಂಬಿದ ಹಾಗೂ 15 ವರ್ಷ ವಯಸ್ಸಿನ ಒಳಗಿನ ಹೆಣ್ಣು ಮಕ್ಕಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸಾರ ನೀಡಲಾಗುವುದು. ಲಸಿಕಾಕರಣವನ್ನು ರಾಷ್ಟ್ರೀಯ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಮಾರ್ಗಸೂಚಿ ಅನುಸಾರ ಆಯೋಜನೆ ಮಾಡಲಾಗುತ್ತಿದೆ. ಲಸಿಕೆ ಪಡೆದವರ ಹೆಸರನ್ನು ‘ಯೂ-ವಿನ್‘ ತಂತ್ರಾಂಶದಲ್ಲಿ ನೋಂದಣಿ ಮಾಡಲಾಗುದು’ ಎಂದು ಮಾಹಿತಿ ನೀಡಿದರು.  ಲಸಿಕೆ ಪಡೆದ ಮಕ್ಕಳಿಗೆ ಪ್ರಮಾಣಪತ್ರವನ್ನು ವಿತರಿಸಿದರು.

    ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷೆ ಚೈತ್ರ ಸ್ವಾಮಿ, ಉಪಾಧ್ಯಕ್ಷ ಶಿವಕುಮಾರ್, ಇಓ ಪ್ರೇಮ್ ಕುಮಾರ್, ಆಡಳಿತಾಧಿಕಾರಿ ಪಾರ್ಥ ಸಾರಥಿ, ಡಾ.ಭಾಗ್ಯಲಕ್ಷ್ಮಿ, ಡಾ.ಜಯಮಾಲಾ, ಡಾ.ಪ್ರಿಯಾಂಕಾ, ಡಾ.ಪೂರ್ಣಿಮಾ, ರವಿರಾಜ್, ಜಗದೀಶ್, ಪ್ರಗತಿ ವಿದ್ಯಾಸಂಸ್ಥೆ ಶಿಕ್ಷಕ ಸುರೇಶ್, ಇನ್ನೂ ಮುಖಂಡರು ಸೇರಿದಂತೆ ಸಿಬ್ಬಂದಿ ವರ್ಗದವರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಶಾಲೆಯ ಮಕ್ಕಳು ಉಪಸ್ಥಿತರಿದ್ದರು.

    ವರದಿ: ಹಾದನೂರು ಚಂದ್ರ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಹಬ್ಬಗಳ ಆಚರಣೆಯ ಮಧ್ಯೆ ಧರ್ಮಗಳನ್ನು ತರಬಾರದು:  ಶಾಂತಿ ಸಭೆಯಲ್ಲಿ ಆರ್.ಕಿರಣ್

    March 13, 2026

    ಮಾ.18 ರಿಂದ ಏ.2ರವರಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ:  ವ್ಯವಸ್ಥಿತ, ಸುಸೂತ್ರ, ಪಾರದರ್ಶಕ  ಪರೀಕ್ಷೆಗೆ ಜಿಲ್ಲಾಧಿಕಾರಿ ಡಾ.‌ಆನಂದ‌ ಕೆ. ಸೂಚನೆ

    March 11, 2026

    ಸಾಮಾಜಿಕ ಜಾಲತಾಣಗಳಿಂದ ನಿಜವಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬ ನಾಗರಿಕನಿಗೂ ಲಭಿಸಿದೆ: ಡಾ.ಎ.ಎಸ್. ಬಾಲಸುಬ್ರಮಣ್ಯ

    March 11, 2026

    Leave A Reply Cancel Reply

    Our Picks

    ಕರೆಯದೇ ಮದುವೆಗೆ ಬಂದ್ರೆ ಹುಷಾರ್: 3 ತಿಂಗಳು ಜೈಲು, 5 ಸಾವಿರ ದಂಡ: ಪೋಸ್ಟರ್ ಕಂಡು ಜನ ಶಾಕ್

    March 12, 2026

    LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ 25 ದಿನಗಳ ಅಂತರ ಕಡ್ಡಾಯ!

    March 10, 2026

    ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿರುವ ಕನ್ನಡಿಗರ ನೆರವಿಗೆ ಸಹಾಯವಾಣಿ ಆರಂಭ

    March 3, 2026

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಗರ್ಭಕಂಠದ ಕ್ಯಾನ್ಸರ್ ನಿಂದ ಎಚ್ ಪಿ ವಿ ಲಸಿಕೆ ರಕ್ಷಣೆ ನೀಡುತ್ತದೆ: ತಹಶೀಲ್ದಾರ್ ಮೋಹನಕುಮಾರಿ

    March 13, 2026

    ಸರಗೂರು:  ಎಚ್ ಪಿ ವಿ ಲಸಿಕೆಯು ಗರ್ಭಕಂಠದ ಕ್ಯಾನ್ಸರ್ ಗೆ ಮುಖ್ಯ ಕಾರಣವಾದ ಹ್ಯೂಮನ್ ಪ್ಯಾಪಿಲೋಮ ವೈರಸ್ ಸೋಂಕಿನಿಂದ ರಕ್ಷಣೆ…

    ಹಬ್ಬಗಳ ಆಚರಣೆಯ ಮಧ್ಯೆ ಧರ್ಮಗಳನ್ನು ತರಬಾರದು:  ಶಾಂತಿ ಸಭೆಯಲ್ಲಿ ಆರ್.ಕಿರಣ್

    March 13, 2026

    ಇಂದಿರಾ ಕ್ಯಾಂಟೀನ್‌ ಗೂ ತಟ್ಟಿದ ಸಿಲಿಂಡರ್ ಕೊರತೆ ಬಿಸಿ; ತುಮಕೂರಿನಲ್ಲಿ ಕ್ಯಾಂಟೀನ್ ಮುಚ್ಚುವ ಆತಂಕ

    March 13, 2026

    ಚಿಕ್ಕನಾಯಕನಹಳ್ಳಿಯಲ್ಲಿ ಅಡುಗೆ ಅನಿಲ ಅಭಾವ: ಕಾಳಸಂತೆ ಮಾರಾಟ ಆರೋಪಿಸಿ ಗ್ರಾಹಕರ ಪ್ರತಿಭಟನೆ

    March 13, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.