ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಅವರು ತುಂಬಾ ಬುದ್ಧಿವಂತರು. ಅವರಷ್ಟು ಬುದ್ಧಿವಂತ ನಾನಲ್ಲ ಎಂದು ಚಲುವರಾಯಸ್ವಾಮಿ ಟಾಂಗ್ ನೀಡಿದ್ದರು.
ಚಲುವಣ್ಣ ನಾಟಿಯನ್ನು ಅಡುಗೆಯಲ್ಲಿ ಇಟ್ಟುಕೊಳ್ಳಬೇಕೆಂಬ ಸುಮಲತಾ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ನಮ್ಮ ಜಿಲ್ಲೆಯ, ಮಣ್ಣಿನ ಒಬ್ಬರನ್ನು ಅಭ್ಯರ್ಥಿ ಮಾಡುತ್ತೇವೆ ಎಂದಿದ್ದೆ.
ಅದಕ್ಕೆ ಸುಮಲತಾ ಅವರು ಏನು ವಿವರಣೆ ಕೊಡುತ್ತಾರೆ ಕೊಡಲಿ. ಅವರು ಸಂಸದರು, ರಾಷ್ಟ್ರೀಯ ಪಕ್ಷದಲ್ಲಿ ಟಿಕೆಟ್ ಗೆ ಫೈಟ್ ಮಾಡುತ್ತಿದ್ದಾರೆ ಒಳ್ಳೆಯದಾಗಲಿ ಎಂದರು.
ಪಾರ್ಲಿಮೆಂಟ್ ಗೆ ಯಾರು ಯಾವಾಗ ಸೂಟ್ ಹಾಕುತ್ತಾರೆ ಎಂದು ನಿರ್ಧಾರ ಮಾಡೋದು ಜನ. ನಾನು, ಸುಮಲತಾ, ಕುಮಾರಸ್ವಾಮಿ ಒಬ್ಬರ ಹೆಸರನ್ನು ಬರೆದು ಘೋಷಣೆ ಮಾಡುವ ಕಾಲ ಅಲ್ಲ. ಇದು ಪ್ರಜಾಪ್ರಭುತ್ವದ ಕಾಲ. ಈ ಜಿಲ್ಲೆಯ ಜನರೇ ತೀರ್ಮಾನ ಮಾಡಬೇಕಾಗಿದೆ ಎಂದರು.
ಪಾರ್ಲಿಮೆಂಟ್ ಸ್ಟ್ರಾಂಗ್ ಇದ್ದವರು ಹೋಗಬೇಕೆಂದು ಅವರು ಹೇಳಿದ್ದಾರೆ. ಯಾರು ಯಾವ ಕಾಲದಲ್ಲಿ ಪಾರ್ಲಿಮೆಂಟ್‌ಗೆ ಹೋಗಿ ಸ್ಟ್ರಾಂಗ್ ಆಗಿದ್ದಾರೆ ಎಂಬ ಇತಿಹಾಸ ಗೊತ್ತಿದೆ. ಜನರು ಯಾರು ಹೋಗಬೇಕೆಂದು ತೀರ್ಮಾನ ಮಾಡುತ್ತಾರೆ. ಜನರು ತೀರ್ಮಾನ ಮಾಡುವವರೆಗೆ ತಡೆದುಕೊಂಡು ಇರಬೇಕು ಎಂದು ಹೇಳಿದರು.


