ತನ್ನ ಪತ್ನಿಗೆ ಹಲ್ಲೆ ಮಾಡುವ ದೃಶ್ಯ ಕಂಡು, ಪತಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಚಂದ್ರಲೇಔಟ್ ನ ಗಂಗೊಂಡನಹಳ್ಳಿಯಲ್ಲಿ ನಡೆದಿದೆ. ಮುದಾಸೀರ್ ಖಾನ್ ಮೃತ ವ್ಯಕ್ತಿ.
ನನ್ನ ಮೇಲೆ ವಾಹಿದ್ ಅಹ್ಮದ್ ಎಂಬಾತ ಮಚ್ಚಿನಿಂದ ಹಲ್ಲೆ ಮಾಡಲು ಮುಂದಾದರು. ಇದನ್ನ ನೋಡಿದ ನನ್ನ ಪತಿ ಮುದಾಸೀರ್ ಖಾನ್ ಗೆ ಹಾರ್ಟ್ ಅಟ್ಯಾಕ್ ಆಗಿ ಮೃತಪಟ್ಟಿದ್ದಾರೆ ಎಂದು ಗಂಡನ ಸಾವಿನ ಬಗ್ಗೆ ಮಹಿಳೆ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ವಾಹಿದ್ ಹಾಗೂ ಆತನ ಸಹೋದರ ಮತಿನ್ ಎಂಬುವವರನ್ನು ಬಂಧಿಸಲಾಗಿದೆ.


