ಕೊರಟಗೆರೆ: ಗುಡಿಸಲಿಗೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಅತ್ತೆ ಸೊಸೆ ಗಾಯಗೊಂಡು, ಗುಡಿಸಲಿದ್ದ ನಾಲ್ಕು ಮೇಕೆ ಹಾಗೂ ದವಸ ಧಾನ್ಯ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಕೊರಟಗೆರೆ ತಾಲೂಕಿನ ಬಿಡಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿ ಬಿ ಪಾಳ್ಯ ಗ್ರಾಮದಲ್ಲಿ ನಡೆದಿದೆ.
ಕೊರಟಗೆರೆ ತಾಲೂಕಿನ ಬಿಡಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿ.ಬಿ.ಪಾಳ್ಯ ಗ್ರಾಮದ ನಿವಾಸಿ ಶಿಲ್ಪಾ ಜಯರಾಮ್ ಅವರ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಪರಿಣಾಮವಾಗಿ ಗುಡಿಸಲಲ್ಲಿದ್ದ ನಾಲ್ಕು ಮೇಕೆಗಳು, ಧವಸ ಧಾನ್ಯ ಸೇರಿದಂತೆ ಎಲ್ಲವೂ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.
ಮೇಕೆಗಳನ್ನು ಕಾಪಾಡಲು ಹೋದ ಅತ್ತೆ ಸೊಸೆ ಇಬ್ಬರಿಗೂ ಬೆಂಕಿ ತಗುಲಿ ಕೈ, ಕಾಲು ಕೆನ್ನೆಗೆ ಗಾಯಗಳಾಗಿವೆ. ಇದನ್ನು ಕಂಡ ಸ್ಥಳೀಯರು ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಿದ್ದಾರೆ.
ಇನ್ನು ಬಡ ಕುಟುಂಬದ ಮಹಿಳೆಯರಿಬ್ಬರೂ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ . ಕುಟುಂಬದಲ್ಲಿ ಅತ್ತೆ ಸೊಸೆ ಮಗ ಹಾಗೂ ಇಬ್ಬರು ಶಾಲೆಗೆ ಹೋಗುವ ಮಕ್ಕಳಿದ್ದರು. ಇದೀಗ ಗುಡಿಸಲು ಬೆಂಕಿಗೆ ಆಹುತಿಯಾದ ಪರಿಣಾಮ ಕುಟುಂಬ ಕಂಗಾಲಾಗಿದೆ.
ಸರ್ಕಾರ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಬಡ ಕುಟುಂಬಕ್ಕೆ ಆಸರೆ ನೀಡಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್ ., ಕೊರಟಗೆರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4