ಹುಳಿಯಾರು: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಚಿಕ್ಕನಾಯಕನಹಳ್ಳಿ ಇವರ ವತಿಯಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಂದನಕೆರೆ ಹೋಬಳಿಗೆ ಸೇರಿದ ಸಬ್ಬೇನಹಳ್ಳಿ, ಹರೇನಹಳ್ಳಿ, ಚೌಳಕಟ್ಟೆ ಗ್ರಾಮಗಳಲ್ಲಿನ ಮಿಶ್ರತಳಿ ಹಸುಗಳ ಹಾಲು ಕರೆಯುವ ಸ್ಪರ್ಧೆಯನ್ನು ಡಿಸೆಂಬರ್ 1 ಮತ್ತು 2 ರಂದು ಏರ್ಪಡಿಸಲಾಗಿದೆ.
ಡಿ.1 ರಂದು ಸಂಜೆ 5 ರಿಂದ 6 ಗಂಟೆಯವರೆಗೆ ಸಬ್ಬೇನಹಳ್ಳಿ, ಹರೇನಹಳ್ಳಿ, ಚೌಳಕಟ್ಟೆ ಹಾಗೂ ಡಿ.2 ರಂದು ಬೆಳಗ್ಗೆ 6 ರಿಂದ 7ಗಂಟೆಯವರೆಗೆ ಸಬ್ಬೇನಹಳ್ಳಿ, ಹರೇನಹಳ್ಳಿ, ಚೌಳಕಟ್ಟೆಯಲ್ಲಿ ಹಾಲು ಕರೆಯುವ ಸ್ಪರ್ಧೆ ನಡೆಯಲಿದೆ.
ಆಸಕ್ತ ಹಾಲು ಉತ್ಪಾದಕರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಪ್ರಥಮ ಬಹುಮಾನವಾಗಿ 11 ಸಾವಿರ ರೂ., ಪ್ರಶಸ್ತಿ ಪತ್ರ ಮತ್ತು ಟ್ರೋಪಿ, ದ್ವಿತೀಯ ಬಹುಮಾನ 8,500 ರೂ., ಪ್ರಶಸ್ತಿ ಪತ್ರ ಮತ್ತು ಟ್ರೋಪಿ ಹಾಗೂ ತೃತೀಯ ಬಹುಮಾನವಾಗಿ 6,500 ರೂ., ಪ್ರಶಸ್ತಿ ಪತ್ರ ಹಾಗೂ ಟ್ರೋಫಿ ನೀಡಲಾಗುವುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


