ತುಮಕೂರು: ತುಮಕೂರಿನ ಸಿದ್ದಗಂಗಾ ಮಠದಲ್ಲಿ ಭಾರೀ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡು ಮಠದ ಮಕ್ಕಳಲ್ಲಿ ಒಂದು ರೀತಿ ಆತಂಕ ಮೂಡಿಸಿತ್ತು.
ನಂತರ ಮಠದ ಸಿಬ್ಬಂದಿಗಳು ತಕ್ಷಣ ಊರಗತಜ್ಞರಾದ ಕಾರ್ತಿಕ್ ಮತ್ತು ಸೂರ್ಯ ಅವರಿಗೆ ವಿಷಯ ತಿಳಿಸಿದರು. ಸ್ಥಳಕ್ಕೆ ಬಂದ ಉರಗ ತಜ್ಞರು ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಸುಮಾರು ಎಂಟು ಅಡಿ ಉದ್ದದ ಹೆಬ್ಬಾವು , ಮಠದ ಆವರಣದಲ್ಲಿರುವ ದೇವಸ್ಥಾನಕ್ಕೆ ಕಿಟಕಿ ಮೂಲಕ ಪ್ರವೇಶಿಸಿದೆ. ಮಠದ ಸಿಬ್ಬಂದಿ ಇದನ್ನು ಕಂಡು ಕೆಲಕಾಲ ಗಾಬರಿಗೊಂಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
————————————