ತುಮಕೂರು: ಹೆಂಡತಿ ಕಾಟದಿಂದ ಬೇಸತ್ತು ಎಂಜಿನಿಯರ್ ಒಬ್ಬರು ಅಣ್ಣನಿಗೆ ಆಡಿಯೋ ಮೆಸೇಜ್ ಕಳುಹಿಸಿ ಆತ್ಮಹತ್ಯೆಗೆ ಶರಣಾದ ಘಟನೆ ತುಮಕೂರಿನಲ್ಲಿ ನಡೆದಿದೆ. ಮೃತನನ್ನು ಮಂಜುನಾಥ್ ಎಂದು ಗುರುತಿಸಲಾಗಿದ್ದು, ಇವರು ಬೆಂಗಳೂರು ಮೆಟ್ರೊದಲ್ಲಿ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದ್ದರು.
ಕಳೆದ 9 ವರ್ಷಗಳ ಹಿಂದೆ ಮಂಜುನಾಥ್ ತುರುವೆಕೆರೆ ಮೂಲದ ಪ್ರಿಯಾಂಕಾ ಯಾನೆ ಪವಿತ್ರಾಳನ್ನ ಮದುವೆಯಾಗಿದ್ದರು. ಮದುವೆ ನಂತರ ಮಂಜುನಾಥ್ ಗೆ ಪತ್ನಿ ಪವಿತ್ರಾ ಮಾನಸಿಕ ಕಿರುಕುಳ ನೀಡುತ್ತಿದ್ದಳು. ಇದರಿಂದ ಮನನೊಂದು ಮಂಜುನಾಥ್ ಕೆಬಿ ಕ್ರಾಸ್ ನ ಕುದ್ರುಪಾಳ್ಯದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಾಯೋ ಮುನ್ನ ಮುಂಜುನಾಥ್ ತನ್ನ ಅಣ್ಣನಿಗೆ ಆಡಿಯೋ ಮೆಸೇಜ್ ಕಳುಹಿಸಿದ್ದಾರೆ. ಆ ಆಡಿಯೊದಲ್ಲಿ, ನನಗೆ ಅವಳ ಜೊತೆ ಜೀವನ ಮಾಡೋಕೆ ಆಗ್ತಾ ಇಲ್ಲ. ಆ ಮನೆಹಾಳಿಯಿಂದ ನಾನು ಸಾಯ್ತಾ ಇದ್ದೀನಿ. ನನ್ನ ಮಗಳನ್ನ ಚೆನ್ನಾಗಿ ನೋಡಿಕೊಳ್ಳೋಕೆ ಹೇಳು. ಯಾರು ಬೇಜಾರ್ ಮಾಡ್ಕೊಬೇಡಿ ಕಣ್ರೋ ಪ್ಲೀಸ್. ನಾವು ಕೂಲಿ ಮಾಡ್ಕೊಂಡ್ ಜೀವನ ಮಾಡುವವರಂತೆ. ಹಳ್ಳಿಗೆ ಬರಲ್ಲ ಅಂದೊಳನ್ನ ಯಾಕಪ್ಪ ನನಗೆ ಮದುವೆ ಮಾಡಿದ್ರು. ಮೈಸೂರಲ್ಲಿ ಯಾರನ್ನೋ ನೋಡಿದ್ಲಂತೆ, ಅವ್ರನ್ನೇ ಆಗ್ಬೆಕಿತ್ತಂತೆ. ಪೊಲೀಸ್ ಗೆ ಹೇಳ್ಬೇಡಿ,ಪೋಸ್ಟ್ ಮಾರ್ಟಮ್ ಮಾಡಿ ಬಿಡ್ತಾರೆ ಎಂದು ತಿಳಿಸಿದ್ದಾರೆ.


