ತಿಪಟೂರು: ಕಲ್ಪತರು ವಿದ್ಯಾ ಸಂಸ್ಥೆ ವತಿಯಿಂದ ಜನವರಿ 9ರಂದು ಗುರುವಾರ ಕಲ್ಪತರು ಕಾಲೇಜು ಕ್ರೀಡಾಂಗಣದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಎಚ್.,ಜಿ.ಸುಧಾಕರ್ ತಿಳಿಸಿದರು.
ಕಲ್ಪತ ಕಲ್ಪತರು ತಾಂತ್ರಿಕ ಕಾಲೇಜ್ ಕಲ್ಪತರು ಪಿಯು ಕಾಲೇಜ್ ವತಿಯಿಂದ ಸುಮಾರು ಹೆಸರಾಂತ 75 ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದು, ತಿಪಟೂರ್ ತಾಲೂಕುಹುಳಿಯಾರು ಅರಸೀಕೆರೆ ತುರುವೇಕೆರೆ ತಾಲೂಕಿಗೆ ಸೇರಿದ ನಿರುದ್ಯೋಗಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಅವರು ತಿಳಿಸಿದರು.
ಈ ಉದ್ಯೋಗ ಮೇಳದಲ್ಲಿ 3,000 ಜನ ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಈಗಾಗಲೇ ಕೆಲವಾರು ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿರುತ್ತಾರೆ. ಸಂದರ್ಶನಕ್ಕೆ ಬರುವವರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಗ್ರಾಮೀಣ ನಿರುದ್ಯೋದ್ಯೋಗಿಗಳಿಗೆ ಈ ಉದ್ಯೋಗವು ಮೇಳವು ನೆರವಾಗಲಿದೆ ಎಂದು ತಿಳಿಸಿದರು.
ಈ ಉದ್ಯೋಗ ಮೇಳವನ್ನು ಶಾಸಕ ಕೆ.ಷಡಕ್ಷರಿ ಉದ್ಘಾಟಿಸುವರು, ಸಂಸ್ಥೆಯ ಅಧ್ಯಕ್ಷ ಕೆ.ಪಿ. ತಿಪ್ಪೆರುದ್ರಪ್ಪನವರು ಅಧ್ಯಕ್ಷತೆ ವಹಿಸುವರು, ಬದರಗಡ್ಡೆ ಉಪಸ್ಥಿತರಿರುವರು, ಸಂಸ್ಥೆಯ ಉಪಾಧ್ಯಕ್ಷರು ಬಾಗೇಪಲ್ಲಿ ನಟರಾಜ್, ಕಾರ್ಯದರ್ಶಿ ಸಂಗಮೇಶ್, ಪ್ರಾಂಶುಪಾಲ ಚಿತ್ತರಂಜನ್, ಪ್ಲೇಸ್ಮೆಂಟ್ ಅಧಿಕಾರಿ ಕಿರಣ್ ಇದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx