ಸರಗೂರು: ದುಷ್ಟರ ಅಟ್ಟಹಾಸಕ್ಕೆ ಸುಮಾರು 20 ಸಾವಿರ ರೂಪಾಯಿ ಬೆಲೆ ಬಾಳುವ ಹುಲ್ಲಿನ ಮೇದ ಸುಟ್ಟು ಭಸ್ಮವಾದ ಘಟನೆ ತಾಲೂಕಿನ ಕೆ ಬೆಳತೂರು ಗ್ರಾಮದಲ್ಲಿ ನಡೆದಿದೆ.
ಮಧ್ಯ ರಾತ್ರಿ ಸುಮಾರು 2 ಗಂಟೆ ವೇಳೆಗೆ ಯಾರೋ ಕಿಡಿಗೇಡಿಗಳು ಹುಲ್ಲಿನ ಮೇದಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಪರಿಣಾಮವಾಗಿ ರೈತ ಸಿದ್ದನಾಯಕ ಎಂಬವರಿಗೆ ತೀವ್ರ ನಷ್ಟವಾಗಿದ್ದು, ಇದೀಗ ಅವರು ಕಣ್ಣೀರು ಹಾಕುತ್ತಾ ಕುಳಿತುಕೊಳ್ಳುವಂತಾಗಿದೆ.
ಘಟನೆಯಿಂದ ನೊಂದಿರುವ ಸಿದ್ದನಾಯಕ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ, ನಾನು ಒಬ್ಬ ಹುಟ್ಟಿನಿಂದಲೂ ವಿಶೇಷಚೇತನನಾಗಿದ್ದೇನೆ. ನಮಗೆ ಯಾವುದೇ ರೀತಿಯ ಸ್ವಂತ ಜಮೀನಾಗಲಿ, ಆಸ್ತಿಯಾಗಲಿ ಇಲ್ಲ. ಬೇರೆಯವರ ಜಮೀನಿನಲ್ಲಿ ಹುಳಿಮೆ ಮಾಡಿ ಬದುಕು ನಡೆಸುತ್ತಿದ್ದೇವೆ. ವಾರದ ಹಿಂದೆಯಷ್ಟೇ ಭತ್ತವನ್ನು ಹೊಕ್ಕಣೆ, ನಡೆಸಿ ಹುಲ್ಲನ್ನು ಸಂಗ್ರಹಿಸಲಾಗಿತ್ತು . ಆದರೆ ಇಂದು ಕೀಡಿಗೇಡಿಗಳು ಈ ರೀತಿಯ ಕೆಲಸ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿ ಕಣ್ಣೀರು ಹಾಕಿದ್ದಾರೆ.
ಜಮೀನಿನಲ್ಲಿ ಕೆಲಸ ಮಾಡಿದ ಕೆಲಸಗಾರರಿಗೆ ಇನ್ನೂ ಸಹ ಸಂಬಳ ನೀಡಿಲ್ಲ. ಈ ಹುಲ್ಲಿನ ಮೇದವನ್ನು ಮಾರಿ ಕೆಲಸಗಾರರಿಗೆ ಹಣ ಕೋಡಬೇಕಿತ್ತು. ನನಗೆ ಮುಂದೆ ಏನು ಮಾಡಬೇಖು ಎನ್ನುವುದು ತೋಚುತ್ತಿಲ್ಲ. ಹೇಗಾದರೂ ಮಾಡಿ ನನಗೆ ಪರಿಹಾರ ಒದಗಿಸಿ ಕೊಡಿ. ಹಾಗೆಯೇ ಹುಲ್ಲಿನ ಮೇದಕ್ಕೆ ಬೆಂಕಿ ಹಾಕಿದವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy